ಕೂಡಿಗೆ, ಜೂ.೯: ಹಾರಂಗಿ ಮೀನುಗಾರಿಕೆ ಇಲಾಖೆಯ ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸನಿಹದಲ್ಲಿ ಹರಿಯು ತ್ತಿರುವ ಕಾವೇರಿ ನದಿಗೆ ಒಂದು ಲಕ್ಷ ಮೀನು ಮರಿಗಳನ್ನು ಬಿಡಲಾಯಿತು.
ಹಾರಂಗಿಯ ಮೀನು ಮರಿ ಕೇಂದ್ರದಲ್ಲಿ ಸಾಮಾನ್ಯ ಗೆಂಡೆ ಮೀನು ಮರಿಗಳನ್ನು ವರ್ಷಂಪ್ರತಿಯAತೆ ಉತ್ಪಾದನೆ ಮಾಡಿ ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆಯ ನಿಯಮಾನುಸಾರವಾಗಿ ಈ ಬಾರಿಯು ಕಣಿವೆಯ ದೇವಾಲಯದ ಮುಂಭಾಗದಲ್ಲಿ ಕಾವೇರಿ ನದಿಗೆ ಬಿಡಲಾಗಿದೆ ಎಂದು ಹಾರಂಗಿ ಮೀನುಗಾರಿಕೆ ಕೇಂದ್ರದ ಸಹಾಯಕ ನಿರ್ದೇಶಕ ಎಸ್. ಎಂ. ಸಚಿನ್ ತಿಳಿಸಿದರು.
ಈ ಸಂದರ್ಭ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯ ಶಿವರುದ್ರಪ್ಪ, ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ದರ್ಶನ್ ಹಾರಂಗಿ ಕೇಂದ್ರ ಮೇಲ್ವಿಚಾರಕ ದಯಾನಂದ ಸೇರಿದಂತೆ ದೇವಾಲಯ ಸಮಿತಿಯ ಸದಸ್ಯರು ಮತ್ತು ಇಲಾಖೆಯ ಸಿಬ್ಬಂದಿ ಗ್ರಾಮಸ್ಥರು ಹಾಜರಿದ್ದರು.