ಮಡಿಕೇರಿ, ಜೂ. ೮: ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಡಗಿನವರಾದ ನೆಲ್ಲೀರ ರಾಹುಲ್ ಪೊನ್ನಪ್ಪ ಅವರು ಇದೀಗ ಲೆಫ್ಟಿನೆಂಟ್ ಕರ್ನಲ್ ಆಗಿ ಬಡ್ತಿ ಹೊಂದಿದ್ದಾರೆ. ಮೂಲತಃ ಬಿರುನಾಣಿಯವರಾದ ರಾಹುಲ್ ಪೊನ್ನಪ್ಪ ಅವರು ಮಾಜಿ ಯೋಧ ನೆಲ್ಲೀರ ದಿ. ಎಂ. ನಾಣಯ್ಯ (ನಂದ) ಹಾಗೂ ಲಾಲಿ (ತಾಮನೆ-ಮೂಡೆರ) ದಂಪತಿಯ ಪುತ್ರ. ಪತ್ನಿ ಅಪ್ಪಚ್ಚೀರ ರಮ್ಮಿ ಪೊನ್ನಮ್ಮ. ಪ್ರಸ್ತುತ ಇವರು ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಶಾನ್ಯ ವಲಯಕ್ಕೆ ನಿಯೋಜಿತರಾಗಿದ್ದಾರೆ.