ಮಡಿಕೇರಿ, ಜೂ. ೧೨: ೨೦೨೦-೨೧ನೇ ಸಾಲಿನ ಆರ್ಎಸ್ಪಿಡಿ ‘ಇನ್ಸಿ÷್ಟಟ್ಯೂಷನಲ್ ಪ್ಲಾಂಟೇಶನ್’ ಯೋಜನೆಯಡಿಯಲ್ಲಿ ಮಡಿಕೇರಿ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸಲಾಗಿದ್ದು, ತಮ್ಮ ಜಮೀನಿನಲ್ಲಿ ಈ ಸಸಿಗಳನ್ನು ನೆಟ್ಟು ಬೆಳೆಸಲು ಇಚ್ಚಿಸುವ ರೈತರು ಮಡಿಕೇರಿ ಅರಣ್ಯ ವಲಯದ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ, ಇಲಾಖೆಯು ನಿಗದಿಪಡಿಸಿರುವ ದರಗಳನ್ನು ಪಾವತಿಸಿ ಸಸಿಗಳನ್ನು ಪಡೆಯಬಹುದಾಗಿದೆ.
ಸೂಚನೆಗಳು : ೬x೯ ಮತ್ತು ೮x೧೨ ಅಳತೆಯ ನಂದಿ, ಮಹಾಗನಿ, ಹೆಬ್ಬಲಸು, ಪಣ್ಪುಳಿ, ಬಿದಿರು, ಹೊಂಗೆ, ಹೊಳೆದಾಸವಾಳ, ಸಂಪಿಗೆ, ನೇರಳೆ, ಕುಂಟುನೇರಳೆ, ಸೀಬೆ ಮುಂತಾದ ಸಸಿಗಳು ಲಭ್ಯವಿದ್ದು, ೬x೯ ಅಳತೆಯ ಸಸಿಗಳಿಗೆ ರೂ. ೧ ಮತ್ತು ೮x೧೨ ಅಳತೆಯ ಸಸಿಗಳಿಗೆ ರೂ. ೩ರಂತೆ ಪಾವತಿಸಿ ಪಡೆದುಕೊಳ್ಳಬಹುದು.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ ೦೮೨೭೨-೨೯೮೧೬೧ ಹಾಗೂ ಉಪವಲಯ ಅರಣ್ಯಾಧಿಕಾರಿ ಬಾಬು ರಾಥೋಡ್ -೯೭೪೧೪೫೩೧೬೬, ಅರಣ್ಯ ರಕ್ಷಕರಾದ ಭವ್ಯ ಹೆಚ್.ಪಿ. -೯೪೮೨೨೪೬೧೦೩, ಗಣಪತಿ ಮಂಜುನಾಥ್ ನಾಯಕ್ - ೮೧೯೭೭೫೩೮೬೬ ಇವರುಗಳನ್ನು ಸಂಪರ್ಕಿಸಬಹುದು.
ದಾಖಲಾತಿಯೊಂದಿಗೆ ಸಸಿ ಕೋರಿ ಅರ್ಜಿ, ಜಮೀನಿನ ಆರ್ಟಿಸಿ,ಪಾಸ್ಪೋರ್ಟ್ ಅಳತೆಯ ೨ ಭಾವಚಿತ್ರಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.