ವೀರಾಜಪೇಟೆ, ಜೂ. ೯: ಕೋವಿಡ್-೧೯ ಸೋಂಕು ನಿಯಂತ್ರಣಕ್ಕೆ ನಿರಂತರ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಪ್ರಯಾಣ ಭತ್ಯೆ ನೀಡುವಂತೆ ಆರ್ಜಿ ಗ್ರಾ.ಪಂ.ಯ ಟಾಸ್ಕ್ಫೋರ್ಸ್ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಆರ್ಜಿ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಜಿ. ಪಾರ್ವತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ ಮಣಿ ಮಾತನಾಡಿ, ಗ್ರಾಮದಲ್ಲಿ ಒಟ್ಟು ೭೪ ಮಂದಿ ಸೋಂಕಿತರು ಪತ್ತೆಯಾಗಿದ್ದು, ಪ್ರಸ್ತುತ ೨೪ ಮಂದಿ ಸೋಂಕಿತರಿದ್ದಾರೆ. ಉಳಿದವರು ಚಿಕಿತ್ಸೆ ಪಡೆದು ಗುಣಮುಖ ಹೊಂದಿದ್ದಾರೆ. ಗ್ರಾಮದಲ್ಲಿ ಇಂದಿನವರೆಗೆ ಯಾವುದೇ ಮರಣ ಪ್ರಕರಣಗಳು ದಾಖಲಾಗಿರು ವುದಿಲ್ಲ. ಗ್ರಾಮದಲ್ಲಿ ಒಟ್ಟು ೨೮ ನಿರ್ಬಂಧಿತ ಪ್ರದೇಶಗಳೆಂದು ದಾಖಲಾಗಿದ್ದು, ಪ್ರಸ್ತುತವಾಗಿ ೧೬ ನಿರ್ಬಂಧಿತ ಪ್ರದೇಶಗಳಿವೆ ಉಳಿದ ಪ್ರದೇಶಗಳನ್ನು ತೆರವುಗೊಳಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷÀ ಎನ್.ಕೆ. ಉಪೇಂದ್ರ ಮಾತನಾಡಿ, ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿರುವ ಆಶಾ ಕಾರ್ಯಕರ್ತರು ಹಾಗೂ ಅಂಗನ ವಾಡಿ ಕಾರ್ಯಕರ್ತರು ಜೀವದ ಹಂಗು ತೊರೆದು ಸೇವೆಗೈಯುವ ಮುಂಚೂಣಿಯ ಸೇವಕರಿಗೆ ಪ್ರಯಾಣ ಭತ್ಯೆ ನೀಡಲು ಪಂಚಾಯಿತಿಯು ಮುಂದಾಗಬೇಕು ಎಂದು ಹೇಳಿದರು. ಆರೋಗ್ಯ ಕಾರ್ಯಕರ್ತರಿಗೆ ತಲಾ ರೂ. ೫೦೦ ರಂತೆ ಪ್ರಯಾಣ ಭತ್ಯೆ ನೀಡುವಂತೆ ಸಭೆ ನಿರ್ಣಯ ಕೈಗೊಂಡಿತು. ಗ್ರಾಮದಲ್ಲಿ ನಡೆಯುವ ಶುಭ ಕಾರ್ಯಕ್ರಮಗಳು ಹಾಗೂ ಇತರ ಕಾರ್ಯಕ್ರಮಗಳಿಗೆ ಪಂಚಾಯಿತಿ ಯಿಂದ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಎಂದು ನಿರ್ಧರಿಸಲಾಯಿತು. ಕೋವಿಡ್ ಸೋಂಕಿತರಿಗೆ ಕಿಟ್ ವಿತರಿಸುವಂತೆ ಸಭೆ ಅಂಗೀಕರಿಸಿತು. ಸಭೆಯಲ್ಲಿ ಆರ್ಜಿ ಗ್ರಾ.ಪಂ.ಯ ಎಲ್ಲಾ ವಾರ್ಡಿನ ಸದಸ್ಯರು ಹಾಜರಿದ್ದರು. - ಕೆ.ಕೆ.ಎಸ್.