ವೀರಾಜಪೇಟೆ, ಜೂ. ೧೦: ವೀರಾಜಪೇಟೆಯಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಸಂಘದ ಲೆಕ್ಕದ ಹಣದಲ್ಲಿ ವ್ಯತ್ಯಾಸ ಕಂಡುಬAದ ಹಿನ್ನೆಲೆ ಸಂಘದ ಆಡಿಟರ್ ಹಾಗೂ ಸಹಕಾರ ಸಂಘಗಳ ಜಿಲ್ಲೆಯ ಅಧಿಕಾರಿಗಳ ಮುಂದೆ ದಾಖಲಾತಿಗಳನ್ನು ಹಾಜರು ಪಡಿಸಲು ಸಂಘದ ಕಾರ್ಯ ನಿರ್ವಹಣಾಧಿಕಾರಿ ಹಿಂದೇಟು ವೀರಾಜಪೇಟೆ, ಜೂ. ೧೦: ವೀರಾಜಪೇಟೆಯಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಸಂಘದ ಲೆಕ್ಕದ ಹಣದಲ್ಲಿ ವ್ಯತ್ಯಾಸ ಕಂಡುಬAದ ಹಿನ್ನೆಲೆ ಸಂಘದ ಆಡಿಟರ್ ಹಾಗೂ ಸಹಕಾರ ಸಂಘಗಳ ಜಿಲ್ಲೆಯ ಅಧಿಕಾರಿಗಳ ಮುಂದೆ ದಾಖಲಾತಿಗಳನ್ನು ಹಾಜರು ಪಡಿಸಲು ಸಂಘದ ಕಾರ್ಯ ನಿರ್ವಹಣಾಧಿಕಾರಿ ಹಿಂದೇಟು ವೀರಾಜಪೇಟೆ, ಜೂ. ೧೦: ವೀರಾಜಪೇಟೆಯಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಸಂಘದ ಲೆಕ್ಕದ ಹಣದಲ್ಲಿ ವ್ಯತ್ಯಾಸ ಕಂಡುಬAದ ಹಿನ್ನೆಲೆ ಸಂಘದ ಆಡಿಟರ್ ಹಾಗೂ ಸಹಕಾರ ಸಂಘಗಳ ಜಿಲ್ಲೆಯ ಅಧಿಕಾರಿಗಳ ಮುಂದೆ ದಾಖಲಾತಿಗಳನ್ನು ಹಾಜರು ಪಡಿಸಲು ಸಂಘದ ಕಾರ್ಯ ನಿರ್ವಹಣಾಧಿಕಾರಿ ಹಿಂದೇಟು ಖಾತೆದಾರರ ಪಟ್ಟಿ ಸಂಘದ ಆದಾಯ ಹಾಗೂ ವೆಚ್ಚದ ಲೆಕ್ಕ ಈ ತನಕ ನೀಡಿರುವುದಿಲ್ಲ. ಆಡಿಟರ್ ತನಿಖೆಯನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಎಂದು ಉಪ ನಿಬಂಧಿಕರಿಗೆ ಲಿಖಿತ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಸಲೀಂ ಮಹಮ್ಮದ್ ಅವರು ಸಂಘದ ಈಗಿನ ಅಧ್ಯಕ್ಷರಾದ ತಸ್ಲೀಂ ಅಕ್ತರ್ ಹಾಗೂ ಆಡಳಿತ ಮಂಡಳಿಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಭೇಟಿ ಮಾಡಿ ಸಂಘದಲ್ಲಿನ ಕಾರ್ಯ ನಿರ್ವಹಣಾಧಿಕಾರಿ ಸಂಘದ ಆಡಿಟ್ ಹಾಗೂ ಲೆಕ್ಕಪರಿಶೋಧನೆಗೆ ಸಹಕರಿಸದಿದ್ದರೆ ಕಾರ್ಯ ನಿರ್ವಹಣಾಧಿಕಾರಿಯ ಹೆಸರಿನಲ್ಲಿರುವ ಆಸ್ತಿಯನ್ನು ತಕ್ಷಣ ಮುಟ್ಟುಗೋಲು ಹಾಕಿ ಮುಂದಿನ ಕ್ರಮ ಕೈಗೊಳ್ಳುವಂತೆ ಮೌಖಿಕವಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತನಿಖೆಗೆ ಬೆಂಬಲ
ಸAಘದ ಅಧ್ಯಕ್ಷ ತಸ್ಲೀಂ ಅಕ್ತರ್ ಅವರು ಮಾತನಾಡಿ ಸಂಘದ ಲೆಕ್ಕದಲ್ಲಿ ಎಲ್ಲಿ ವ್ಯತ್ಯಾಸ ಹಾಗೂ ದುರುಪಯೋಗವಾಗಿದೆ ಎಂದು ತನಿಖಾ ಅಧಿಕಾರಿಗಳ ಸಹಕಾರದಿಂದ ಪತ್ತೆ ಹಚ್ಚಲಾಗುವುದು. ತನಿಖಾಧಿಕಾರಿಗಳು ಸಂಘದ ಲೆಕ್ಕ ಪತ್ರ ಹಾಗೂ ಠೇವಣಿದಾರರ ವಿವರ, ಆದಾಯ ವೆಚ್ಚದ ವಿವರವನ್ನು ದಾಖಲಾತಿ ಸಮೇತ ಹಾಜರು ಪಡಿಸುವಂತೆ ಎರಡು ಬಾರಿ ನೋಟೀಸ್ ಮಾಡಿದ್ದರೂ ಕಾರ್ಯ ನಿರ್ವಹಣಾಧಿಕಾರಿ ನೋಟೀಸ್ ಸ್ವೀಕರಿಸಲಿಲ್ಲ. ಮೌಖಿಕವಾಗಿ ತಿಳಿಸಿದರೂ ಅದಕ್ಕೂ ಪ್ರತಿಕ್ರಿಯೆ ಇಲ್ಲ. ಸಂಘದ ಲೆಕ್ಕದಲ್ಲಿ ವ್ಯತ್ಯಾಸದ ಕುರಿತು ಕೂಲಂಕುಷವಾದ ತನಿಖೆಗೆ ಒಲವು ತೋರಿಸಿ ಠೇವಣಿದಾರರ ಹಿತವನ್ನು ರಕ್ಷಿಸಲಾಗುವುದು. ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷಪಾತದ ತನಿಖೆಗೆ ಈಗಿನ ಸಂಘದ ಆಡಳಿತ ಮಂಡಳಿ ಬೆಂಬಲ ನೀಡಲಿದೆ ಯಾರಿಗೂ ಗೊಂದಲ ಆತಂಕ ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ.
-ಡಿ.ಎಂ. ರಾಜ್ಕುಮಾರ್