ಮಡಿಕೇರಿ, ಜೂ. ೧೧: ತಾ.೧೪ ರಿಂದ ರಾಜ್ಯಾದ್ಯಂತ ಬ್ಯಾಂಕುಗಳು ಎಂದಿನAತೆ ಕಾರ್ಯನಿರ್ವಹಿಸಲಿವೆ. ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯು ಇಂದು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳ ಶಾಖೆಗಳು ಎಂದಿನAತೆ ಕಾರ್ಯನಿರ್ವಹಿಸುವಂತೆ ತೀರ್ಮಾನಿಸಲಾಗಿದೆ.

ಬ್ಯಾಂಕಿAಗ್ ವ್ಯವಹಾರದ ಸಮಯ ಬೆಳಗ್ಗೆ ೧೦ ರಿಂದ ಸಂಜೆ ೪ ರವರೆಗೆ ಮತ್ತು ಕೆಲಸದ ಸಮಯವು ಬೆಳಿಗ್ಗೆ ೧೦ ರಿಂದ ಸಂಜೆ ೫ ರವರೆಗೆ ಇರುತ್ತದೆ. (ಈ ಮೊದಲಿನಂತೆ ಸಾಮಾನ್ಯ ಬ್ಯಾಂಕ್ ಸಮಯ). ಬ್ಯಾಂಕುಗಳಲ್ಲಿ ನಡೆಯುತ್ತಿರುವ ಆಧಾರ್ ನೋಂದಣಿ ಕೇಂದ್ರಗಳ ಸೇವೆಯನ್ನು ತಾ.೧೯ ರವರೆಗೆ ರದ್ದುಪಡಿಸಲಾಗಿದೆ. ಶಾಖೆಗಳು ಎಲ್ಲಾ ರೀತಿಯ ಸಾಮಾನ್ಯ ಬ್ಯಾಂಕಿAಗ್ ಸೇವೆಗಳು/ಕೆಲಸ ಕಾರ್ಯಗಳಿಗಾಗಿ ತೆರೆದಿರುತ್ತವೆ. ಬ್ಯಾಂಕಿAಗ್ ಮಿತ್ರರ ಸೇವೆಗಳನ್ನು (ಅಂಚೆ ಕಛೇರಿಯ ಬ್ಯಾಂಕ್ ಮಿತ್ರರ ಸೇವೆಯೂ ಸೇರಿ) ಆಯಾಯಾ ಗ್ರಾಮಗಳಲ್ಲಿ ಲಭ್ಯವಿರುವುದರಿಂದ ಗ್ರಾಹಕರು ತಮ್ಮ ತಮ್ಮ ಗ್ರಾಮಗಳಲ್ಲಿ ಮೂಲಭೂತ ಬ್ಯಾಂಕಿAಗ್ ಸೇವೆಗಳನ್ನು ಪಡೆಯಬಹುದು. ಗ್ರಾಹಕರು ಡಿಜಿಟಲ್ ಸೇವೆ ಗಳಾದ ಏಟಿಎಮ್, ನೆಟ್ ಬ್ಯಾಂಕಿAಗ್, ಮೊಬೈಲ್ ಬ್ಯಾಂಕಿAಗ್ ಮತ್ತು ಇತರ ಡಿಜಿಟಲ್ ಸೇವೆಗಳನ್ನು ಉಪಯೋಗಿಸಿಕೊಂಡು ಬ್ಯಾಂಕುಗಳಿಗೆ ಭೇಟಿ ನೀಡುವುದನ್ನು ಕಡಿಮೆಗೊಳಿಸ ಬೇಕು. ಅನಿವಾರ್ಯ ಕಾರಣಗಳಿಂದ ಭೇಟಿ ನೀಡುವುದೇ ಆದಲ್ಲಿ ಕಡ್ಡಾಯ ವಾಗಿ ಮುಖಗವಸನ್ನು ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಇತರ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಮನವಿ ಮಾಡಿದ್ದಾರೆ.