ಮಡಿಕೇರಿ, ಜೂ. ೧೦: ಕೊಡಗು ಜಿಲ್ಲೆಗೆ ಕಳೆದ ಕೆಲವು ತಿಂಗಳಿನಿAದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಕ ಪೂರೈಕೆಯಾಗುತ್ತಿದ್ದ ಸೀಮೆಎಣ್ಣೆಯ ಪ್ರಮಾಣದಲ್ಲಿ ವ್ಯತ್ಯಯವಾಗಿದ್ದು, ಇದರಿಂದ ಕಾರ್ಡ್ದಾರರಿಗೆ ಸೀಮೆಎಣ್ಣೆ ಪಡೆಯಲು ಸಮಸ್ಯೆ ಎದುರಾಗಿದೆ. ಇದೀಗ ಜಿಲ್ಲೆಯಲ್ಲಿ ಮಳೆಗಾಲವೂ ಆರಂಭಗೊಳ್ಳಲಿದ್ದು, ಇದನ್ನು ಸರಿಪಡಿಸಿ ಅಗತ್ಯ ಪ್ರಮಾಣದ ಸೀಮೆಎಣ್ಣೆಯನ್ನು ವಿತರಿಸುವಂತಾಗಬೇಕು ಎಂದು ಕೊಡಗು ಜನತಾ ಬಜಾರ್‌ನ ಅಧ್ಯಕ್ಷ ಎನ್.ಎ. ರವಿಬಸಪ್ಪ ಅವರು ಒತ್ತಾಯಿಸಿದ್ದಾರೆ.ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಕಾರ್ಡ್ದಾರರಿಗೆ ತಿಂಗಳಿಗೆ ೫ ಲೀಟರ್ ಸೀಮೆಎಣ್ಣೆ ವಿತರಿಸಲಾಗುತ್ತಿತ್ತು. ಆದರೆ ನಂತರದಲ್ಲಿ ಇದೂ ಕಡಿಮೆಯಾಗಿದೆ. ಈ ಬಗ್ಗೆ ‘ಶಕ್ತಿ’ ಮಾಹಿತಿ ಸಂಗ್ರಹಿಸಿದ ಸಂದರ್ಭ ತಿಳಿದು ಬಂದAತೆ ಪ್ರಸ್ತುತದ ವ್ಯವಸ್ಥೆ ಹೀಗಿದೆ. ಅಡುಗೆ ಅನಿಲ ಸಂಪರ್ಕವೇ ಇಲ್ಲದ ಮಂದಿಗೆ ೩ ಲೀಟರ್ ಹಾಗೂ ಅಡುಗೆ ಅನಿಲ ಸಂಪರ್ಕ ಇದ್ದು ಸೀಮೆಎಣ್ಣೆ ಪಡೆಯಲು ನೋಂದಾಯಿತವಾಗಿರುವ ಬಿಪಿಎಲ್ ಕಾರ್ಡ್ದಾರರಿಗೆ ಒಂದು ಲೀಟರ್‌ನಂತೆ ಸೀಮೆಎಣ್ಣೆ ನೀಡಬೇಕಿದೆ. ಇದರಂತೆ ಪ್ರಸ್ತುತ ಜಿಲ್ಲೆಯಲ್ಲಿ ೧೬೨೮ ಅಡುಗೆ ಅನಿಲ ಸಂಪರ್ಕ ಇಲ್ಲದ ಮಂದಿ ಹಾಗೂ ಈ ಸಂಪರ್ಕ ಇದ್ದು ಸೀಮೆಎಣ್ಣೆ ಪಡೆಯಲು ನೋಂದಾಯಿತವಾಗಿರುವ ೬೪,೧೨೩ ಕಾರ್ಡ್ದಾರರು ಇದ್ದಾರೆ. ಇವರೆಲ್ಲರೂ ನಗರ ಪ್ರದೇಶ ಹೊರತುಪಡಿಸಿದವ ರಾಗಿದ್ದಾರೆ. ನಿಯಮದಂತೆ ನಗರ ಹಾಗೂ ಪಟ್ಟಣ ಪಂಚಾಯಿತಿ ಪ್ರದೇಶವಾದ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪ.ಪಂ. ವ್ಯಾಪ್ತಿಯವರಿಗೆ ಈ ಸೌಲಭ್ಯ ಇಲ್ಲ.

ಇದೀಗ ೧೧ ಸಾವಿರ ಲೀಟರ್ ಕಡಿಮೆಈ ನಡುವೆ ಕಳೆದ ನಾಲ್ಕೆöÊದು ತಿಂಗಳಿನಿAದ ಜಿಲ್ಲೆಗೆ ಪೂರೈಕೆಯಾಗುತ್ತಿದ್ದ ಸೀಮೆಎಣ್ಣೆಯ ಪ್ರಮಾಣ ಇಳಿಮುಖವಾಗಿದೆ. ಈ ಹಿಂದೆ ೬೯ ಸಾವಿರ ಲೀಟರ್‌ನಷ್ಟು ಬರುತ್ತಿದ್ದ ಪ್ರಮಾಣದಲ್ಲಿ ಸುಮಾರು ೧೧ ಸಾವಿರ ಲೀಟರ್ ಕಡಿಮೆಯಾಗಿದ್ದು, ಇದೀಗ ಅಂದಾಜು ೫೮ ಸಾವಿರ ಲೀಟರ್ ಮಾತ್ರ ಜಿಲ್ಲೆಗೆ ಬರುತ್ತಿದೆ. ಇದರಿಂದಾಗಿ ಸಮಸ್ಯೆ ಸೃಷ್ಟಿಯಾಗಿದ್ದು, ಪ್ರತಿ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲೆಯಿಂದ ಪೂರೈಕೆಯಾಗುತ್ತಿದ್ದ ನಿಗದಿತ ಪ್ರಮಾಣದ ಪೈಕಿ ಸುಮಾರು ೫೦ ರಿಂದ ೬೦ ಲೀಟರ್ ಕಡಿಮೆಯಾಗಿದೆ.

ಈ ಕಾರಣದಿಂದಾಗಿ ಕಾರ್ಡ್ದಾರರಿಗೆ ಅಗತ್ಯ ಪ್ರಮಾಣದ ಇಂಧನ ಸಿಗುತ್ತಿಲ್ಲ. ಕೇವಲ ೧ ಲೀಟರ್‌ನಷ್ಟು ಮಾತ್ರ ನೀಡಲಾಗುತ್ತಿದೆ. ಅದರಲ್ಲೂ ಕೆಲವು

(ಮೊದಲ ಪುಟದಿಂದ) ಕಾರ್ಡ್ದಾರರಿಗೆ ಇದೂ ಸಿಗುತ್ತಿಲ್ಲ ಎಂಬAತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ರವಿಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಇದೀಗ ಮಳೆಗಾಲವೂ ಎದುರಾಗುತ್ತಿದೆ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿದ್ಯುತ್ ಸರಿ ಇರುವುದಿಲ್ಲ. ಅಲ್ಲದೆ ಸೌದೆಯನ್ನೂ ಬಳಸುವುದು ಕಷ್ಟಕರವಾಗಿರುವುದರಿಂದ ನಗರ ಪ್ರದೇಶದ ಜನತೆಗೂ ಸೀಮೆಎಣ್ಣೆ ನೀಡುವಂತಾಗಬೇಕು. ಅಲ್ಲದೆ ಎಲ್ಲಾ ಕಾರ್ಡ್ದಾರರಿಗೂ ಕನಿಷ್ಟ ೩ ಲೀಟರ್ ಸೀಮೆಎಣ್ಣೆಯನ್ನು ಪೂರೈಸುವಂತಾಗ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದೀಗ ಒಂದೆರಡು ದಿನದ ಹಿಂದೆ ಮಳೆಗಾಲಕ್ಕೆ ಸಂಬAಧಿಸಿದAತೆ ರಾಜ್ಯ ಕಂದಾಯ ಸಚಿವರೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್ನಲ್ಲಿ ಜಿಲ್ಲೆಗೆ ಹೆಚ್ಚುವರಿ ಸೀಮೆಎಣ್ಣೆಗೆ ಮನವಿ ಮಾಡಿದ್ದು, ಕಂದಾಯ ಸಚಿವರು ಇದನ್ನು ಆಹಾರ ಸಚಿವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.

ತಾ. ೧೧ ರಂದು ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಿಗದಿಯಾಗಿದ್ದು, ಈ ಸಭೆಯಲ್ಲಿಯೂ ಈ ಸಮಸ್ಯೆಯ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.