ಯಾವುದೇ ಫಲಾಪೇಕ್ಷೆಯಿಲ್ಲದೆ ಸ್ವಯಂಪ್ರೇರಿತರಾಗಿ ಒಬ್ಬರಿಗೊಬ್ಬರು ಬೇರೊಬ್ಬರ ಜೀವಉಳಿಸಲು ರಕ್ತ ಕೊಡುವುದಕ್ಕೆ ರಕ್ತದಾನ ಎನ್ನುತ್ತೇವೆ. ರಕ್ತವು ಮನುಷ್ಯನ ಶರೀರದ ಅತೀ ಅಮೂಲ್ಯ ದ್ರಾವಣ. ನಾವು ಉಸಿರಾಡಿದ ಅನಿಲಗಳನ್ನು ಹಾಗೂ ನಾವು ತಿಂದ ಆಹಾರ ಪದಾರ್ಥಗಳನ್ನು ಶರೀರದ ಪ್ರತಿಯೊಂದು ಮೂಲೆಮೂಲೆಗೂ ತಲುಪಿಸುತ್ತದೆ. ೫೦ ಕೆ.ಜಿ. ತೂಕವಿರುವ ವ್ಯಕ್ತಿಯಲ್ಲಿ ಅಂದಾಜು ೫ ಲೀಟರ್ನಷ್ಟು ರಕ್ತವಿರುತ್ತದೆ. ವಿಜ್ಞಾನದ ಪ್ರಗತಿಯಿಂದಾಗಿ ಒಬ್ಬರ ರಕ್ತವನ್ನು ಇನ್ನೊಬ್ಬರಿಗೆ ನೀಡುವ ಮೂಲಕ ರಕ್ತದ ಕೊರತೆಯನ್ನು ನೀಗಿಸಬಹುದು ಎಂದು ತಿಳಿಯಲಾಗಿದೆ. ಅಲ್ಲದೇ ಅತಿ ಬೇಗ ಕಾಯಿಲೆಯನ್ನು ಗುಣಪಡಿಸಬಹುದು ಹಾಗೂ ಹಲವಾರು ಸಂದರ್ಭಗಳಲ್ಲಿ ಜೀವವನ್ನು ಕೂಡ ಉಳಿಸಬಹುದು. ರಕ್ತದಾನ ಕಾರ್ಯಕ್ರಮವಿದ್ದರೆ ನಾವುಗಳು ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಸಮಾಜದ ನಿರ್ಮಾಣದಲ್ಲಿ ಭಾಗಿಯಾಗಬೇಕು. ರಕ್ತದಲ್ಲಿ ಔ,ಂ,ಃ, ಂಃ ಎಂಬ ಗುಂಪುಗಳಿದ್ದು ಇದರಲ್ಲಿ ಉಪವಿಭಾಗ ಖಊ ಗುಂಪು ಪ್ಲಸ್ ಮತ್ತು ಮೈನಸ್ ವಿಭಾಗಗಳಿವೆ.
ರಕ್ತದಾನದ ಉದ್ದೇಶವೇನೆಂದರೆ ಆದಷ್ಟು ಬೇಗ ರಕ್ತದ ಪ್ರಮಾಣವನ್ನು ಹೆಚ್ಚಿಸುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ, ರಕ್ತ ಪ್ರಮಾಣ ಹೆಚ್ಚಿಸುವುದರಿಂದ ಕಾಯಿಲೆಯಿಂದ ಆದಷ್ಟು ಬೇಗ ಗುಣಮುಖ ಹೊಂದಲು ಸಾಧ್ಯ, ಕ್ಯಾನ್ಸರ್ ರೋಗಿಗಳಿಗೆ ಮತ್ತು ಡಯಾಲಿಸೀಸ್ ಮಾಡಿಸುವವರಿಗೆ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಹಾಗಾದರೆ ಯಾರು ರಕ್ತ ದಾನ ಮಾಡಬಹುದು ಎಂದು ತಿಳಿಯುವುದಾದರೆ, ೧೮ ವರ್ಷಕ್ಕಿಂತ ಮೇಲ್ಪಟ್ಟು ೫೫ ವರ್ಷಕ್ಕಿಂತ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನ ಮಾಡುವವರು ೪೫ ಕೆ.ಜಿ. ತೂಕ ಹೊಂದಿರಬೇಕಾಗುತ್ತದೆ. ಗಂಡಸರಾದರೆ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಮಹಿಳೆಯರಾದರೆ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕಾಗುತ್ತದೆ.
ದಿನನಿತ್ಯ ಔಷಧಿಯನ್ನು ತೆಗೆದುಕೊಳ್ಳುವವರು, ಗರ್ಭಿಣಿ ಸ್ತಿçÃಯರು, ಹೆರಿಗೆಯಾದ ಆರು ತಿಂಗಳ ಒಳಗಿನ ಮಹಿಳೆಯರು, ಮುಟ್ಟಾದ ಮಹಿಳೆಯರು, ಕಾಮಾಲೆ ರೋಗ ಇರುವವರು, ಮಲೇರಿಯಾ ಜ್ವರ ಇರುವ ವ್ಯಕ್ತಿಗಳು ಇತರ ಕಾಯಿಲೆ ಇರುವವರು ರಕ್ತದಾನ ಮಾಡಬಾರದು.
ಒಬ್ಬ ವ್ಯಕ್ತಿಯಲ್ಲಿ ಒಂದು ಬಾರಿಗೆ ಕೇವಲ ೩೦೦ ರಿಂದ ೩೫೦ ಮಿ.ಲೀ. ರಕ್ತವನ್ನು ಪಡೆಯಬಹುದು. ರಕ್ತದಾನ ಮಾಡಿದ ೨೬ ರಿಂದ ೩೬ ಗಂಟೆಗಳಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಮಾಡಲು ಅನುವುಮಾಡಿದಂತೆ ಆಗುತ್ತದೆ. ರಕ್ತದಾನ ಮಾಡುವುದರಿಂದ ನಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಏನೂ ತೊಂದರೆ ಇರುವುದಿಲ್ಲ. ರಕ್ತದಾನ ಮಾಡಲು ಕೇವಲ ಹತ್ತರಿಂದ ಹದಿನೈದು ನಿಮಿಷ ಸಾಕು. ನಂತರ ಯಾವುದೇ ವಿಶೇಷ ಔಷದೋಪಚಾರವಾಗಲೀ, ಊಟೋಪಚಾರದ ಅವಶ್ಯಕತೆ ಇರುವುದಿಲ್ಲ. ಕೊರೊನಾ ಕಾಲದಲ್ಲಿ ರಕ್ತದಾನ ಮಾಡಬಹುದಾ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವುದಾದರೆ ಆರೋಗ್ಯವಂತ ಯುವಜನರು ಮಾತ್ರ ರಕ್ತದಾನ ಮಾಡಬಹುದು. ಕೊರೊನಾ ಬಂದವರು ಮತ್ತು ಜ್ವರ ಇರುವವರು ರಕ್ತದಾನ ಮಾಡುವಂತಿಲ್ಲ. ರಕ್ತದಾನ ಮಾಡುವುದಾದರೆ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಅಥವಾ ನೋಂದಾಯಿತ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸುವ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಬಹುದು. ರಕ್ತದಾನ ಮಾಡಿದ ನಂತರ ಅದನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದ ನಂತರವೇ ಉಪಯೋಗಿಸಲಾಗುತ್ತದೆ. ಆದ್ದರಿಂದ ರಕ್ತದಾನ ಮಾಡುವುದರಿಂದ ಯಾರಿಗೂ ಯಾವ ತೊಂದರೆಯು ಇರುವುದಿಲ್ಲ. ಕೊರೊನಾದ ಈ ಸಂದರ್ಭದಲ್ಲಿ ರಕ್ತದ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ರಕ್ತದಾನವನ್ನು ಮಾಡೋಣ, ಜೀವವನ್ನು ಉಳಿಸಲು ಪ್ರಯತ್ನಿಸೋಣ.
- ಮಂದೆಯAಡ ವನಿತ್ ಕುಮಾರ್, ಎನ್.ಎಸ್.ಎಸ್. ನೋಡಲ್ ಅಧಿಕಾರಿ ಹಾಗೂ ಅಧ್ಯಕ್ಷರು, ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ