*ಗೋಣಿಕೊಪ್ಪ, ಜೂ. ೮: ಕೆ. ಬಾಡಗ ಗ್ರಾಮ ಪಂಚಾಯಿತಿ ನಾಗರಹೊಳೆ ವ್ಯಾಪ್ತಿಯ ಹಾಡಿ ನಿವಾಸಿಗಳ ಲಸಿಕೆ ಅಭಿಯಾನಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಂದನಕೆರೆ ಹಾಡಿಯಲ್ಲಿ ಚಾಲನೆ ನೀಡಿದರು.

ಕೆಲ ದಿನಗಳ ಹಿಂದೆ ಶಾಸಕರು ಹಾಡಿಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳುವಂತೆ ಬುಡಕಟ್ಟು ಜನರ ಮನವೊಲಿಕೆಗೆ ಮುಂದಾಗಿದ್ದರು. ಇದರ ಪರಿಣಾಮ ಚಂದನಕೆರೆ, ಕೊಡಂಗಿ ಹಾಡಿ, ಪೂಕಂಡಿ ಹಾಡಿಯ ಸುಮಾರು ೨೦೦ಕ್ಕೂ ಹೆಚ್ಚು ನಿವಾಸಿಗಳು ಲಸಿಕೆ ಅನುಕೂಲವನ್ನು ಪಡೆದುಕೊಂಡರು.

ಈ ಸಂದರ್ಭ ಮಾತನಾಡಿದ ಶಾಸಕರು, ಕೊರೊನಾ ಆತಂಕದಿAದ ತಪ್ಪಿಸಿಕೊಳ್ಳಲು ಲಸಿಕೆ ಪಡೆದುಕೊಳ್ಳುವುದರಿಂದ ಮಾತ್ರ ಸಾಧ್ಯವಿದೆ. ಲಸಿಕೆ ಅಳವಡಿಕೆಯಲ್ಲಿ ರಾಜ್ಯಕ್ಕೆ ಪ್ರಥಮವಾಗಿ ಕೊಡಗು ಜಿಲ್ಲೆ ಹೆಜ್ಜೆ ಇಟ್ಟಿರುವುದು ಉತ್ತಮ ಬೆಳವಣಿಗೆಯಾಗಿದೆ. ಯಾವುದೇ ಗಾಳಿ ಸುದ್ದಿಗೆ ಕಿವಿಗೊಡದೆ ಸಂಸ್ಕöÈತಿ, ಸಂಪ್ರದಾಯ ವನ್ನು ಅಳವಡಿಸಿಕೊಂಡಿದ್ದಾರೆ. ಗಿಡಮೂಲಿಕೆಗಳಿಂದ ಕೊರೊನಾ ತೊಲಗಿಸಬಹುದು ಎಂಬ ನಂಬಿಕೆ ಇದ್ದರೂ ಸಹ ವೈಜ್ಞಾನಿಕ ಮನೋಭಾವವನ್ನು ಬುಡಕಟ್ಟು ಸಮುದಾಯದವರು ಹೊಂದಿ ಕೊಳ್ಳುವುದು ಮುಖ್ಯ ಎಂದರು.

ಬಗುರ್‌ಹುಕುA ಸಾಗುವಳಿ ಸಕ್ರಮೀಕರಣ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ತಾಲೂಕು ಪರಿಶಿಷ್ಟ ವರ್ಗದ ಕಲ್ಯಾಣ ಅಧಿಕಾರಿ ಗುರುಶಾಂತಪ್ಪ, ಕೆ.ಬಾಡಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂಣಚ್ಚ, ಬಾಡಗ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಅಣ್ಣಾಳಮಾಡ ನವೀನ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಹಾಜರಿದ್ದರು.