ವೀರಾಜಪೇಟೆ, ಜೂ. ೧೩: ಗಡಿಭಾಗವಾದ ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಬೆಂಗಳೂರಿನಿAದ ರೋಗಿಯನ್ನು ಕೇರಳ ರಾಜ್ಯಕ್ಕೆ ಕೊಂಡೊಯ್ದು ರಾಜ್ಯಕ್ಕೆ ಹಿಂತಿರುಗುತ್ತಿದ್ದ (ಕೆಎ-೫೦ ಎಜಿ-೦೧೭೯) ನೋಂದಣಿಯ ತುರ್ತು ಚಿಕಿತ್ಸಾ ವಾಹನಕ್ಕೆ ಸಂಜೆ ನಾಲ್ಕು ಗಂಟೆ ವೇಳೆಗೆ ಅಪರಿಚಿತ ವಾಹನವೊಂದು ಡಿಕ್ಕಿಪಡಿಸಿದೆ. ಪರಿಣಾಮ ತುರ್ತು ಚಿಕಿತ್ಸಾ ವಾಹನದ ಚಾಲಕ ಗಾಯ ಗೊಂಡಿದ್ದು, ಕೇರಳ ರಾಜ್ಯದ ಇರಿಟ್ಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತಕ್ಕೀಡಾದ ತುರ್ತು ಚಿಕಿತ್ಸಾ ವಾಹನವು ನಜ್ಜುಗುಜ್ಜಾಗಿದೆ. ಘಟನೆಗೆ ಸಂಬAಧಿಸಿದAತೆ ಇದುವರೆಗೆ ಪ್ರಕರಣ ದಾಖಲಾಗಿಲ್ಲ. ಸ್ಥಳಕ್ಕೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಅಪಘಾತಪಡಿಸಿರುವ ವಾಹನ ಯಾವುದು ಎಂದು ತಿಳಿದುಬಂದಿಲ್ಲ. - ಕೆ.ಕೆ.ಎಸ್.