ಸೋಮವಾರಪೇಟೆ, ಜೂ. ೮: ತಾಲೂಕಿನ ಪ್ರವಾಸಿ ತಾಣಗಳಲ್ಲಿ ಒಂದಾದ ಕಿರಗಂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮಕ್ಕಳ ಗುಡಿ ಬೆಟ್ಟದ ತಳಭಾಗದಲ್ಲಿ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ.
ಅಪರಿಚಿತ ವ್ಯಕ್ತಿ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆದು ನಾಲ್ಕು ತಿಂಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳದಲ್ಲಿ ದೇಹದ ಮೂಳೆ, ಒಂದು ಪ್ಯಾಂಟ್ ಮತ್ತು ಜರ್ಕಿನ್ ಕಂಡುಬAದಿದೆ.
ಬೆಟ್ಟದ ತಳಭಾಗದಲ್ಲಿರುವ ರೋಷನ್ ಪೂವಯ್ಯ ಅವರ ತೋಟದಲ್ಲಿ ಅಸ್ಥಿಪಂಜರ ಕಂಡುಬAದಿದ್ದು, ಇಂದು ತೋಟದ ಕಾರ್ಮಿಕರು ಕೆಲಸಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಸೋಮವಾರಪೇಟೆ ಪೊಲೀಸರಿಗೆ ರೋಷನ್ ಅವರು ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಸ್ಥಳೀಯರ ನೆರವಿನಿಂದ ಪಳೆಯುಳಿಕೆಗಳನ್ನು ಮೇಲಕ್ಕೆ ತಂದಿದ್ದಾರೆ.
ಮೇಲ್ನೋಟಕ್ಕೆ ಪುರುಷನ ಮೃತದೇಹ ಎಂದು ಅಂದಾಜಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮಡಿಕೇರಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಠಾಣಾಧಿಕಾರಿ ಶ್ರೀಧರ್, ಸಿಬ್ಬಂದಿಗಳಾದ ಶಶಿ, ಶಿವಕುಮಾರ್, ಪ್ರವೀಣ್, ರಮೇಶ್ ಅವರುಗಳು ತೆರಳಿ ಮಹಜರು ನಡೆಸಿದ್ದಾರೆ.