ಕಡAಗ, ಜೂ. ೫: ಗೋಣಿಕೊಪ್ಪಲುವಿನ ಆಂಟೋನಿ ಡಿಸೋಜ ಎಂಬವರು ಕೋವಿಡ್‌ಗೆ ಬಲಿಯಾಗಿದ್ದು, ಇವರ ಅಂತ್ಯಕ್ರಿಯೆ ಗೋಣಿಕೊಪ್ಪದ ಸೆಂಟ್ ಥಾಮಸ್ ಚರ್ಚಿನಲ್ಲಿ ನಡೆಯಿತು. ಮೃತ ಪಟ್ಟ ವ್ಯಕ್ತಿಯು ಕ್ರೆöÊಸ್ತ ಧರ್ಮಕ್ಕೆ ಸೇರಿದವರಾಗಿದ್ದು ಅವರ ಧರ್ಮದ ಪ್ರಕಾರ ಕೋವಿಡ್ ನಿಯಮದಂತೆ ಅಂತ್ಯಕ್ರಿಯೆ ನಡೆಸಲಾಯಿತು.

ಹಿಂದು ಧರ್ಮದ ಶರತ್ ಕಾಂತ್, ಇಸ್ಲಾಂ ಧರ್ಮದ ಹಮೀದ್, ಕ್ರೆöÊಸ್ತ ಧರ್ಮದ ಡಾಡು ಜೋಸಫ್ ಇವರುಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗೋಣಿಕೊಪ್ಪಲುವಿನ ಸಮಾಜ ಸೇವಕ ಶರತ್ ಹಾಗೂ ಡಾಡು ಜೋಸೆಫ್ ಮತ್ತು ಹಮೀದ್‌ರವರು ಗೋಣಿಕೊಪ್ಪ ಭಾಗದಲ್ಲಿ ಯಾವುದೇ ಜಾತಿ, ಧರ್ಮ, ಭೇದಭಾವ ಇಲ್ಲದೆ ಕೋವಿಡ್ ಸಂದರ್ಭದಲ್ಲಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ ಸೆಂಟ್ ಥಾಮಸ್ ಚರ್ಚ್ ಗುರುಗಳಾದ ಫಾದರ್ ಅಲೆಕ್ಸ್ ಭಾಗಿಯಾಗಿದ್ದರು. -ವರದಿ: ನೌಫಲ್ ಎಂ.ಬಿ., ಕಡಂಗ