ಸೋಮವಾರಪೇಟೆ,ಜೂ.೧೦: ತಾಲೂಕಿನ ಪ್ರವಾಸಿ ತಾಣ ಮಕ್ಕಳಗುಡಿ ಬೆಟ್ಟದ ತಳಭಾಗದ ಕಾಫಿ ತೋಟದಲ್ಲಿ ತಾ. ೮ರಂದು ಕಂಡುಬAದ ಅಪರಿಚಿತ ವ್ಯಕ್ತಿಯ ಶವದ ಗುರುತು ಪತ್ತೆಗೆ ಸೋಮವಾರಪೇಟೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಬೆಟ್ಟದ ತಳಭಾಗದಲ್ಲಿ ಸಂಪೂರ್ಣವಾಗಿ ಕೊಳೆತು ಹೋಗಿರುವ ಸ್ಥಿತಿಯಲ್ಲಿ ಮೃತದೇಹವೊಂದು ದೊರೆತಿದ್ದು, ಘಟನೆ ನಡೆದು ಕನಿಷ್ಟ ೪ ತಿಂಗಳಾಗಿರಬಹುದು. ಸ್ಥಳದಲ್ಲಿ ಕೆಂಪು ಬಣ್ಣದ ಜರ್ಕಿನ್ ಹಾಗೂ ಬಿಳಿ ಬಣ್ಣದ ಜೀನ್ಸ್ ಪ್ಯಾಂಟ್ ಮಾತ್ರ ದೊರಕಿದ್ದು, ಜರ್ಕಿನ್ ಜೇಬಿನೊಳಗೆ ಬೀಡಿ ಕಟ್ಟು, ೫೦ ರೂಪಾಯಿ ಹಣ ಲಭಿಸಿದೆ. ಇದರಿಂದಾಗಿ ಮೇಲ್ನೋಟಕ್ಕೆ ಪುರುಷನ ಮೃತದೇಹ ಎಂದು ಅಂದಾಜಿಸಲಾಗಿದೆ.

ಕಾಫಿ ತೋಟದೊಳಗೆ ಮೃತದೇಹದ ಮೂರು ತುಂಡುಗಳು ಕಂಡುಬAದಿದ್ದು, ಮೃತನ ಸಾವಿನ ಬಗ್ಗೆ ಸಂಶಯವಿರುತ್ತದೆ ಎಂದು ತೋಟದ ಮಾಲೀಕ ಕೆ.ಪಿ. ರೋಷನ್ ದೂರು ನೀಡಿದ್ದು, ಮೃತ ವ್ಯಕ್ತಿಯ ಪತ್ತೆಗೆ ಸಾರ್ವಜನಿಕರು ಸಹಕರಿಸುವಂತೆ ಠಾಣಾಧಿಕಾರಿ ಶ್ರೀಧರ್ ಮನವಿ ಮಾಡಿದ್ದಾರೆ.

ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾಣೆಯಾಗಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವAತೆ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.