ಗೋಣಿಕೊಪ್ಪ ವರದಿ, ಜೂ. ೧೨: ಲಾಕ್ಡೌನ್ ನಡುವೆ ವೇಗವಾಗಿ ಬಂದ ಜೀಪೊಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಎದುರಿನ ಮುಖ್ಯರಸ್ತೆಯಲ್ಲಿ ಆಟವಾಡಿಕೊಳ್ಳುತ್ತಿದ್ದ ನಾಯಿಗಳಿಗೆ ಡಿಕ್ಕಿ ಹೊಡೆದು ಎರಡು ನಾಯಿಗಳು ಸಾವಿಗೀಡಾದ ಘಟನೆ ಸಂಭವಿಸಿದೆ.
ನರಳಾಡಿ ಜೀವಬಿಡುತ್ತಿದ್ದ ನಾಯಿಗಳ ಬಾಯಿಗೆ ಪೈಂಟಿAಗ್ ಕೆಲಸದವರು ನೀರು ಹಾಕಿ ಮಾನವೀಯತೆ ತೋರಿದರು. ಡಿಕ್ಕಿ ಹೊಡೆದು ತೆರಳಿದ ಜೀಪ್ ಚಾಲಕನಿಗೆ ಹಿಡಿಶಾಪ ಹಾಕಿದರು. ಕನಿಷ್ಟ ನಾಯಿಗಳನ್ನು ಎತ್ತಿ ಬದಿಗೆ ಹಾಕುವಷ್ಟು ಕರುಣೆ ತೋರಿಲ್ಲ ಎಂದು ತಾವೇ ಗೊಣಗಿಕೊಂಡರು. ರಸ್ತೆ ಮಧ್ಯೆ ಬಿದ್ದಿದ್ದ ನಾಯಿಯ ದೇಹವನ್ನು ಬದಿಗೆ ಹಾಕಿ ಹೃದಯವಂತಿಕೆ ತೋರಿದರು.
ಲಾಕ್ಡೌನ್ ನಡುವೆ ವಾಹನ ಓಡಾಟ ಕಡಿಮೆ ಇದ್ದ ಸಂದರ್ಭ ನಾಯಿಗಳು ವಾಹನಕ್ಕೆ ಡಿಕ್ಕಿಯಾಗಿ ಸಾವಿಗೀಡಾಗಿರುವುದು ಬೇಸರದ ಸಂಗತಿ. ವೇಗ ಕಡಿಮೆ ಇದ್ದಿದ್ದರೆ ಡಿಕ್ಕಿಯಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.