ಸುಂಟಿಕೊಪ್ಪ, ಜೂ. ೧೨: ಕೆದಕಲ್ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಎ. ಬಾಲಕೃಷ್ಣ ರೈ ಅವರ ತೋಟದಲ್ಲಿ ದುಷ್ಕರ್ಮಿಗಳು ಮರಗಳಿಗೆ ವಿಷ ಹಾಕಿ ನಾಶಪಡಿಸಿರುವ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆದಕಲ್ ಗ್ರಾಮ ಪಂಚಾಯಿತಿಯ ಹಾಲೇರಿ ಗ್ರಾಮದಲ್ಲಿ ಬಿ.ಎ. ಬಾಲಕೃಷ್ಣ ರೈ ಅವರ ಮಗಳಾದ ಅನಿತಾ ಬಿ.ರೈ ಅವರ ಹೆಸರಿನಲ್ಲಿರುವ ಕಾಫಿ ತೋಟಕ್ಕೆ ದುಷ್ಕರ್ಮಿಗಳು ಅಕ್ರಮ ಪ್ರವೇಶ ಮಾಡಿ ಸುಮಾರು ೫೦ ಸಾವಿರ ಬೆಲೆ ಬಾಳುವ ೫ ಸಿಲ್ವರ್ ಮರಗಳಿಗೆ ಮರ ಸಾಯುವ ಔಷಧಿಯನ್ನು ಹಾಕಿದ್ದು ಇದೀಗ ಮರಗಳು ಸಾಯುತ್ತಿವೆ. ವಿಷಹಾಕಿ ದುರುಳರನ್ನು ಪತ್ತೆ ಹಚ್ಚಿ ಮುಂದಿನ ಕ್ರಮಕೈಗೊಳ್ಳಬೇಕೆಂದು ಸುಂಟಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.