ಮಡಿಕೇರಿ, ಜೂ. ೧೦ : ಕೊಡಗು ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾಫಿ ತೋಟಗಳಿಗೆ ಹೊರ ಊರುಗಳಿಂದ ಕಾರ್ಮಿಕರನ್ನು ಕರೆತಂದು ಕೆಲಸ ಮಾಡುವುದನ್ನು ತಾ. ೨೧ ರವರೆಗೆ ನಿರ್ಬಂಧಿಸುವ ನಿರ್ಧಾರವನ್ನು ವಿವಿಧ ಬೆಳೆಗಾರ ಸಂಘಟನೆಗಳು ಕೈಗೊಂಡಿವೆ.
ಕೊಡಗು ಕಾಫಿ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಸಲಹೆ ಮೇರೆಗೆ ಸಭೆ ಸೇರಿದ್ದ ಕೊಡಗು ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಒಕ್ಕೂಟ, ಟಾಟಾ ಕಾಫಿ, ಬಿಬಿಟಿಸಿ ಕಾಫಿಯ ಪ್ರಮುಖರು ತಾ. ೨೧ ರವರೆಗೆ ಸ್ಥಳೀಯವಾಗಿ ಇರುವ ಕಾರ್ಮಿಕರನ್ನೇ ಬಳಸಿಕೊಂಡು ತೋಟ ಕೆಲಸಗಳನ್ನು ಮಾಡುವ ನಿರ್ಧಾರಕ್ಕೆ ಬಂದರು.
ಈ ಸಂದರ್ಭ ಬೆಳೆಗಾರ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಕೊಡಗು ಜಿಲ್ಲೆಯಲ್ಲಿ ನಿಧಾನವಾಗಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಹೀಗಿದ್ದರೂ ಹಲವೆಡೆ ಕಾರ್ಮಿಕರಿಂದ ಸೋಂಕು ವ್ಯಾಪಿಸುತ್ತಿದೆ. ಹೀಗಾಗಿ ತೋಟ ಮಾಲೀಕರು ಹೊರ ಊರುಗಳಿಂದ ವಾಹನಗಳಲ್ಲಿ ಹೆಚ್ಚು ಕಾರ್ಮಿಕರನ್ನು ಹಲವೆಡೆ ಕಾರ್ಮಿಕರಿಂದ ಸೋಂಕು ವ್ಯಾಪಿಸುತ್ತಿದೆ. ಹೀಗಾಗಿ ತೋಟ ಮಾಲೀಕರು ಹೊರ ಊರುಗಳಿಂದ ವಾಹನಗಳಲ್ಲಿ ಹೆಚ್ಚು ಕಾರ್ಮಿಕರನ್ನು ತೋಟ ಕೆಲಸಗಳಿಗೆ ತೆರಳುತ್ತಿರುವ ಕಾರ್ಮಿಕರಿಂದಲೂ
(ಮೊದಲ ಪುಟದಿಂದ) ಸೋಂಕು ನಿಯಂತ್ರಣಕ್ಕೆ ಸಿಲುಕದೆ ಹೆಚ್ಚು ವ್ಯಾಪಿಸುತ್ತಿರುವುದು ಕಳವಳಕಾರಿಯಾಗಿದೆ. ಹೀಗಾಗಿ ಬೆಳೆಗಾರ ಸಂಘಟನೆಗಳು ಕಾರ್ಮಿಕರ ಸಂಚಾರಕ್ಕೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ತೋಟಗಳಲ್ಲಿ ಸ್ಥಳೀಯವಾಗಿ ನೆಲೆಸಿರುವ ಕಾರ್ಮಿಕರಿಂದಲೇ ಮಳೆಗಾಲದ ಪೂರ್ವ ಕೆಲಸಗಳನ್ನು ಕೈಗೊಳ್ಳಬೇಕು. ಹೊರ ಊರುಗಳಿಂದ ಕಾರ್ಮಿಕರ ಬರುವಿಕೆಗೆ ತಾ. ೨೧ ರವರೆಗೆ ತಡೆಯೊಡ್ಡಬೇಕೆಂದು ಸಲಹೆ ನೀಡಿದರು.
ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಹಾಕಲೇಬೇಕು. ಕಾರ್ಮಿಕರ ಆರೋಗ್ಯದ ಬಗ್ಗೆ ಕೊಡಗಿನ ಕಾಫಿ ಬೆಳೆಗಾರರು ಇನ್ನೂ ಹೆಚ್ಚಿನ ಗಮನ ನೀಡಬೇಕು ಎಂದು ಬೆಳೆಗಾರ ಸಂಘಟನೆಗಳ ಪ್ರಮುಖರಿಗೆ ಮನವಿ ಮಾಡಿದ ಕೆ.ಜಿ. ಬೋಪಯ್ಯ, ಮುಂದಿನ ದಿನಗಳಲ್ಲಿ ಕೊಡಗಿನ ಕಾಫಿ ತೋಟಗಳಲ್ಲಿ ಲಸಿಕೆ ವಿತರಣೆಯ ಅಭಿಯಾನ ಪ್ರಾರಂಭಿಸಲಾಗುತ್ತದೆ. ಕೊಡಗಿನಲ್ಲಿರುವ ಬೃಹತ್ ಕಾಫಿ ತೋಟಗಳ ಸಂಸ್ಥೆಗಳು ಈ ಬಗ್ಗೆ ಅಗತ್ಯ ಸಹಕಾರ ನೀಡಬೇಕು. ಕೊರೊನಾ ಸೋಂಕಿತರಾಗಿದ್ದ ಕಾರ್ಮಿಕರು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದು ತೋಟಗಳಿಗೆ ಮರಳಿದಾಗ ಕೂಡಲೇ ಅವರನ್ನು ಕೆಲಸಕ್ಕೆ ತೊಡಗಿಸುವ ಬದಲಿಗೆ ಕಡ್ಡಾಯವಾಗಿ ೭ ದಿನಗಳ ಗೃಹಸಂಪರ್ಕ ತಡೆಗೆ ಒಳಪಡಿಸಲೇಬೇಕು. ತೋಟ ಮಾಲೀಕರು ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು. ತಾ. ೨೧ ರವರೆU ಕಾರ್ಮಿಕರನ್ನು ಸಾಗಾಟ ಮಾಡುವ ಜೀಪ್, ವಾಹನಗಳನ್ನು ವಶಪಡಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸುವುದಾಗಿಯೂ ಶಾಸಕರು ಈ ಸಂದರ್ಭ ಹೇಳಿದರು. ಜಿಲ್ಲೆಯಾದ್ಯಂತ ಪಡಿತರ ಅಂಗಡಿಗಳಲ್ಲಿ ಕಾರ್ಮಿಕರಿಗೆ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಪಡಿತರವನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆಯ ಪ್ರಯೋಜನವನ್ನು ಕಾರ್ಮಿಕರಿಗೆ ಆಯಾ ಗ್ರಾಮಗಳ ಬೆಳೆಗಾರರು ನೀಡುವಲ್ಲಿ ನೆರವಾಗುವಂತೆಯೂ ಬೋಪಯ್ಯ ಸೂಚಿಸಿದರು.
ಈ ಸಂದರ್ಭ ಕೊಡಗು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಾಥನ್ ನಾಗಪ್ಪನ್, ಕರ್ನಾಟಕ ಬೆಳೆಗಾರರ ಸಂಘದ ಪ್ರತಿನಿಧಿ ಪೀಟೂ ಕಾರ್ಯಪ್ಪ, ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಯಪ್ಪ, ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್, ಟಾಟಾ ಕಾಫಿ ಸಂಸ್ಥೆಯ ಪ್ರತಿನಿಧಿ ಪಿ.ಎ. ಮಂದಣ್ಣ, ಬಿ.ಬಿ.ಟಿ.ಸಿ. ಕಾಫಿ ಸಂಸ್ಥೆಯ ಪ್ರತಿನಿಧಿ ಪವನ್ ಪೊನ್ನಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಾಟಿ ಹಾಜರಿದ್ದರು.
ಬೆಳೆಗಾರರ ಸಂಘಟನೆಯ ಪ್ರಮುಖರು ಕಾಫಿ ಉದ್ಯಮ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಶಾಸಕರ ಗಮನ ಸೆಳೆದು ಲಾಕ್ಡೌನ್ ನಂತರ ದೆಹಲಿಗೆ ಕಾಫಿ ಬೆಳೆಗಾರರ ಸಂಘಟನೆಗಳ ಪ್ರಮುಖರ ನಿಯೋಗ ಕರೆದೊಯ್ಯುವಂತೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿಯೂ ಶಾಸಕ ಬೋಪಯ್ಯ ಹೇಳಿದರು.