ಈಗಿನ ಎರಡನೇ ಅಲೆಯ ವಿನಾಶಕಾರಿ ಪ್ರಭಾವವನ್ನು ನಾವು ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಸನ್ನದ್ಧತೆಯ ಕೊರತೆಯ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಇದೆಲ್ಲದರ ನಡುವೆ ಮೂರನೆ ಅಲೆಯ ಬಗ್ಗೆ ಮುನ್ಸೂಚನೆ ಕೂಡ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಇದರ ತೀವ್ರತೆ ಮತ್ತು ಸಮಯವನ್ನು ಖಚಿತವಾಗಿ ಯಾರಿಂದಲೂ ಹೇಳಲಾಗುತ್ತಿಲ್ಲ. ಆದರೆ ಪರಿಣಿತರು ದೃಢವಾದ ಮುನ್ನೆಚ್ಚರಿಕಾ ಕ್ರಮಗಳಿಂದ ಇದರಿಂದಾಗಬಹುದಾದ ಹಾನಿಯನ್ನು ನಿಶ್ಚಿತವಾಗಿ ತಡೆಗಟ್ಟಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸರಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರಗಳಲ್ಲಿ ಕಾರ್ಯಚಟುವಟಿಕೆಗಳು ಪ್ರಾರಂಭಗೊAಡಿವೆ.
ಸಾAಕ್ರಾಮಿಕದಲ್ಲಿ ಅಲೆ ಎಂದರೇನು?
ಅಲೆ ಎಂಬ ಶಬ್ಧವನ್ನು ರೋಗಿಗಳ ಸಂಖ್ಯೆಯ ಏರಿಳಿತಗಳನ್ನು ಕಾಲಾವಧಿಯಲ್ಲಿ ವಿವರಿಸಲು ಬಳಸುತ್ತೇವೆ. ರೇಖಾಚಿತ್ರದ ಆಕಾರ (ಉಡಿಚಿಠಿh) ಅಲೆಯಂತಿರುವುದರಿAದ ಈ ಪದದ ಬಳಕೆ ಇದೆ. ಕೋವಿಡ್-೧೯ ಪ್ರಪಂಚವನ್ನು ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಜರ್ಜರಿತಗೊಳಿಸುತ್ತಿದೆ. ಆದರೆ ಎಲ್ಲಾ ಭೌಗೋಳಿಕ ಪ್ರಾಂತ್ಯಗಳಲ್ಲೂ ಸಂಖ್ಯೆಯು ಉಲ್ಬಣಗೊಂಡ ನಂತರ ಕೆಲ ಸಮಯದಲ್ಲಿ ಮಂದಗತಿಗೆ ಇಳಿಯುವುದು ಖಚಿತ. ಪ್ರಾದೇಶಿಕವಾಗಿ ಸಣ್ಣಪ್ರಮಾಣದ ಏರಿಳಿತ ಕೂಡ ಸ್ವಾಭಾವಿಕ. ದೆಹಲಿಯಲ್ಲಿ ಈಗಾಗಲೇ ನಾಲ್ಕು ಸಣ್ಣ ಅಲೆಗಳು ಬಂದು ಹೋಗಿವೆ. ಆದರೆ ಕರ್ನಾಟಕ ರಾಜ್ಯ, ರಾಷ್ಟçಮಟ್ಟದ ಮಾದರಿಯನ್ನೇ ಬಿಂಬಿಸುತ್ತಿದೆ.
ಮೂರನೇ ಅಲೆಯ ಆಗಮನವನ್ನು ಗುರುತಿಸುವುದು ಹೇಗೆ?
‘ಮೂರನೇ ಅಲೆ’ ಎಂಬುದನ್ನು ರಾಷ್ಟçಮಟ್ಟದಲ್ಲಿ ಉಂಟಾಗಬಹುದಾದ ಸಂಭಾವಿಕ ಉಲ್ಬಣವನ್ನು ವರ್ಣಿಸಲು ಬಳಸಲಾಗುತ್ತಿದೆ. ಕಳೆದ ಒಂದು ವಾರದಿಂದ ದೈನಂದಿನ ರೋಗಿಗಳ ಒಟ್ಟು ಸಂಖ್ಯೆಯ ತೀವ್ರ ಇಳಿಕೆ ಕಂಡುಬರುತ್ತಿರುವುದು ಸಂತೋಷಕರ. ಇದೇ ಮೇ ತಿಂಗಳ ೬ ರಂದು ಕಂಡ ೪.೧೪ ಲಕ್ಷ ಗರಿಷ್ಠ ಸಂಖ್ಯೆ ಈಗ ದಿನಕ್ಕೆ ೮೦ ಸಾವಿರಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೩೭.೪೫ ಲಕ್ಷದಿಂದ ೨೭.೨೫ ಲಕ್ಷಕ್ಕೆ ಕುಸಿದಿದೆ. ಪಾಸಿಟಿವಿಟಿ ರೇಟ್ ಶೇ. ೭ಕ್ಕೆ ಇಳಿದಿದ್ದು, ಮುಂದಿನ ದಿನಗಳಲ್ಲಿ ಪ್ರತಿದಿನ ೧೦ ಲಕ್ಷ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿದಲ್ಲಿ ಈ ತಿಂಗಳಾAತ್ಯಕ್ಕೆ ಇದು ಶೇ. ೫ಕ್ಕೆ ಇಳಿಯುವುದು ಸಾಧ್ಯ. ಇದೇ ಪ್ರವೃತ್ತಿ ಮುಂದುವರೆದಲ್ಲಿ ಜುಲೈ ಅಂತ್ಯಕ್ಕೆ ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ ಕಳೆದ ಫೆಬ್ರವರಿಯಲ್ಲಿದ್ದ ಮಟ್ಟಕ್ಕೆ ಇಳಿಯುವುದು. ಇದಾದ ನಂತರ ಪುನಃ ಸಂಖ್ಯೆಯಲ್ಲಿ ಏರಿಕೆ ಕಂಡಲ್ಲಿ ಇದನ್ನು ಮೂರನೇ ಅಲೆ ಎಂದು ಹೇಳಬಹುದು.
ಮೂರನೇ ಅಲೆಯು ಇನ್ನೂ ಪ್ರಬಲವಾಗಿರಬಹುದೇ?
ಕೆಲವೆಡೆ ಈ ಮಾತು ಕೇಳಿಬರುತ್ತಿದೆಯಾದರೂ ಇದನ್ನು ನಿರ್ದಿಷ್ಟವಾಗಿ ಹೇಳಲು ಅಸಾಧ್ಯ. ಇತಿಹಾಸದಲ್ಲಿ ಸಾಂಕ್ರಾಮಿಕದ ನಂತರದ ಅಲೆಗಳು ಸಾಮಾನ್ಯವಾಗಿ ಪ್ರಬಲವಾಗಿರುವುದಿಲ್ಲ. ಆದರೆ ಕೊರೊನಾದ ವರ್ತನೆ ಈ ಮಾದರಿಯನ್ನು ಪಾಲಿಸುತ್ತಿಲ್ಲ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೋಂಕು ಇಳಿಮುಖಗೊಂಡು ಬಹುಕಡಿಮೆ ಜನರನ್ನು ಮಾತ್ರ ಬಾಧಿಸಿತ್ತು. ತದನಂತರದ ಐದು ತಿಂಗಳಲ್ಲಿ ಆದಂತಹ ಸ್ತಬ್ಧತೆಗೆ ಕಾರಣವೇನೆಂದು ವಿಜ್ಞಾನಿಗಳಿಗೂ ನಿರ್ದಿಷ್ಟವಾಗಿ ಹೇಳಲಾಗುತ್ತಿಲ್ಲ. ಇದರಿಂದಾಗಿ ಜನರು ಮಹಾಮಾರಿ ಪೂರ್ತಿಯಾಗಿ ಮನಗೊಂಡಿತೆAಬ ಭ್ರಮೆಗೆ ತುತ್ತಾದರು. ಈ ಎರಡನೇ ಅಲೆಯ ನೋವಿನ ಅನುಭವದ ಒಂದೇ ಕಾರಣಕ್ಕಾಗಿ ಮೂರನೇ ಅಲೆ ಇನ್ನೂ ಭಯಾನಕವಾಗಿರಬಹುದೆಂದು ಚಿಂತಿಸಲಾರAಭಿಸಿದ್ದೇವೆ.
ಆದರೆ ಪರಿಸ್ಥಿತಿ ಭಿನ್ನವಾಗಿರಲೂಬಹುದು. ಇಂದು ಹೆಚ್ಚಿನ ಪ್ರಮಾಣದಲ್ಲಿ ಜನರು ಸೋಂಕಿತರಾಗಿದ್ದು, ಪಾಸಿಟಿವಿಟಿ ದರ ಕಳೆದ ಅಲೆಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಸೋಂಕಿತರ ನೈಜ ಸಂಖ್ಯೆ ಎಂದರೆ, ಪರೀಕ್ಷೆಗೆ ಒಳಪಡದವರನ್ನು ಸೇರಿಸಿ, ಇನ್ನೂ ಅಧಿಕವಾಗಿರಲೂಬಹುದು. ಇದರೊಂದಿಗೆ ಲಸಿಕಾ ಪ್ರಮಾಣ ಹೆಚ್ಚಾಗಿದ್ದು, ಸಮಾಜದಲ್ಲಿ ಸೋಂಕಿಗೆ ತುತ್ತಾಗಬಹುದಾದಂತವರ ಸಂಖ್ಯೆ ಇಳಿಮುಖವಾಗಿದೆ. ಈ ಮೇಲಿನ ಅಂಶಗಳಿAದಾಗಿ ಮೂರನೇ ಅಲೆ ಬರುವುದು ಒಂದು ಸಾಧ್ಯತೆಯೇ ಹೊರತು ನಿಶ್ಚಿತವಲ್ಲ.
ಮೂರನೇ ಅಲೆಗೆ ಮಕ್ಕಳು ತುತ್ತಾಗುತ್ತಾರೆ ಎಂಬುದು ನಿಜವೇ?
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಹಲವು ಮಾಧ್ಯಮಗಳಲ್ಲಿ ಈ ಬಗ್ಗೆ ಸಾಕಷ್ಟು ಗೊಂದಲ ಮೂಡಿಬರುತ್ತಿದೆ. ಆದರೆ ಇಂತಹ ಪ್ರಕಟಣೆಗಳನ್ನು ಬೆಂಬಲಿಸಲು ಯಾವುದೇ ದೃಢ ವೈಜ್ಞಾನಿಕ ಆಧಾರಗಳಿಲ್ಲ. ಹೆಚ್ಚಾಗಿ ಮಕ್ಕಳು ತೀವ್ರ ಕಾಯಿಲೆಗೆ ಒಳಪಡುತ್ತಾರೆಂಬುದು ಊಹಾಪೋಹವೆಂದೇ ಹೇಳಬಹುದು.
ಮಕ್ಕಳಲ್ಲಿ ಂಅಇ-೨ ಎಂಬ ರಿಸೆಪ್ಟರ್ ಅಂಶ ಕಡಿಮೆ ಪ್ರಮಾಣದಲ್ಲಿ ಇರುವುದು. ಕೋವಿಡ್ ವೈರಾಣು ಶ್ವಾಸಕೋಶವನ್ನು ನುಸುಳಲು ಈ ಮೇಲ್ಕಂಡ ರಿಸೆಪ್ಟರ್ ಅಂಶ ಬಹು ಅವಶ್ಯವಿರುವ ಕಾರಣ ಮಕ್ಕಳು ತೀವ್ರ ರೋಗಕ್ಕೆ ಒಳಗಾಗುವ ಸಂಭವ ಬಲುಕಡಿಮೆ. ಆದರೆ ಮಕ್ಕಳಲ್ಲಿ ಈ ಜಾಗತಿಕ ಸಾಂಕ್ರಾಮಿಕದ ಬಗ್ಗೆ ಅರಿವು ಮೂಡಿಸುವುದು, ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು. ಎಂದರೆ, ಅನಗತ್ಯ ಹೊರಗೆ ಸುತ್ತಾಡುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಪೌಷ್ಟಿಕ ಆಹಾರ ಸೇವನೆ ಇತ್ಯಾದಿ ನಮ್ಮೆಲ್ಲರ ಹೊಣೆ. ಎರಡನೆ ಅಲೆ ಮೊದಲನೆ ಅಲೆಗಿಂತ ಹೆಚ್ಚಾಗಿ ಮಕ್ಕಳನ್ನು ಬಾಧಿಸಿದೆ ಎಂಬುದು ಆಧಾರರಹಿತ.
ಮಕ್ಕಳಲ್ಲಿ ಬಳಕೆಗೆ ಅಂಗೀಕೃತವಾಗಿರುವAತಹ ಯಾವುದೇ ಲಸಿಕೆ ಇನ್ನೂ ಲಭ್ಯವಿಲ್ಲದಿರುವುದು ಮಾತ್ರ ಚಿಂತಿಸುವ ವಿಚಾರ.
ಮುಂಬರುವ ಅಲೆಯನ್ನು ತಡೆಯಲು ಲಸಿಕೆಯೊಂದೇ ಬ್ರಹ್ಮಾಸ್ತç
ರಾಷ್ಟçದಲ್ಲಿ ಇಲ್ಲಿಯವರೆಗೆ ಸೋಂಕಿತರ ಒಟ್ಟು ಸಂಖ್ಯೆ ೨.೯ ಕೋಟಿ. ಜನವರಿ ಮಾಹೆಯಲ್ಲಿ ಪ್ರಕಟಗೊಂಡ ಸೀರೊ ಸರ್ವೆಯ ಪ್ರಕಾರ ಶೇ. ೨೧.೫ ಜನರಲ್ಲಿ ಕೋವಿಡ್ ಪ್ರತಿರೋಧಕ ಆ್ಯಂಟಿಬಾಡಿ ಇರುವುದು ಕಂಡುಬAದಿದೆ. ಅಂದರೆ ಐದರಲ್ಲಿ ಒಬ್ಬರಿಗೆ ತಮಗೆ ಗೊತ್ತಿಲ್ಲದೆಯೇ ಸೋಂಕು ಬಂದು ಹೋಗಿದೆ ಎಂದು ಸೂಚಿಸುತ್ತದೆ. ಇಂದಿನ ಅಂಕಿಅAಶಗಳ ಪ್ರಕಾರ ದಿನಕ್ಕೆ ೩೦ ಲಕ್ಷ ಡೋಸ್ ಲಸಿಕೆ ನೀಡಲಾಗುತ್ತಿರುವುದು ಪ್ರಶಂಸನೀಯ.
ಪ್ರಧಾನಮAತ್ರಿಗಳು ರಾಷ್ಟçವನ್ನು ಉದ್ದೇಶಿಸಿ ಮಾತನಾಡಿ, ಜುಲೈ ತಿಂಗಳ ಮಧ್ಯಂತರ ವೇಳೆಗೆ ಪ್ರತಿದಿನ ಒಂದು ಕೋಟಿ ಡೋಸ್ ಲಸಿಕೆ ನೀಡುವ ಗುರಿಯನ್ನು ನಿಗದಿಪಡಿಸಿರುತ್ತಾರೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಡಿಸೆಂಬರ್ ಅಂತ್ಯದೊಳಗೆ ಶೇ. ೭೦ ರಷ್ಟು ವಯಸ್ಕರಿಗೆ ಲಸಿಕೆ ದೊರಕಿರುತ್ತದೆ. ಇಂತಹ ಒಂದು ಸನ್ನಿವೇಶ ನಿರ್ಮಾಣ ಮಾಡುವುದರಲ್ಲಿ ಯಶಸ್ವಿಯಾದರೆ ಮುಂಬರುವ ಯಾವುದೇ ಅಲೆಗಳನ್ನು ತಡೆಗಟ್ಟಲು ಸಶಕ್ತರಾಗುತ್ತೇವೆ.
ಕೊಡಗಿನಂತಹ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾ ವಿತರಣೆಯಲ್ಲಿ ವ್ಯತ್ಯಯ ಆಗದಿರುವಂತೆ ಸರಬರಾಜು ವ್ಯವಸ್ಥೆ ಮತ್ತು ಪೂರಕ ನೀತಿಯನ್ನು ರಚಿಸುವುದು ಬಹುಮುಖ್ಯ. ಸಂಭಾವಿಕ ಮೂರನೇ ಅಲೆಯನ್ನು ಆತ್ಮಸ್ಥೆöÊರ್ಯ ಮತ್ತು ಆತ್ಮ ವಿಶ್ವಾಸದಿಂದ ಎದುರಿಸೋಣ.
- ಡಾ. ಎ.ಜಿ. ಚಿಣ್ಣಪ್ಪ, ನೇತ್ರ ತಜ್ಞರು, ಒ.ಃ.B.S., ಒ.S., ಆಓಃ, ಈಖಅS (Uಏ), ಮಡಿಕೇರಿ. ಮೊ. ೯೮೮೦೪೧೧೭೧೧