
ಮಡಿಕೇರಿ, ಜೂ. ೧೩: ಪ್ರಸ್ತುತ ಇರುವ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ - ಅರಣ್ಯ ಇಲಾಖೆಯ ಮೂಲಕ ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗವನ್ನು ನಿಗದಿತ ಹಣ ಪಾವತಿಯ ಮೂಲಕ ಅರಣ್ಯ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವ ಯೋಜನೆಯೊಂದು ಈ ಹಿಂದೆಯೇ ರೂಪಿತವಾಗಿದೆ. ೧೯೮೦ರ ಅರಣ್ಯ ಸಂರಕ್ಷಣಾ ಕಾಯ್ದೆಯ ಪ್ರಕಾರ ಅರಣ್ಯ ಪ್ರದೇಶದ ವಿಸ್ತೀರ್ಣವನ್ನು ಹೆಚ್ಚಿಸಿ ಅರಣ್ಯ ಸಂಪತ್ತನ್ನು ಕಾಪಾಡಲು ಹಾಗೂ ವೃದ್ಧಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿತವಾಗಿದೆ. ಇದರಂತೆ ಕೊಡಗಿನಲ್ಲಿ ಹಲವಾರು ಪ್ರಸ್ತಾವನೆಗಳು ಈ ಹಿಂದಿನಿAದಲೂ ಇವೆ. ಕೇಂದ್ರ ಸರಕಾರದ ಮೂಲಕ ಇದಕ್ಕೆ ಹಣವನ್ನು ಅರಣ್ಯ ಇಲಾಖೆಗೆ ನೀಡಲಾಗುತ್ತದೆ. ಕಾಂಪನ್ಸೇಟರ್ ಎಂಪರ್ಸ್ಟೇಷನ್ ಫಂಡ್ (ಕ್ಯಾಂಪ್ಕೊ) ಎಂದು ಇದನ್ನು ಕರೆಯಲಾಗುತ್ತದೆ. ಈಗಿನ ಮಾಹಿತಿಯಂತೆ ಕೇಂದ್ರ ಸರಕಾರದ ಮೂಲಕ ರಾಜ್ಯದ ಅರಣ್ಯ ಇಲಾಖೆಗೆ ಇದಕ್ಕಾಗಿ ಬಂದಿರುವ ಹಣ ರೂ. ೯೦೦ ಕೋಟಿಯಷ್ಟಿದೆ.
ಮಾಜಿ ಸಚಿವರ ಕುಟುಂಬದ ಪ್ರಯತ್ನ
ಭಾಗಮಂಡಲ ಹೋಬಳಿಯ ಕುಂದಚೇರಿ ವ್ಯಾಪ್ತಿಯಲ್ಲಿ ಸರ್ವೆ ನಂಬರ್ ೧/೧೦ರಲ್ಲಿ ಮಾಜಿ ಕೇಂದ್ರ ಸಚಿವರಾದ ಕೆ.ಎಚ್. ಮುನಿಯಪ್ಪ ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಸುಮಾರು ೨೦೪ ಎಕರೆಯಷ್ಟು ಜಾಗ ಇದ್ದು, ಇದೀಗ ಈ ಜಾಗವನ್ನು ಅರಣ್ಯ ಇಲಾಖೆಗೆ ಪರಭಾರೆ ಮಾಡುವ ಪ್ರಯತ್ನ ಬಿರುಸಿನಿಂದ ಸಾಗಿರುವ ಕುರಿತು ತಿಳಿದುಬಂದಿದೆ. ಎ.ಎಲ್. ಶ್ರುತಿ, ಕೋಂ ಎಂ. ನರಸಿಂಹಮೂರ್ತಿ ಅವರ ಹೆಸರಿನಲ್ಲಿ ಈ ಜಾಗ ಇದ್ದು, ಈಗಾಗಲೇ ಅರಣ್ಯ ಇಲಾಖೆ
(ಮೊದಲ ಪುಟದಿಂದ) ಹಾಗೂ ಕಂದಾಯ ಇಲಾಖೆಯ ಮೂಲಕ ಜಂಟಿ ಸರ್ವೆಯೂ ಮುಕ್ತಾಯಗೊಂಡಿದೆ. ಈ ಪ್ರದೇಶಕ್ಕೆ ಒಂದೆರಡು ದಿನಗಳ ಹಿಂದೆ ಸ್ವತಃ ಜಿಲ್ಲಾಧಿಕಾರಿಗಳೂ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳ ತಂಡದೊAದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಶ್ನಾರ್ಹವಾಗಿರುವ ವಿಶೇಷ ಆಸಕ್ತಿ
ಕೊಡಗಿನಲ್ಲಿ ಈ ಯೋಜನೆಯಂತೆ ಅರಣ್ಯ ಇಲಾಖೆಗೆ ಜಾಗವನ್ನು ‘ಕ್ಯಾಂಪ್ಕೊ’ ಫಂಡ್ನ ಮೂಲಕ ನೀಡಲು ಹಲವಷ್ಟು ಪ್ರಸ್ತಾವನೆಗಳು ಈ ಹಿಂದಿನಿAದಲೂ ಬಂದಿದ್ದು, ಇವೆಲ್ಲವೂ ಬಾಕಿ ಉಳಿದಿದೆ. ಉದಾಹರಣೆಗೆ ಜಿಲ್ಲೆಯಲ್ಲಿರುವ ಸುಮಾರು ೫ ಸಾವಿರ ಎಕರೆಯಷ್ಟು ಪ್ರದೇಶದ ಜಮ್ಮಾಮಲೆಯನ್ನು ಈ ರೀತಿಯಾಗಿ ಅರಣ್ಯ ಇಲಾಖೆಗೆ ನೀಡುವ - ಪಡೆಯುವ ಪ್ರಸ್ತಾವನೆಗಳು ಹಲವು ವರ್ಷಗಳ ಹಿಂದಿನದ್ದಾಗಿದ್ದು, ಇದು ಇನ್ನೂ ನೆನೆಗುದಿಯಲ್ಲೇ ಉಳಿದಿದೆ. ಪಡಿನಾಲ್ಕುನಾಡ್ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಈ ಜಮ್ಮಾ ಮಲೆಗಳು ಬರುತ್ತವೆಯಾದರೂ ಈ ಬಗ್ಗೆ ಆಸಕ್ತಿ ತೋರಿಲ್ಲ. ಇದಕ್ಕೆ ಕೆಲವು ಅಡ್ಡಿಗಳೂ ಮುಂದುವರೆದುಕೊAಡು ಬಂದಿವೆ. ಇದಲ್ಲದೆ, ತಲಕಾವೇರಿ- ಭಾಗಮಂಡಲ ವ್ಯಾಪ್ತಿಯಲ್ಲಿ ಇನ್ನೂ ಹಲವಾರು ಖಾಸಗಿ ವ್ಯಕ್ತಿಗಳು ಈ ರೀತಿಯಾಗಿ ಜಾಗ ನೀಡಲು ಮುಂದೆ ಬಂದಿದ್ದು, ಇವೆಲ್ಲವೂ ಹಾಗೆಯೇ ಬಾಕಿ ಉಳಿದಿವೆ. ಈ ಬಗ್ಗೆ ಯಾರಿಂದಲೂ ಹೆಚ್ಚಿನ ಆಸಕ್ತಿ ಕಂಡುಬAದಿಲ್ಲ. ಇಂತಹ ೧೦೦ಕ್ಕೂ ಅಧಿಕ ಪ್ರಸ್ತಾವನೆಗಳು ಬಾಕಿ ಉಳಿದಿರುವುದಾಗಿ ಹೇಳಲಾಗಿದೆ. ಈ ಹಿಂದೆ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ನಲ್ಲಿ ಸಚಿವರಾಗಿದ್ದ ಸಂದರ್ಭ ೫ ಸಾವಿರ ಎಕರೆ ಜಮ್ಮಾ ಮಲೆ ಖರೀದಿಯ ಪ್ರಸ್ತಾವನೆಗೆ ಒಪ್ಪಿದ್ದರಾದರೂ, ಕೆಲವರ ಮಧ್ಯಪ್ರವೆೆÃಶ- ವಿರೋಧದಿಂದಾಗಿ ಇದು ತಡೆ ಹಿಡಿಯಲ್ಪಟ್ಟಿದೆ. ಆದರೆ ಹಳೆಯ ಪ್ರಸ್ತಾವನೆಗಳೆಲ್ಲವನ್ನೂ ಬದಿಗಿರಿಸಿ ಕೇವಲ ಕೆ.ಎಚ್. ಮುನಿಯಪ್ಪ ಕುಟುಂಬ ಸದಸ್ಯರ ಜಾಗ ಖರೀದಿಯ ಪ್ರಯತ್ನದ ‘ಉತ್ಸುಕತೆ’ ಇಲ್ಲಿ ಪ್ರಶ್ನಾರ್ಹವೆನಿಸಿದೆ. ಅಲ್ಲದೆ ಈ ಜಾಗ ನಿಯಮಾವಳಿಯಂತೆ ಯೋಜನೆ ವ್ಯಾಪ್ತಿಗೆ ಒಳಪಡದು ಎಂದೂ ಹೇಳಲಾಗಿದೆ.
ನಿರ್ದಿಷ್ಟ ಕಾಯಿದೆ ತರಬೇಕು
ಈ ರೀತಿಯಾಗಿ ಜಾಗವನ್ನು ಪಡೆದುಕೊಳ್ಳುವುದಾದಲ್ಲಿ ಸರಕಾರ - ಅರಣ್ಯ ಇಲಾಖೆ ನಿರ್ದಿಷ್ಟವಾಗಿ ಏಕರೂಪದ ಕಾಯಿದೆಯನ್ನು ಜಾರಿಗೆ ತರಬೇಕು. ಬಹಿರಂಗವಾಗಿ ಇದನ್ನು ಜನತೆಗೆ ತಿಳಿಸಿ ಆ ಮೂಲಕ ಖರೀದಿಸಬೇಕು. ಇದರ ಬದಲು ಗುಟ್ಟಾಗಿ ಕೇವಲ ಪ್ರಭಾವಿ ವ್ಯಕ್ತಿಯೊಬ್ಬರ ಜಾಗಕ್ಕೆ ಒತ್ತು ನೀಡುವುದನ್ನು ಪ್ರಶ್ನಿಸುವುದಾಗಿ ಕೊಡಗು ಏಕೀಕರಣ ರಂಗದ ಪ್ರಮುಖ ಹಾಗೂ ವೈಲ್ಡ್ಲೈಫ್ ಫಸ್ಟ್ನ ಎ.ಎ. ತಮ್ಮು ಪೂವಯ್ಯ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬರಿಗೆ ಪ್ರಾಧಾನ್ಯತೆ ನೀಡುವ ಬದಲಾಗಿ ಮುಂದೆ ಬಂದಿರುವ ಇತರರಿಗೆ ಹಾಗೂ ಈ ಹಿಂದಿನ ಪ್ರಸ್ತಾವನೆಗಳಿಗೂ ಅದೇ ಆದ್ಯತೆ ನೀಡಬೇಕೆಂಬುದು ಅವರ ಅಭಿಪ್ರಾಯವಾಗಿದೆ.
ಯುನೆಸ್ಕೋ ಸೈಟ್ಗೆ ಗುರುತಿಸಲಾಗಿರುವ ಪಟ್ಟಿಯ ಪಡಿನಾಲ್ಕ್ನಾಡ್ ವ್ಯಾಪ್ತಿಗೆ ಒಳಪಡುವಲ್ಲಿ ಜಮ್ಮಾ ಮಲೆಯಂತಹ ಜಾಗ ಸೇರಿದಂತೆ ಜಿಲ್ಲೆಯ ಇನ್ನಿತರ ರಕ್ಷಿತಾರಣ್ಯ, ವನ್ಯಜೀವಿ ತಾಣ ಪ್ರದೇಶದ ವ್ಯಾಪ್ತಿಯಲ್ಲಿಯೂ ಈ ರೀತಿಯ ಸಾಕಷ್ಟು ಜಾಗಗಳು ಇದ್ದು, ಏಕರೂಪದ ನಿಯಮದಂತೆ ಖರೀದಿಯಾಗಬೇಕು. ಬದಲಾಗಿ ಒಳಗೊಳಗೆ ನಡೆಯುವ ಪ್ರಯತ್ನ ಸರಿಯಲ್ಲ ಎಂದು ಅವರು ಹೇಳಿದ್ದಾರೆ.
-ವರದಿ : ಶಶಿ, ಸುನಿಲ್.
