ನಾಪೋಕ್ಲು, ಜೂ. ೫: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ಕೋವಿಡ್ ಪರೀಕ್ಷಾ ಶಿಬಿರ ಏರ್ಪಡಿಸಲಾಗಿತ್ತು. ಆಯೋಜಿಸಲಾಗಿದ್ದ ೪ನೇ ಶಿಬಿರದಲ್ಲಿ ಪಂದೇಟ್ ಕಾಲೋನಿಯ ನಿವಾಸಿಗಳು, ಗ್ರಾಮ ಪಂಚಾಯಿತಿಗೆ ಒಳಪಟ್ಟ ಅಂಗಡಿ, ಹೊಟೇಲ್ ಮಾಲೀಕರು ಸೇರಿದಂತೆ ೬೭ ಜನ ಪರೀಕ್ಷೆಗೆ ಮಾದರಿ ನೀಡಿದರು.

ಶಿಬಿರದಲ್ಲಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ, ಸದಸ್ಯರಾದ ಮಚ್ಚೂರ ರವೀಂದ್ರ, ಚೋಕಿರ ಬಾಬಿ ಭೀಮಯ್ಯ, ಆರೋಗ್ಯ ಇಲಾಖಾ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖಾ ಸಿಬ್ಬಂದಿ ಇದ್ದರು.