ವೀರಾಜಪೇಟೆ, ಜೂ. ೭: ತಾಲೂಕಿನ ೩೮ ಗ್ರಾಮ ಪಂಚಾಯಿತಿ ಗಳಲ್ಲಿ ನಾಲ್ಕು ಗ್ರಾಮ ಪಂಚಾಯಿತಿ ಗಳನ್ನು ಹೊರತುಪಡಿಸಿದರೆ ಉಳಿದ ಪಂಚಾಯಿತಿಗಳಲ್ಲಿ ಕೊರೊನಾ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.
ತಾಲೂಕು ಕಚೇರಿ ಸಭಾಂಗಣ ದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಟಾಸ್ಕ್ಪೋರ್ಸ್ ಸಭೆಯಲ್ಲಿ ಮಾತನಾಡಿ ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪ, ಪೊನ್ನಂಪೇಟೆ, ಸಿದ್ದಾಪುರ, ಬಾಳೆಲೆ ಪಂಚಾಯಿತಿಗಳಲ್ಲಿ ೧೦ಕ್ಕೂ ಅಧಿಕ ಸೋಂಕಿತರಿದ್ದಾರೆ. ಈ ಪಂಚಾಯಿತಿ ಗಳು ಹಾಟ್ಸ್ಪಾಟ್ ಆಗಿದೆ. ಅಮ್ಮತ್ತಿ ಹಾಗೂ ಸಿದ್ದಾಪುರ ವ್ಯಾಪ್ತಿಯ ಖಾಸಗಿ ಎಸ್ಟೇಟ್ಗಳಲ್ಲಿ ಸೋಂಕಿತರ ಸಂಖ್ಯೆ ಉಲ್ಭಣಗೊಂಡಿದ್ದು ತೋಟ ಮಾಲೀಕರು ಸಹಕರಿಸುತ್ತಿಲ್ಲ. ಇದೇ ರೀತಿ ಮುಂದುವರೆದರೆ ಸೋಂಕನ್ನು ನಿಯಂತ್ರಣಕ್ಕೆ ತರಲು ಕಷ್ಟವಾಗುತ್ತದೆ. ಯಾರೇ ಆಗಿರಲಿ ಸರ್ಕಾರದ ನಿಯಮಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ ಅನಿವಾರ್ಯ ವಾಗುತ್ತದೆ. ಒಂದು ವಾರಗಳ ಲಾಕ್ಡೌನ್ ಇರುವುದರಿಂದ ಎಲ್ಲರು ಸಹÀಕರಿಸಿ ಕೊರೊನಾ ಮುಕ್ತ ತಾಲೂಕಾಗಿ ಮಾಡಬಹುದು ಎಂದು ಹೇಳಿದರು.
ನಿರ್ದಾಕ್ಷಿಣ್ಯ ಕ್ರಮ
ತಹಶೀಲ್ದಾರ್ ಆರ್. ಯೋಗಾನಂದ್ ಮಾತನಾಡಿ ಅಮ್ಮತ್ತಿ ಭಾಗದ ಒಂದು ತೋಟದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿ ಕೊಂಡಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದ ಕಾರಣ ೪೦ ಜನರಿಗೆ ಸೋಂಕು ಹರಡಲು ಕಾರಣವಾಗಿದೆ. ಸೋಂಕಿನ ಲಕ್ಷಣ ಕಾಣಿಸಿಕೊಂಡರೆ ಕೂಡಲೇ ತಾಲೂಕು ಆಸ್ಪತ್ರೆಯನ್ನು ಸಂಪರ್ಕಿಸಿದರೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಕಂಪನಿ ತೋಟಗಳ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿಗೆ ಯಾವುದೇ ಚಿಕಿತ್ಸೆ ನೀಡುವಂತಿಲ್ಲ. ಅಂತಹ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಾರÀದಲ್ಲಿ ಹತೋಟಿಗೆ
ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ ಕಳೆದೆರೆಡು ದಿನದಿಂದ ಸೋಂಕಿತರ ಪ್ರಮಾಣ ಕಡಿಮೆ ಯಾಗುತ್ತಿದೆ. ಎಲ್ಲಾ ವಾರ್ಡ್ ಗಳಲ್ಲೂ ಆರೋಗ್ಯ ಕಾರ್ತಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಗತ್ಯ ಇರುವ ಕಡೆಗಳಲ್ಲಿ ಸ್ಯಾನಿಟೈಸ್ ಮಾಡಲಾಗುತ್ತದೆ. ಒಂದು ವಾರದಲ್ಲಿ ಸಂಪೂರ್ಣ ಹತೋಟಿಗೆ ಬರುತ್ತದೆ ಎಂದು ಹೇಳಿದರು.
ಗಂಟಲು ದ್ರವ ತೆಗಿಬೇಕಾ?
ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ ವಿಶ್ವನಾಥ್ ಸಿಂಪಿ ಮಾತನಾಡಿ ಗಂಟಲು ದ್ರವ ಪರೀಕ್ಷೆಯನ್ನು ಜಾಸ್ತಿ ಮಾಡಲಾಗಿದೆ. ಭಾನುವಾರ ಒಂದೇ ದಿನ ೧೮೦ ಜನರ ಗಂಟಲು ದ್ರವ ಪರೀಕ್ಷಿಸಲಾಗಿದೆ. ವಾರ್ಡ್ಗಳಿಗೆ ತೆರಳಿದರೆ ಜನರು ಸಹಕರಿಸುತ್ತಿಲ್ಲ ಎಂದು ಸಭೆಗೆ ತಿಳಿಸಿದಾಗ ಶಾಸಕರು ವಾರ್ಡ್ನ ಸದಸ್ಯರನ್ನು ಕರೆದುಕೊಂಡು ಹೋಗಿ ಎಂದು ಹೇಳಿದರು. ಅದಕ್ಕೆ ಉತ್ತರಿಸಿದ ವೈದ್ಯಾಧಿಕಾರಿಗಳು ಕೆಲವು ಸದಸ್ಯರುಗಳು ಟಾಸ್ಕ್ಫೋರ್ಸ್ ಸಭೆಗಳಲ್ಲಿ ಸೋಂಕನ್ನು ಹತೋಟಿಗೆ ತರಲು ಎಲ್ಲರ ಗಂಟಲು ದ್ರವ ಪರೀಕ್ಷಿಸಿ ಎಂದು ಹೇಳುತ್ತಾರೆ. ಅವರೊಂದಿಗೆ ವಾರ್ಡ್ಗೆ ತೆರಳಿದರೆ ಸರ್ ಎಲ್ಲಾರ ಗಂಟಲು ದ್ರವ ತೆಗಿಬೇಕಾ ಎಂದು ಕೇಳುತ್ತಾರೆ ಎಂದು ಸಭೆಗೆ ತಿಳಿಸಿದರು.
ಮಳೆಗಾಲಕ್ಕೆ ಸಿದ್ಧರಾಗಿ
ಈಗಾಗಲೇ ಕೇರಳ ರಾಜ್ಯಕ್ಕೆ ಗಂಟಲು ದ್ರವ ಪರೀಕ್ಷೆಯನ್ನು ಜಾಸ್ತಿ ಮಾಡಲಾಗಿದೆ. ಭಾನುವಾರ ಒಂದೇ ದಿನ ೧೮೦ ಜನರ ಗಂಟಲು ದ್ರವ ಪರೀಕ್ಷಿಸಲಾಗಿದೆ. ವಾರ್ಡ್ಗಳಿಗೆ ತೆರಳಿದರೆ ಜನರು ಸಹಕರಿಸುತ್ತಿಲ್ಲ ಎಂದು ಸಭೆಗೆ ತಿಳಿಸಿದಾಗ ಶಾಸಕರು ವಾರ್ಡ್ನ ಸದಸ್ಯರನ್ನು ಕರೆದುಕೊಂಡು ಹೋಗಿ ಎಂದು ಹೇಳಿದರು. ಅದಕ್ಕೆ ಉತ್ತರಿಸಿದ ವೈದ್ಯಾಧಿಕಾರಿಗಳು ಕೆಲವು ಸದಸ್ಯರುಗಳು ಟಾಸ್ಕ್ಫೋರ್ಸ್ ಸಭೆಗಳಲ್ಲಿ ಸೋಂಕನ್ನು ಹತೋಟಿಗೆ ತರಲು ಎಲ್ಲರ ಗಂಟಲು ದ್ರವ ಪರೀಕ್ಷಿಸಿ ಎಂದು ಹೇಳುತ್ತಾರೆ. ಅವರೊಂದಿಗೆ ವಾರ್ಡ್ಗೆ ತೆರಳಿದರೆ ಸರ್ ಎಲ್ಲಾರ ಗಂಟಲು ದ್ರವ ತೆಗಿಬೇಕಾ ಎಂದು ಕೇಳುತ್ತಾರೆ ಎಂದು ಸಭೆಗೆ ತಿಳಿಸಿದರು.
ಮಳೆಗಾಲಕ್ಕೆ ಸಿದ್ಧರಾಗಿ
ಈಗಾಗಲೇ ಕೇರಳ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಈ ವಾರದಲ್ಲಿ ಜಿಲ್ಲೆಗೆ ಮಳೆ ಪ್ರವೇಶವಾಗುವ ಮನ್ಸೂಚನೆ ನೀಡಿದ್ದಾರೆ. ಕಳೆದ ಮೂರು ವರ್ಷ ನಿರಂತರ ಪ್ರಕೃತಿ ವಿಕೋಪ ಕಂಡಿದೆ. ಈ ಬಾರಿ ಅಂತಹ ಮಳೆಯಾಗುವುದಿಲ್ಲ ಎಂದು ಹೇಳುತ್ತಿದ್ದರೂ, ಮುಂಜಾಗ್ರತಾ ಕ್ರಮವಾಗಿ ನಾವು ಸಿದ್ಧರಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪೊನ್ನಂಪೇಟೆ ತಹಶೀಲ್ದಾರ್ ಕಾವ್ಯರಾಣಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಡಿವೈಎಸ್ಪಿ ಜಯಕುಮಾರ್, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.