ಮಡಿಕೇರಿ, ಜೂ. ೧೩: ಕೊಡಗು ಜಿಲ್ಲೆಯಾದ್ಯಂತ ನಿನ್ನೆಯಿಂದ ಮಳೆಗಾಲದ ನೈಜ ಚಿತ್ರಣ ಕಂಡುಬAದಿದ್ದು, ಮೆಲ್ಲಮೆಲ್ಲನೆ ಮಳೆ ಬಿರುಸುಗೊಳ್ಳುತ್ತಿದೆ. ನಿನ್ನೆ ಬೆಳಿಗ್ಗೆ ಯಿಂದಲೇ ಮಳೆ ಸುರಿಯ ಲಾರಂಭಿಸಿದ್ದು, ಮಳೆಯೊಂದಿಗೆ ಗಾಳಿಯೂ ತುಸು ಹೆಚ್ಚಿದೆ. ಅಲ್ಲದೆ ಚಳಿಯ ವಾತಾವರಣವೂ ಕಂಡುಬರುತ್ತಿದ್ದು, ಇದೀಗ ಜನತೆ ಮಳೆಗಾಲದ ಚಿತ್ರಣಕ್ಕೆ ಹೊಂದಿಕೊಳ್ಳುವAತಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಬಹುತೇಕ ಜಿಲ್ಲೆಯಾದ್ಯಂತ ಮಳೆ ಹೆಚ್ಚಾಗುತ್ತಿದೆ. ಇದರಿಂದ ನದಿ-ತೊರೆಗಳಲ್ಲಿ ನೀರಿನ ಮಟ್ಟವೂ ಏರಿಕೆಯಾಗುತ್ತಿದೆ. ತಾ. ೧೨ ಹಾಗೂ ೧೩ ರಂದು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ‘ಆರೆಂಜ್ ಅಲರ್ಟ್’ ಘೋಷಣೆಯನ್ನೂ ಹೊರಡಿಸ ಲಾಗಿತ್ತು. ಇದರಂತೆ ನಿನ್ನೆ ಬೆಳಿಗ್ಗೆ ಯಿಂದಲೇ ಮಳೆ ಆರಂಭಗೊAಡಿದ್ದು, ನಿಧಾನಗತಿಯಲ್ಲಿ ತೀವ್ರತೆ ಹೆಚ್ಚಾಗುತ್ತಿದೆ.

ಸುಂಟಿಕೊಪ್ಪ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಭಾನುವಾರ ಬೆಳಿಗ್ಗೆಯಿಂದಲೇ ಜೋರಾಗಿತ್ತು. ಇದರ ಮಧ್ಯೆ ವಿದ್ಯುತ್ ಅಡಚಣೆಯಾಗುತಿತ್ತು. ಸುಂಟಿಕೊಪ್ಪ ಹೋಬಳಿಯ ಹಲವು ಕಡೆ ತೋಟಗಳಲ್ಲಿ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ಧರಗೆ ಉರುಳಿವೆ. ಗದ್ದೆಯ ಬಳಿ ಇರುವ ತೋಡುಗಳು ತುಂಬಿ ಹರಿಯುತ್ತಿವೆ.

ಸಿದ್ದಾಪುರ: ಸಿದ್ದಾಪುರ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಭಾನುವಾರದವರೆಗೆ ಎಡೆಬಿಡದೆ ಗಾಳಿ ಸಹಿತ ಮಳೆ ಸುರಿಯುತ್ತಿದೆ. ಈಗಾಗಲೇ ಸಿದ್ದಾಪುರ ಹಾಗೂ ಕೊಂಡAಗೇರಿ ಭಾಗದ ನದಿತೀರದಲ್ಲಿ ವಾಸ ಮಾಡಿಕೊಂಡಿರುವ ನಿವಾಸಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ತೆರಳಲು ಪ್ರತಿ ಮನೆಗಳಿಗೂ ನೋಟೀಸ್ ಜಾರಿ ಮಾಡಲಾಗಿದೆ ಎಂದು ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕಿ ಭಾನುಪ್ರಿಯ ತಿಳಿಸಿದರು. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿರುತ್ತದೆ. ಭತ್ತ ಬೆಳೆಯುವ ಕೃಷಿಕರು ಗದ್ದೆಗಳನ್ನು ಉಳುಮೆ ಮಾಡುತ್ತಿರುವ ದೃಶ್ಯ ಕಂಡುಬAದಿದೆ.

ಕಡAಗ: ಶನಿವಾರ ಸಂಜೆಯಿAದ ಭಾನುವಾರ ಸಂಜೆತನಕ ಕಡಂಗ ಸುತ್ತಮುತ್ತಲಿನಲ್ಲಿ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆ ಅಗತ್ಯ ವಸ್ತುಗಳಾದ ಹಾಲು ಮತ್ತು ದಿನಪತ್ರಿಕೆ ಖರೀದಿಸಲು ಯಾರು ಮನೆಯಿಂದ ಹೊರ ಬರಲು ಮಳೆಯಿಂದ ಸಾಧ್ಯವಾಗಲಿಲ್ಲ.

ಗೋಣಿಕೊಪ್ಪಲು: ಗೋಣಿ ಕೊಪ್ಪಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸಾಧಾರಣವಾಗಿ ಮಳೆ ಸುರಿಯಿತು. ಮಧ್ಯಾಹ್ನದ ವೇಳೆ ಬಿಸಿಲಿನ ವಾತಾವರಣ ಕಂಡುಬAತು.

ಕೂಡಿಗೆ: ಕೂಡಿಗೆ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ತನಕ ಸಾಧಾರಣವಾಗಿ ಮಳೆ ಸುರಿಯಿತು. ಈ ವ್ಯಾಪ್ತಿಯ ಹೆಬ್ಬಾಲೆ, ಶಿರಂಗಾಲ, ಕೂಡುಮಂಗಳೂರು, ಹಾರಂಗಿ ಭಾಗಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ.

ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ತಾ. ೧೨ರ ಸಂಜೆಯಿAದ ಮೋಡಕವಿದ ವಾತಾವರಣದೊಂದಿಗೆ ಧಾರಾಕಾರವಾಗಿ ಎಡೆಬಿಡದೆ ಮಳೆ ಸುರಿಯಿತು. ಮಳೆಯ ಕಾರಣ ದಿಂದಾಗಿ ಕೃಷಿ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಗಾಳಿಯ ರಭಸ ಕಡಿಮೆ ಇರುವ ಹಿನ್ನೆಲೆಯಲ್ಲಿ ಜನ ತುಸು ನೆಮ್ಮದಿಯಿಂದಿದ್ದಾರೆ. ಯಾವದೇ ಅನಾಹುತ ನಡೆದ ಬಗ್ಗೆ ತಿಳಿದು ಬಂದಿಲ್ಲ. ಕೊರೊನಾ ಮತ್ತು ಮಳೆಯ ಕಾರಣದಿಂದ ಜನ ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಪೊನ್ನಂಪೇಟೆ: ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಶನಿವಾರದಿಂದ ಉತ್ತಮ ಮಳೆಯಾಗುತ್ತಿದೆ. ಕಳೆದೆರಡು ದಿನಗಳಿಂದ ಹದವಾಗಿ ಮಳೆಯಾಗುತ್ತಿ ರುವುದರಿಂದ ರೈತರು ಹರ್ಷ ಗೊಂಡಿದ್ದು, ಭತ್ತ ಕೃಷಿಯಲ್ಲಿ ತೊಡಗಿಸಿಕೊಳ್ಳಲು ತಯಾರಾಗುತ್ತಿ ದ್ದಾರೆ. ಗಾಳಿಯ ರಭಸವಿಲ್ಲದೆ ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದರಿಂದ, ಜನ ಜೀವನ ಸಹಜವಾಗಿದೆ. ಮಳೆಯಿಂದ ಯಾವುದೇ ತೊಂದರೆ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಕಳೆದ ೨೪ ಗಂಟೆ ಅವಧಿಯಲ್ಲಿ ಪೊನ್ನಂಪೇಟೆಯಲ್ಲಿ ೮೦ ಸೆಂಟ್, ಬೇಗೂರಿನಲ್ಲಿ ೮೪ ಸೆಂಟ್, ಬಿರುನಾಣಿ ೧ ಇಂಚು ಮಳೆಯಾಗಿದೆ. ಶನಿವಾರ ಬೆಳಿಗ್ಗೆಯಿಂದ

(ಮೊದಲ ಪುಟದಿಂದ) ಭಾನುವಾರ ಮಧ್ಯಾಹ್ನದವರೆಗೆ ಮತ್ತೂರುವಿನಲ್ಲಿ ೧.೩೪ ಇಂಚು, ಬಲ್ಯಮಂಡೂರುವಿನಲ್ಲಿ ೧ ಇಂಚು ಮಳೆಯಾಗಿದೆ. ಬಾಳೆಲೆ, ಕಾರ್ಮಾಡು, ಕಾನೂರು, ಕುಟ್ಟ, ಹುದಿಕೇರಿ, ಶ್ರೀಮಂಗಲ, ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದೆ. ದಕ್ಷಿಣ ಕೊಡಗಿನಲ್ಲಿ ಮಧ್ಯಾಹ್ನದ ನಂತರ ಮಳೆ ಸ್ವಲ್ಪಮಟ್ಟಿಗೆ ಬಿರುಸು ಪಡೆದುಕೊಂಡಿದೆ.

ಚೆಟ್ಟಳ್ಳಿ: ಚೆಟ್ಟಳ್ಳಿಯಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೂ ಮಳೆ ಸುರಿಯುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಸುಂಟಿಕೊಪ್ಪದ ಚೆಟ್ಟಳ್ಳಿ ಮಾರ್ಗ ಮಧ್ಯೆ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ವಿದ್ಯುತ್ ಇಲಾಖೆ ಸಿಬ್ಬಂದಿಗಳು ಸರಿಪಡಿಸಲು ಬೆಳಗ್ಗಿನಿಂದಲೇ ಹರಸಾಹಸ ಪಟ್ಟರು.

ಸೋಮವಾರಪೇಟೆ: ಮೊನ್ನೆ ರಾತ್ರಿಯಿಂದಲೂ ಮೋಡ ಕವಿದ ವಾತಾವರಣದ ನಡುವೆ ತುಂತುರು ಮಳೆಯಾಗುತ್ತಿದ್ದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಶನಿವಾರ ಮತ್ತು ಭಾನುವಾರ ಎಡೆಬಿಡದೆ ಮಳೆ ಸುರಿಯಿತು.

ಮಳೆಯೊಂದಿಗೆ ಗಾಳಿಯ ರಭಸವೂ ಅಧಿಕವಾಗಿದ್ದು, ವಾತಾವರಣ ಶೀತಮಯಗೊಂಡು ಮಳೆಗಾಲ ಪ್ರಾರಂಭದ ಮುನ್ಸೂಚನೆ ನೀಡಿತು. ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಮಳೆಯಾಗುತ್ತಿದ್ದು, ಪುಷ್ಪಗಿರಿ ಬೆಟ್ಟಶ್ರೇಣಿಯ ಶಾಂತಳ್ಳಿ, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಸುರಿಯಿತು.

ಕೃಷಿ ಕಾರ್ಯಗಳ ಆರಂಭಕ್ಕೆ ಈಗಿನ ಮಳೆ ಉತ್ತಮ ವಾತಾವರಣ ಸೃಷ್ಟಿಸಿದ್ದು, ರೈತಾಪಿ ವರ್ಗ ಭತ್ತ ಬೆಳೆಯುವತ್ತ ಮುಖಮಾಡಿದೆ. ಗದ್ದೆಗಳನ್ನು ಉಳುಮೆ ಮಾಡಿ, ಸಸಿ ಮಡಿಗಳ ತಯಾರಿಗೆ ಮುಂದಾಗಿದ್ದು, ಕಾಫಿ ತೋಟದಲ್ಲಿ ಗೊಬ್ಬರ ಹಾಕುವ ಕಾರ್ಯ ಭರದಿಂದ ನಡೆಯುತ್ತಿದೆ.

ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿರುವದರಿಂದ ಕಾಫಿ ತೋಟಗಳಲ್ಲಿ ಮರಗಿಡಗಳು ನೆಲಕ್ಕುರುಳುತ್ತಿದ್ದು, ಕಾರ್ಮಿಕರು ಜಾಗ್ರತೆಯಿಂದ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಬೀಟಿಕಟ್ಟೆ ಹಾಗೂ ಶನಿವಾರಸಂತೆಯ ಗುಡುಗಳಲೆ ಬಳಿಯಲ್ಲಿ ರಸ್ತೆಗಡ್ಡಲಾಗಿ ಮರ ಬಿದ್ದು, ಸಂಚಾರಕ್ಕೆ ಅಡಚಣೆಯಾಗಿತ್ತು.

ಗುಡುಗಳಲೆ ಬಳಿಯಲ್ಲಿ ಬಿದ್ದಿದ್ದ ಮರವನ್ನು ಲೈನ್‌ಮೆನ್‌ಗಳಾದ ಗಿರೀಶ್, ಸಂದೀಪ್, ಅಭಿಷೇಕ್, ಸಿದ್ದು ಅವರುಗಳು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೀಟಿಕಟ್ಟೆ ಬಳಿಯ ಹೆದ್ದಾರಿಯಲ್ಲಿ ಮಧ್ಯಾಹ್ನದ ವೇಳೆಗೆ ಮರ ಬಿದ್ದಿದ್ದು, ಸಂಜೆಯಾದರೂ ತೆರವುಗೊಂಡಿರಲಿಲ್ಲ.

ಭಾಗಮAಡಲ: ಭಾಗಮಂಡಲ ತಲಕಾವೇರಿಗೆ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕೊಂಚ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ತಲಕಾವೇರಿಯಲ್ಲಿ ನಿರಂತರ ಮಳೆ ಬೀಳುತ್ತಿದ್ದು ಶನಿವಾರ ತಲಕಾವೇರಿಗೆ ೧೪೮.೮ ಮಿ.ಮಿ, ಮಳೆಯಾಗಿದ್ದು, ಭಾಗಮಂಡಲಕ್ಕೆ ೮೯ ಮಿ.ಮಿ. ಮಳೆಯಾಗಿದೆ ಕಳೆದ ವರ್ಷ ಇದೇ ಅವಧಿಗೆ ಭಾಗಮಂಡಲಕ್ಕೆ ೯೪೪.೮ ಮಿ.ಮಿ. ಮಳೆಯಾದರೆ, ಈ ವರ್ಷ ೧೨೧೯ ಮಿ.ಮಿ. ಮಳೆಯಾಗಿದೆ. ಕಳೆದ ವರ್ಷಕ್ಕೆ ಹೊಲಿಕೆಯಾದರೆ ಈ ವರ್ಷ ೨೭೫ ಮಿ.ಮಿ. ಮಳೆ ಭಾಗಮಂಡಲಕ್ಕೆ ಮಳೆ ಜಾಸ್ತಿಯಾಗಿದೆ.

ವೀರಾಜಪೇಟೆ: ಕೊಡಗು-ಕೇರಳ ಗಡಿ ಭಾಗದಲ್ಲಿ ಭಾರೀ ಮಳೆ ಗಾಳಿ ಪ್ರಾರಂಭವಾಗಿದೆ. ಇದರಿಂದ ವೀರಾಜಪೇಟೆ ವಿಭಾಗದ ಕೆರೆ, ತೋಡುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಶನಿವಾರ ಬಿದ್ದ ಮಳೆಗೆ ಯಾವುದೇ ಹಾನಿಯಾದ ಕುರಿತು ಪಟ್ಟಣ ಪಂಚಾಯಿತಿ, ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ ದೂರು ಬಂದಿಲ್ಲ. ವೀರಾಜಪೇಟೆ ವಿಭಾಗದಲ್ಲಿ ಭಾನುವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಸ್ವಲ್ಪ ಬಿಡುವು ನೀಡಿ ಮಳೆ ಸುರಿಯುತ್ತಿತ್ತು.

ಕೊಡಗು-ಕೇರಳ ಗಡಿಭಾಗವಾದ ಮಾಕುಟ್ಟ, ಹನುಮಾನ್‌ಪಾಲ, ನೀರುಕೊಲ್ಲಿ ಪೆರುಂಬಾಡಿ ಸೇರಿದಂತೆ ವಿವಿಧೆಡೆಗಳಲ್ಲಿ ಭಾರೀ ಮಳೆಯಾಗಿದೆ.

ವೀರಾಜಪೇಟೆ ವಿಭಾಗಕ್ಕೆ ಶನಿವಾರ ಬೆಳಗ್ಗಿನಿಂದ ಭಾನುವಾರ ಬೆಳಗ್ಗಿನ ತನಕ ಒಟ್ಟು ೩೭.೬ ಮಿ.ಮೀ. ( ೧.೫೩ ಇಂಚು) ಮಳೆ ಸುರಿದಿದೆ.