ಮಡಿಕೇರಿ, ಜೂ. ೧೧: ಕಳೆದ ಮಳೆಗಾಲದಲ್ಲಿ ಬಹುತೇಕ ಕುಸಿದು ಬಿದ್ದು ಸಂಪರ್ಕ ಕಳೆದುಕೊಳ್ಳುವ ಆತಂಕಕ್ಕೆ ಕಾರಣವಾಗಿದ್ದ ಚೆಟ್ಟಳ್ಳಿಯಿಂದ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಕಾರ್ಯ ಬಹುತೇಕ ಮುಕ್ತಾಯಗೊಂಡಿದೆ. ಸಾಕಷ್ಟು ಸವಾಲಿನ ಕಾಮಗಾರಿಯ ಮೂಲಕ ರಸ್ತೆಯನ್ನು ಕುಸಿದು ಬೀಳದಂತೆ ತಡೆಗಟ್ಟುವ ನಿಟ್ಟಿನಲ್ಲಿ ನವತಾಂತ್ರಿಕತೆ ನೆರವಾಗಿದೆ.
ಚೆಟ್ಟಳ್ಳಿ-ಕತ್ತಲೆಕಾಡು ಸಂಪರ್ಕ ರಸ್ತೆಯಲ್ಲಿ ಕತ್ತಲೆಕಾಡು ಬೆಟ್ಟದ ಅನೇಕ ಭಾಗ ಕುಸಿದ ಪರಿಣಾಮ ಕತ್ತಲೆಕಾಡು ಬಳಿ ರಸ್ತೆ ಸಂಪರ್ಕ ಕಳೆದ ಮಳೆಗಾಲದಲ್ಲಿ ಕಡಿತ ಗೊಂಡಿತ್ತು. ಬೆಟ್ಟ ಕುಸಿತದಿಂದಾಗಿ ಸುಮಾರು ೫೦೦ ಮೀಟರ್ ರಸ್ತೆಯೇ ಪಾತಾಳಕ್ಕೆ ಕುಸಿದು ಬೀಳುವ ಆತಂಕದೊAದಿಗೆ ಹೀಗಾದಲ್ಲಿ ಚೆಟ್ಟಳ್ಳಿ-ಕತ್ತಲೆಕಾಡು ನಡುವಿನ ರಸ್ತೆ ಸಂಪರ್ಕವೇ ಇಲ್ಲವಾಗುವ ಸಾಧ್ಯತೆಗೂ ಇದು ಕಾರಣವಾಗಿತ್ತು.
ಕೆಲ ತಿಂಗಳುಗಳ ಹಿಂದೆ ಈ ಬಗ್ಗೆ ‘ಶಕ್ತಿ’ಯಲ್ಲಿ ವಿಶೇಷ ವರದಿ ಪ್ರಕಟಗೊಂಡ ಬಳಿಕ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸ್ಥಳಕ್ಕೆ ತೆರಳಿ ರಸ್ತೆಯ ಕಾಯಕಲ್ಪಕ್ಕೆ ವಿಶೇಷ ಯೋಜನೆ ರೂಪಿಸಲು ಮುಂದಾದರು.
ಲೋಕೋಪಯೋಗಿ ಇಲಾಖೆ ಮುಖಾಂತರ ಚೆಟ್ಟಳ್ಳಿ - ಕತ್ತಲೆಕಾಡು ರಸ್ತೆ ದುರಸ್ತಿಗಾಗಿ ೧೨ ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ ಶಾಸಕರು, ೭ ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ, ಮೋರಿ ನಿರ್ಮಾಣಕ್ಕೆ ಅನುಮೋದನೆ ನೀಡಿದರು. ಉಳಿದ ರೂ. ೫ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣದ ಯೋಜನೆ ರೂಪಿಸಲಾಯಿತು.
ಕಳೆದ ವರ್ಷ ಸತತ ಮಳೆ ಯಿಂದಾಗಿ ಚೆಟ್ಟಳ್ಳಿ - ಕತ್ತಲೆಕಾಡು ರಸ್ತೆ ತೀರಾ ಹದಗೆಟ್ಟು ಸುಮಾರು ೫ ಕಿ.ಮೀ. ಗುಂಡಿಗಳೇ ತುಂಬಿತ್ತು.
ಬಸ್ ಸಂಚಾರ ಸಾಧ್ಯವೇ ಇಲ್ಲದಂತೆ ರಸ್ತೆ ಹಾನಿಗೊಳಗಾಗಿತ್ತು. ಇದರಿಂದಾಗಿ ಚೆಟ್ಟಳ್ಳಿ - ಮಡಿಕೇರಿ ಪ್ರಯಾಣಿಕರಿಗೆ ಬಸ್ ಮೂಲಕ ಪ್ರಯಾಣಿಸಲು ಸಾಧ್ಯವೇ ಆಗಿರಲಿಲ್ಲ.
ಕಳೆದ ಎರಡೂವರೆ ತಿಂಗಳಿನಿAದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಶೈಜನ್ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಾಣದ ಗುರಿ
ಕಳೆದ ಮಳೆಗಾಲದಲ್ಲಿ ಭೂಕುಸಿತದಿಂದಾಗಿ ಸಂಪರ್ಕವೇ ಕಡಿತಗೊಳ್ಳುವ ಅಪಾಯದ ಸ್ಥಿತಿಯಲ್ಲಿದ್ದ ಚೆಟ್ಟಳ್ಳಿ - ಕತ್ತಲೆಕಾಡು ರಸ್ತೆಯನ್ನು ಮತ್ತೆ ಸಂಪರ್ಕಕ್ಕೆ ಯೋಗ್ಯವಾಗುವ ರೀತಿಯಲ್ಲಿ ರೂಪಿಸಲಾಗಿದೆ. ಜನರ ಬೇಡಿಕೆಗೆ ಸ್ಪಂದಿಸಿ ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಅನುದಾನವನ್ನೂ ತರಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿಯೇ ಕಾರ್ಮಿಕರು ಛಲದಿಂದ ಕಾಮಗಾರಿ ನಿರ್ವಹಿಸಿದ್ದು ಪ್ರಶಂಸನೀಯ. ಈಗಾಗಲೇ ಚೆಟ್ಟಳ್ಳಿಯಿಂದ ಅಬ್ಯಾಲದವರೆಗೆ ೩ ಕಿ.ಮೀ. ಕಾಂಕ್ರೀಟ್ ರಸ್ತೆಯನ್ನೂ ಕಳೆದ ವರ್ಷವೇ ನಿರ್ಮಿಸಲಾಗಿತ್ತು. ಇದೀಗ ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಗ್ಯ ರಸ್ತೆಯನ್ನು ಚೆಟ್ಟಳ್ಳಿ - ಕತ್ತಲೆಕಾಡು ಮಾರ್ಗದ ೮ ಕಿ.ಮೀ. ಅಂತರದಲ್ಲಿ ನಿರ್ಮಾಣ ಮಾಡುವ ಮೂಲಕ ರಸ್ತೆ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. ಸ್ಥಳೀಯರ ರಸ್ತೆ ಸಂಚಾರದ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡಿದ್ದೇನೆ.
- ಎಂ.ಪಿ. ಅಪ್ಪಚ್ಚು ರಂಜನ್, ಶಾಸಕರು.ಬೆಟ್ಟ ಹಾದುಹೋಗುವ ಇತರೆಡೆ ಅಪಾಯದ ಸಾಧ್ಯತೆ ಮಳೆಗಾಲದ ಸಂದರ್ಭ ಇಲ್ಲದಿಲ್ಲ ಎಂದೂ ಸ್ಥಳೀಯರು ಹೇಳುತ್ತಾರೆ.
ಬಹಳಷ್ಟು ವರ್ಷಗಳ ಹಿಂದೆಯೇ ಬ್ರಿಟಿಷರ ಆಡಳಿತ ಕಾಲದಲ್ಲಿ ಮಡಿಕೇರಿಯಿಂದ ಚೆಟ್ಟಳ್ಳಿಗೆ ಕುದುರೆ ಸಾರೋಟು ಮೂಲಕ ಅಧಿಕಾರಿಗಳು ಸಾಗಲು ನಿರ್ಮಿಸಿದ್ದ ಐತಿಹಾಸಿಕ ರಸ್ತೆ ಎಂಬ ಹಿರಿಮೆ ಇದಕ್ಕಿದೆ. ಅಂತೆಯೇ ಕೊಡಗು ಜಿಲ್ಲೆಯಲ್ಲಿಯೇ ಮಡಿಕೇರಿಯಿಂದ ಚೆಟ್ಟಳ್ಳಿಯವರೆಗೆ ೧೬ ಕಿ.ಮೀ. ಸಮತಟ್ಟಾಗಿರುವ ರಸ್ತೆ ಎಂಬ ಹಿರಿಮೆ ಕೂಡ ಇದಕ್ಕಿದೆ. ಹಾಗೇ, ಕೊಡಗಿನಲ್ಲಿಯೇ ಅತ್ಯಂತ ಹೆಚ್ಚು ತಿರುವುಗಳಿಂದ ಕೂಡಿದ ರಸ್ತೆಯೂ ಇದಾಗಿದೆ. ಅಂತೂ ಇಂತೂ ಈ ಐತಿಹಾಸಿಕ ಮಹತ್ವದ ರಸ್ತೆಯ ರಕ್ಷಣೆ ಕಾರ್ಯ ಬಹುತೇಕ ಪೂರ್ಣ ಗೊಂಡಿದೆ. ಹೀಗಿದ್ದರೂ ಮತ್ತಷ್ಟು ಕಿ.ಮೀ. ರಸ್ತೆ ದುರಸ್ತಿ, ನೂತನ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ಬಾಕಿ ಇರುವುದ ರಿಂದಾಗಿ ಮುಂದಿನ ಕೆಲವು ತಿಂಗಳು ಈ ಮಾರ್ಗದಲ್ಲಿ ಬಸ್ಗಳ ಸಂಚಾರ ಕಷ್ಟವಾಗಲಿದೆ.
ಹೀಗಿದ್ದರೂ ಕಾರ್, ವ್ಯಾನ್, ಜೀಪ್ ಮುಂತಾದ ಚತುಷ್ಚಕ್ರ ವಾಹನಗಳ ಸಂಚಾರಕ್ಕೆ ಈಗ ಗುಣ ಮಟ್ಟದ ರಸ್ತೆ ಸಿದ್ಧವಾಗಿರುವುದು ಪ್ರಯಾಣಿಕರಿಗೆ ತುಸು ನೆಮ್ಮದಿ ತಂದಿದೆ. ಲಾಕ್ಡೌನ್ನಿಂದಾಗಿ ಕಳೆದ ೧ ತಿಂಗಳಿನಲ್ಲಿ ವಾಹನಗಳ ಸಂಚಾರ ಕಡಿಮೆಯಿದ್ದದ್ದೂ ಕೂಡ ಈ ರಸ್ತೆಯಲ್ಲಿ ತಡೆಗೋಡೆ, ಮೋರಿ ನಿರ್ಮಾಣ ಕಾಮಗಾರಿಗೆ ವರದಾನವಾಗಿತ್ತು.
- ಅನಿಲ್ ಎಚ್.ಟಿ.