ಮಡಿಕೇರಿ, ಜೂ. ೮: ಪೊಲೀಸ್ ಇಲಾಖೆಯ ನಿಯಮಾನುಸಾರ ವರ್ಗಾವಣೆಗೊಂಡಿರುವ ಇಬ್ಬರು ವೃತ್ತ ನಿರೀಕ್ಷಕರು ಇದೀಗ ಹೊಸದಾಗಿ ಅಧಿಕಾರ ವಹಿಸಿ ಕೊಂಡಿದ್ದಾರೆ. ಮಡಿಕೇರಿ ನಗರ ವೃತ್ತ ನಿರೀಕ್ಷಕರಾಗಿ ಧಾರವಾಡದಲ್ಲಿದ್ದ ಪಿ.ವಿ. ವೆಂಕಟೇಶ್ ಅವರು ನಿನ್ನೆ ಈ ತನಕ ನಗರ ಸಿಐ ಆಗಿದ್ದ ಅನೂಪ್ ಮಾದಪ್ಪ ಅವರಿಂದ ಅಧಿಕಾರ ವಹಿಸಿಕೊಂಡರು. ನಗರ ಠಾಣೆಯಿಂದ ಮಡಿಕೇರಿ ಗ್ರಾಮಾಂತರ ಠಾಣೆಗೆ ನಿಯುಕ್ತಿಗೊಂಡಿರುವ ಅನೂಪ್ ಮಾದಪ್ಪ ಅವರು ಎರಡು ದಿನಗಳ ಹಿಂದೆ ಅಲ್ಲಿನ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸಿದ್ದಾಪುರಕ್ಕೆ ಭೇಟಿ
ನೂತನ ಅಧಿಕಾರಿ ಬಳಿಕ ಸಿದ್ದಾಪುರ ಠಾಣೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ಹೂಗುಚ್ಚ ನೀಡಿ ಸ್ವಾಗತಿಸಿದರು. ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊರಜಿಲ್ಲೆಯಿಂದ ಮಾಲ್ದಾರೆ ಚೆಕ್ಪೋಸ್ಟ್ ಮುಖಾಂತರ ಅನಗತ್ಯವಾಗಿ ಓಡಾಡುವ ವಾಹನಗಳನ್ನು ತಡೆಹಿಡಿಯಬೇಕು. ಹೊರ ಜಿಲ್ಲೆಯಿಂದ ವಾಹನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರು ಬಾರದ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಠಾಣಾಧಿಕಾರಿ ಮೋಹನ್ರಾಜ್ಗೆ ಸೂಚನೆ ನೀಡಿದರು. ಲಾಕ್ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನಗಳಿಗೆ ದಂಡ ವಿಧಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿಗಳಾದ ಗಣಪತಿ, ಮೋಹನ್, ತಮ್ಮಯ್ಯ, ಪ್ರವೀಣ್, ಸಿಬ್ಬಂದಿಗಳು ಹಾಜರಿದ್ದರು.