ಪೊನ್ನಂಪೇಟೆ, ಜೂ. ೧೧: 'ವಿಶ್ವ ರಕ್ತದಾನಿಗಳ ದಿನಾಚರಣೆ'ಯ ಅಂಗವಾಗಿ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ತಾ. ೧೪ ರಂದು ಸೋಮವಾರ ರಕ್ತದಾನದ ಮಹತ್ವದ ಕುರಿತು ಆನ್ಲೈನ್ ಮೂಲಕ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಘಟಕದ ಕಾರ್ಯದರ್ಶಿ ಎ.ಪಿ. ದಿನೇಶ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, 'ರಕ್ತದಾನ- ಮಾನವಕುಲದ ಶ್ರೇಷ್ಠ ಸೇವೆ' ಎಂಬ ವಿಷಯದ ಕುರಿತು ನಡೆಯುವ ವೆಬಿನಾರ್ನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹ ಪ್ರಾಧ್ಯಾಪಕರು ಮತ್ತು ಕೊಡಗು ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕಿನ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಅವರು ರಕ್ತದಾನದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಅಂದು ಸಂಜೆ ೭ ಗಂಟೆಗೆ ‘Zoom’ ವೇದಿಕೆ ಮೂಲಕ ನಡೆಯುವ ಈ ಕಾರ್ಯಕ್ರಮವನ್ನು, ಭಾರತೀಯ ಜೇಸಿಸ್ನ ವಲಯ ೧೪ರ ವಲಯಾಧ್ಯಕ್ಷರಾದ ಜೆಸಿಐ ಸೆನೆಟರ್ ಭರತ್ ಎನ್. ಆಚಾರ್ಯ ಅವರು ಉದ್ಘಾಟಿಸಲಿದ್ದಾರೆ.
ವಿವಿಧ ಜೇಸಿ ಘಟಕಗಳ ಸದಸ್ಯರು ಸೇರಿದಂತೆ ಸಾರ್ವಜನಿಕರಿಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. ವೆಬಿನಾರ್ನಲ್ಲಿ ಪಾಲ್ಗೊಳ್ಳಲು ಬಯಸುವ ಆಸಕ್ತರು Zoom ಂಠಿಠಿ ಅನ್ನು ಡೌನ್ಲೋಡ್ ಮಾಡಿಕೊಂಡು ಐ.ಡಿ. ಸಂಖ್ಯೆಯಾದ. ೮೨೭೮೧೬೭೫೭೪೫ ಮತ್ತು ‘ಃಐಔಔಆಆಔಓಔಖ’ ಎಂಬ ಪಾಸ್ವರ್ಡ್ಅನ್ನು ನಮೂದಿಸಿ ಲಾಗಿನ್ ಆಗಬಹುದಾಗಿದೆ ಎಂದು ಎ.ಪಿ. ದಿನೇಶ್ ಅವರು ತಿಳಿಸಿದ್ದಾರೆ.