ಗೋಣಿಕೊಪ್ಪಲು, ಜೂ. ೯: ಈ ಹಿಂದೆ ಕಾಡಾನೆಗಳು ಕೇವಲ ದಟ್ಟಾರಣ್ಯ, ಕಾಫಿ ತೋಟಗಳಿಗೆ ಸೀಮಿತವಾಗಿದ್ದವು.
ಇದೀಗ ಕಾಡಾನೆಗಳು ಅರಣ್ಯ ಪ್ರದೇಶ, ದೊಡ್ಡ ಕಾಫಿ ತೋಟಗಳನ್ನು ಬಿಟ್ಟು ನಾಡಿನತ್ತ ಇರುವ ಸಣ್ಣ ಪುಟ್ಟ ಕಾಫಿ ತೋಟ, ಕುರುಚಲು ಪ್ರದೇಶದತ್ತ ಮುಖ ಮಾಡುತ್ತಿವೆ.
ಹಲಸಿನ ಹಣ್ಣಿನ ಸಮಯವಾಗಿರುವ ಕಾರಣ ಹಲವು ಕಾಡಾನೆಗಳು ಕಾಫಿ ತೋಟದಲ್ಲಿ ಬಿಡಾರ ಹೂಡಿವೆ. ಹೊಟ್ಟೆ ಬಿರಿಯುವಷ್ಟು ತಿಂದ ನಂತರವಷ್ಟೆ ಮತ್ತೊಂದು ಪ್ರದೇಶದ ಕಡೆಗೆ ಮುಖಮಾಡುತ್ತಿವೆ.
ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ಜನನಿಬಿಡ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುತ್ತಿವೆ. ತನ್ನ ಆಹಾರವನ್ನು ಹುಡುಕುತ್ತಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಹಜವಾಗಿ ಜನರ ಸಂಚಾರ ಕಡಿಮೆ ಆದ ವೇಳೆ ಅರಣ್ಯ ಪ್ರದೇಶದಿಂದ ನಗರ ಪ್ರದೇಶದ ಕಡೆಗೆ ಹೆಜ್ಜೆ ಹಾಕುತ್ತವೆ. ರಾತ್ರಿ ವೇಳೆ ತೋಟದಲ್ಲಿ ಸಿಗುವ ಆಹಾರವನ್ನು ಹೊಟ್ಟೆ ತುಂಬಿಸಿಕೊAಡು ಮುಂಜಾನೆಯ ಸೂರ್ಯೋದಯ ಮುಂಚೆಯೇ ಈ ಹಿಂದೆ ಇದ್ದ ಅರಣ್ಯ ಪ್ರದೇಶಕ್ಕೆ ಮರಳುತ್ತಿವೆ. ಇದರಿಂದಾಗಿ ಮುಂಜಾನೆಯ ಸಮಯದಲ್ಲಿ ಹಲವು ಮಂದಿಗೆ ಕಾಡಾನೆಗಳು ದರ್ಶನ ನೀಡುತ್ತವೆ.
ನಗರ ಪ್ರದೇಶಗಳಲ್ಲಿ ಇರುವ ಜನರು ಮುಂಜಾನೆಯ ೫ ಗಂಟೆಯ ಸಮಯದಲ್ಲಿ ವಾಯುವಿಹಾರಕ್ಕೆ ಮುಖ್ಯ ರಸ್ತೆಯಲ್ಲಿ ತೆರಳುವುದು ವಾಡಿಕೆ. ಇಂತಹ ಸಂದರ್ಭದಲ್ಲಿ ನಾಡಿನ ಕಾಫಿ ತೋಟದಲ್ಲಿ ರಾತ್ರಿ ವೇಳೆ ಬೀಡು ಬಿಟ್ಟಿದ್ದ ಕಾಡಾನೆಗಳು ತನ್ನ ವಾಸ ಸ್ಥಳಕ್ಕೆ ಮತ್ತೆ ಮರಳುವ ಸಮಯವಾಗಿರುತ್ತದೆ. ಇಂತಹ ವೇಳೆ ಅಕಸ್ಮಾತ್ತಾಗಿ ಮನುಷ್ಯರನ್ನು ಕಂಡಾಗ ಗಾಬರಿಗೊಂಡ ಕಾಡಾನೆಗಳು ಮನುಷ್ಯನ ಮೇಲೆ ದಾಳಿ ನಡೆಸಿ, ಮುಂದೆ ಸಾಗುತ್ತವೆ. ಇದರಿಂದ ಅನೇಕ ಮನುಷ್ಯನ ಪ್ರಾಣಕ್ಕೆ ಸಂಚಕಾರ ಬಂದಿದೆ.
ಇತ್ತೀಚೆಗೆ ತಿತಿಮತಿ ಸಮೀಪದ ದೇವಮಚ್ಚಿ ರಸ್ತೆಯಲ್ಲಿ ಹಾಗೂ ಅರುವತೊಕ್ಕಲು ಪಿ.ಎಚ್.ಎಸ್. ಕಾಲೋನಿಯಲ್ಲಿ ಮುಂಜಾನೆಯ ವೇಳೆ ವಾಕಿಂಗ್ಗೆ ತೆರಳಿದ ಸಂದರ್ಭ ಕಾಡಾನೆ ದಾಳಿ ನಡೆಸಿ ಮಾನವನ ಪ್ರಾಣಕ್ಕೆ ಸಂಚಕಾರ ತಂದಿದ್ದವು.
ಮುAಜಾನೆಯ ಸಮಯದಲ್ಲಿ ವಾಯುವಿಹಾರಕ್ಕೆ ತೆರಳುವ ನಾಗರಿಕರು ತಮ್ಮ ಸಮಯವನ್ನು ಬದಲಾವಣೆ ಮಾಡಿಕೊಂಡು ಸಂಪೂರ್ಣ ಬೆಳಕು ಮೂಡಿದ ನಂತರದ ಸಮಯದಲ್ಲಿ ವಾಯುವಿಹಾರಕ್ಕೆ ತೆರಳುವುದು ಉತ್ತಮ ಹಾಗೂ ತಮ್ಮ ಮನೆಯ ಸಮೀಪದ ಮೈದಾನದಲ್ಲಿ ವಾಕಿಂಗ್ ಮಾಡುವುದರಿಂದ ಇಂತಹ ಅಪಘಾತಗಳಿಂದ ಹೊರಬರಬಹುದು.