ಮಡಿಕೇರಿ, ಜೂ. ೫: ಆಲೂರು ಸಿದ್ದಾಪುರ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ. ಆದ್ದರಿಂದ ತಾ. ೭ ರಂದು (ನಾಳೆ) ಬೆಳಿಗ್ಗೆ ೧೧ ಗಂಟೆಯಿAದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಸೆಸ್ಕ್ ಇಇ ಅಶೋಕ್ ಅವರು ತಿಳಿಸಿದ್ದಾರೆ.
ಆಲೂರು ಸಿದ್ದಾಪುರ, ಮಾಲಂಬಿ, ಗೋಣಿಮರೂರು, ಸಿದ್ದಲಿಂಗಪುರ ಗಣಗೂರು, ಬಾಣಾವಾರ, ಸಂಗಯ್ಯನಪುರ, ನಾಗವಾಲ ಬಡಬನಹಳ್ಳಿ, ಹೊನ್ನೆಕೊಪ್ಪಲು, ಹೊಸಳ್ಳಿ, ಕೈಸರವಳ್ಳಿ, ಆಲೂರು ಸಿದ್ದಪುರ ಡೊಡ್ಡಳ್ಳಿ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಅವರು ಕೋರಿದ್ದಾರೆ.