ಶನಿವಾರಸಂತೆ, ಜೂ. ೧೦: ಸ್ಥಳೀಯ ಗ್ರಾಮ ಪಂಚಾಯಿತಿಯ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷೆ ಸರೋಜಾಶೇಖರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಬಗ್ಗೆ ಹಾಗೂ ಸೋಂಕಿತರ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಪಟ್ಟಣದ ೪ ವಿಭಾಗದಲ್ಲೂ ಕೋವಿಡ್ ಪ್ರಕರಣಗಳು ಅಧಿಕವಾಗುತ್ತಿರುವುದರಿಂದ ಹೋಂ ಐಸೋಲೇಷನ್ಗೆ ಅನುಮತಿ ನೀಡದೇ ೧೦೦ಕ್ಕೆ ೧೦೦ರಷ್ಟು ಸೋಂಕಿತರನ್ನು ಕೊರೊನಾ ಕೇರ್ ಸೆಂಟರ್ಗೆ ದಾಖಲಿಸುವಂತೆ ತೀರ್ಮಾನಿಸಲಾಯಿತು.
ಕೊರೊನಾ ಲಕ್ಷಣಗಳು ಇರುವವರು ಕಂಡುಬAದಲ್ಲಿ ಅವರನ್ನು ಆರ್ಎಟಿ ಪರೀಕ್ಷೆಗೆ ಒಳಪಡಿಸಲು ಸಂಬAಧಿಸಿದ ಆಶಾ ಕಾರ್ಯಕರ್ತೆಯರಿಗೆ ಸೂಚಿಸುವಂತೆ ತೀರ್ಮಾನಿಸಲಾಯಿತು.
ಸೋಂಇತರು ಮನೆಯಿಂದ ಹೊರಗಡೆ ಬಂದಿದ್ದು ಕಂಡುಬAದಲ್ಲಿ ಸೋಂಕಿತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆಯೂ ಕೊರೊನಾ ಫ್ಲೆöÊಯಿಂಗ್ ಸ್ಕಾ÷್ವಡ್ನವರು ಪಂಚಾಯಿತಿ ಜೊತೆ ಕೈಜೋಡಿಸಿದರೆ ಪಂಚಾಯಿತಿ ಕಾರ್ಯಪಡೆಗೆ ಕೊರೊನಾ ಹರಡದಂತೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸದಸ್ಯರು ಕಸ ವಿಲೇವಾರಿಯ ಬಗ್ಗೆ ಚರ್ಚೆ ನಡೆಸಿದರು. ಹಸಿ ಕಸ ಮತ್ತು ಒಣಕಸವನ್ನು ಸರಿಯಾಗಿ ಬೇರ್ಪಡಿಸಿಕೊಡುತ್ತಿಲ್ಲವಾದುದರಿಂದ ವಿಲೇವಾರಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ಕಡ್ಡಾಯವಾಗಿ ಕಸವನ್ನು ಒಣ ಮತ್ತು ಹಸಿ ಕಸವಾಗಿ ಬೇರ್ಪಡಿಸಿಕೊಡಲು ಸಾರ್ವಜನಿಕರಿಗೆ ಹಾಗೂ ಮಹಿಳಾ ಸ್ವಸಹಾಯ ಗುಂಪಿನವರಿಗೆ ತಿಳಿಸಲು ಸಭೆಯಲ್ಲಿ ತೀರ್ಮಾನಿಸಿದರು.
ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಸಿ. ಶರತ್ಶೇಖರ್, ಗೀತಾ ಹರೀಶ್, ಫರ್ಜಾನ ಶಾಹಿದ್ ಖಾನ್, ಸರಸ್ವತಿ, ಕಾವೇರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಲೆಕ್ಕ ಸಹಾಯಕ ವಸಂತ್, ಕಂಪ್ಯೂಟರ್ ನಿರ್ವಾಹಕಿ ಫೌಜಿಯಾ ಬಾನು, ಸಿಬ್ಬಂದಿ ಹಾಜರಿದ್ದರು.