ಮಡಿಕೇರಿ, ಜೂ. ೧೦: ಕೊಡವ ಕೂಟಾಳಿಯಡ ಕೂಟದ ವತಿಯಿಂದ ಕೊಡವ ಜನಾಂಗದ ಮಕ್ಕಳಿಗಾಗಿ ವಾಟ್ಸಪ್ ನಲ್ಲಿ ಕೊಡಗ್'ರ ಚುಪ್ಪಿ ಕೋಗಿಲೆಯ ಎನ್ನುವ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಕೊಡಗು ಅಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯದಲ್ಲಿರುವ ೧೫೧ ಕೊಡವ ಮಕ್ಕಳು ಒಂದನೆ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಸ್ಪರ್ಧೆಯ ನಿಯಮಗಳ ಪ್ರಕಾರ ತೀರ್ಪುಗಾರರು ನೀಡಿದ ಅಂಕಗಳ ಆಧಾರದ ಮೇಲೆ ಅತಿ ಹೆಚ್ಚು ಅಂಕಗಳನ್ನು ಪಡೆದ ೧೫ ಮಕ್ಕಳನ್ನು ಎರಡನೆ ಸುತ್ತಿಗೆ ಆಯ್ಕೆ ಮಾಡಲಾಗಿದೆ.

ಆಯ್ಕೆಯಾದ ಮಕ್ಕಳ ಹೆಸರು ಇಂತಿವೆ: ಅಮ್ಮಂಡ ತರುಣ್ ಕರುಂಬಯ್ಯ -ಮೈತಾಡಿ, ಅಚ್ಚಿಯಂಡ ಧೃತಿ ಗಣೇಶ್ - ಪೊನ್ನಂಪೇಟೆ, ಕಾಟಿಮಾಡ ಡಿ. ಭಾಷಿತ - ಕೋಟೂರ್, ಕರ್ತಮಾಡ ಯಾನ ಬೋಜಮ್ಮ - ಪೊನ್ನಂಪೇಟೆ, ಕಾಂಡAಡ ಕೃತ್ತಿಕಾ ಪೂವಣ್ಣ - ಬೆಂಗಳೂರು, ಕೊಟ್ಟಂಗಡ ಅನ್ವಿತ ಬೊಳ್ಳಮ್ಮ - ಬಲ್ಯಮಂಡೂರ್, ಚೆಯ್ಯಂಡ ದೇಶಿಕಾ ದೇಚಮ್ಮ - ಚೆಯ್ಯಂಡಾಣೆ, ತಾಪಂಡ ಹರ್ಷಿತ್ ಪೊನ್ನಪ್ಪ - ಬಲ್ಲಮಾವಟಿ, ನೆಚ್ಚಾರಂಡ ಸಾಧ್ವಿ ಮಂದಣ್ಣ - ಮೈಸೂರು, ಬೊಳ್ಳಚೆಟ್ಟಿರ ಶರೀನ್ ಚೆಂಗಪ್ಪ - ಬಲಮುರಿ, ಮಾಚೆಟ್ಟಿರ ಪೂವಯ್ಯ - ಬೇತು ನಾಪೋಕ್ಲು, ಮಾದೇಟಿರ ನಮನ್ ಮೊಣ್ಣಪ್ಪ - ಮೈಸೂರು, ಮೀದೇರಿರ ಶ್ರಾವ್ಯ ಚೋಂದಮ್ಮ - ಬಾಡಗರಕೇರಿ, ಮೂಕೋಂಡ ಸ್ವಯಂ ನಾಣಯ್ಯ - ಅಮ್ಮತ್ತಿ, ಹಂಚೆಟ್ಟಿರ ದಿಯಾ ದೇಚಮ್ಮ, ಮುಕ್ಕೋಡ್ಲು. ಆಯ್ಕೆಯಾದ ಸ್ಪರ್ಧಿಗಳಿಗೆ ಎರಡನೆ ಸುತ್ತಿನ ಸ್ಪರ್ಧೆ ತಾ. ೧೩ರ ಭಾನುವಾರ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಅವರನ್ನು (೯೯೭೨೫೩೮೦೩೦) ಸಂಪರ್ಕಿಸಬಹುದಾಗಿದೆ.