*ವೀರಾಜಪೇಟೆ, ಜೂ. ೮: ವೀರಾಜಪೇಟೆಯಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಬ್ಯಾಂಕಿನಲ್ಲಿ ಸಾಕಷ್ಟು ಅವ್ಯವಹಾರದೊಂದಿಗೆ ಹಣ ದುರುಪಯೋಗದ ಕುರಿತು ಪ್ರಭಾರ ಆಡಳಿತಮಂಡಳಿಯೇ ತನಿಖೆಗೆ ಸೂಚಿಸಿರುವ ಘಟನೆಗೆ ವೀರಾಜಪೇಟೆ ಮುಸ್ಲಿಂ ಬ್ಯಾಂಕ್ ಸಾಕ್ಷಿಯಾಗಿತ್ತು. ವೀರಾಜಪೇಟೆ ಮುಸ್ಲಿಂ ಬ್ಯಾಂಕಿನ ಹಲವು ಠೇವಣಿದಾರರು ಬ್ಯಾಂಕಿನ ಮುಂದೆ ಪ್ರತಿಭಟಿಸಿದ್ದರು, ಜಿಲ್ಲಾಧಿಕಾರಿಯವರಿಗೆ ದೂರು ಕೂಡಾ ಸಲ್ಲಿಸಿದ್ದರು. ಇತ್ತೀಚೆಗೆ ಉಸ್ತುವಾರಿ ಸಚಿವರು ಕೋವಿಡ್ ಸಂಬAಧ ವೀರಾಜಪೇಟೆಗೆ ಭೇಟಿ ನೀಡಿದ್ದಾಗ ಅವರ ಮುಂದೆಯೂ ಈ ಸಮಸ್ಯೆಯ ಬಗ್ಗೆ ಗಮನ ಸೆಳೆಯಲಾಗಿತ್ತು.

ಇದೀಗ ಮುಸ್ಲಿಂ ಸಹಕಾರ ಬ್ಯಾಂಕಿನ ಲೆಕ್ಕ ಪರಿಶೋಧಕ ಎ.ಆರ್ ಜೋಶಿ ಇವರು, ಸಹಕಾರ ಸಂಘಗಳ ಉಪನಿಬಂಧಕರಿಗೆ ವೀರಾಜಪೇಟೆ ಮುಸ್ಲಿಂ ಸಹಕಾರ ಬ್ಯಾಂಕಿನಲ್ಲಿ ಅವ್ಯವಹಾರಗಳ ಸರಮಾಲೆಯೇ ನಡೆದಿದೆ. ಜೊತೆಗೆ ದೊಡ್ಡ ಪ್ರಮಾಣದ ಹಣದ ಅವ್ಯವಹಾರವೂ ನಡೆದಿದೆ ಎನ್ನುವ ಅಂಶಕ್ಕೆ ಸ್ಪಷ್ಟತೆಯನ್ನು ನೀಡಿದ್ದಾರೆ.

ಪತ್ರದ ಒಕ್ಕಣೆಯಲ್ಲಿ ದಕ್ಷಿಣ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ಇದರ ೨೦೧೯-೨೦೨೦ ನೇ ಸಾಲಿನ ಲೆಕ್ಕಪರಿಶೋಧನೆಗೆ ಲೆಕ್ಕಪತ್ರಗಳನ್ನು ಹಾಗೂ ಆರ್ಥಿಕ ತಖ್ತೆಗಳನ್ನು ಹಾಗೂ ಅಗತ್ಯ ಮಾಹಿತಿಗಳನ್ನು ಒದಗಿಸಿಲ್ಲ. ಮುಸ್ಲಿಂ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಲೆಕ್ಕಪರಿಶೋಧನೆಗೆ ಸೂಕ್ತ ದಾಖಲಾತಿಗಳನ್ನು ನೀಡದೆ, ಲೆಕ್ಕಪರಿಶೋಧನಾ ಸಮಯದಲ್ಲಿ ಗೈರು ಹಾಜರಾಗಿ ಲೆಕ್ಕಪರಿಶೋಧನೆಗೆ ಸಹಕಾರ ನೀಡದೆ ಸತಾಯಿಸುತ್ತಿರುವುದರಿಂದ ಈವರೆಗೂ ಲೆಕ್ಕಪರಿಶೋಧನೆ

(ಮೊದಲ ಪುಟದಿಂದ) ಪೂರ್ಣಗೊಳಿಸಲು ಅಸಾಧ್ಯವಾಗಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಈಗಾಗಲೇ ಮುಸ್ಲಿಂ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಸಹಕಾರ ಸಂಘಗಳ ಲೆಕ್ಕ ಪರಿಶೋಧಕರಿಗೆ ಸಲ್ಲಿಸಿರುವ ಆರ್ಥಿಕ ತಖ್ತೆಗಳು ಗಂಭೀರವಾದ ನ್ಯೂನ್ಯತೆಗಳಿಂದ ಕೂಡಿದ್ದು, ಜಮಾ ಖರ್ಚು ತಖ್ತೆಯನ್ನು ನಗದು ಪುಸ್ತಕಕ್ಕೆ ತಾಳೆ ನೋಡಿದಾಗ ಕೋಟಿಗಟ್ಟಲೆ ರೂಪಾಯಿ ವ್ಯತ್ಯಾಸವಿದೆ. ಕೇವಲ ಕಾಲ್ಪನಿಕ ಅಂಕಿ-ಅAಶಗಳನ್ನು ನೀಡಿ ದೋಷಪೂರಿತ ಆರ್ಥಿಕ ತಖ್ತೆಗಳನ್ನು ತಯಾರಿಸಿ, ಆಡಳಿತ ಮಂಡಳಿಯವರ ಗಮನಕ್ಕೂ ತಾರದೇ, ಆಡಳಿತ ಮಂಡಳಿಯವರ ಸಹಿಯನ್ನು ಪಡೆಯದೇ ಸ್ವತಃ ತಾನು ಮಾತ್ರ ಸಹಿ ಮಾಡಿ ಸಹಕಾರ ಸಂಘದ ನಿಯಮಾವಳಿಗೆ ವ್ಯತಿರಿಕ್ತವಾಗಿ ಸಲ್ಲಿಸಿದ್ದಾರೆ ಎಂದು ದೂರಿರುವುದು ಅಲ್ಲದೇ, ಅದಕ್ಕೆ ನಾಲ್ಕು ಪ್ರಮುಖವಾದ ದೋಷ ಕಂಡು ಬಂದಿರುವ ವಿಚಾರಗಳನ್ನು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಲು ಹಲವು ಬಾರಿ ಕಾರ್ಯನಿರ್ವಹಣಾಧಿಕಾರಿಯವರಿಗೆ ಸಹಕಾರ ಸಂಘದಿAದ ಗಡುವು ನೀಡಿದ್ದರೂ ಅವರು ಸರಿಯಾದ ಲೆಕ್ಕಪತ್ರ ಒದಗಿಸುವಲ್ಲಿ ವಿಫಲರಾಗಿದ್ದಾರೆ. ದಾಖಲೆಗಳು ಲಭ್ಯವಾಗದ ಕಾರಣ ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಪತ್ರಮುಖೇನ ತಿಳಿಯಪಡಿಸಿದ್ದಾರೆ.