ಶನಿವಾರಸಂತೆ, ಜೂ. ೫: ಕೋವಿಡ್ ೨ನೇ ಅಲೆ ಶರವೇಗದಲ್ಲಿ ಎಲ್ಲೆಡೆ ವ್ಯಾಪಿಸುತ್ತಾ ಜನರಲ್ಲಿ ಭಯ ಮೂಡಿಸುತ್ತಿದೆ. ಜನ ಜೀವನ್ಮರಣದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಳ್ಳಿಹಳ್ಳಿಗಳಲ್ಲೂ ಕೊರೊನಾ ಸೋಂಕು ದೃಢಪಡುತ್ತಾ ಎಷ್ಟೋ ಹಳ್ಳಿಗಳು ಸೀಲ್‌ಡೌನ್‌ಗೆ ಒಳಪಟ್ಟಿವೆ. ಆದರೆ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ತ ಮತ್ತು ಜಾಗೇನಳ್ಳಿ ಗ್ರಾಮದಲ್ಲಿ ಈ ಹಿಂದೆ ಒಟ್ಟು ೨೩ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಕೋವಿಡ್ ಬಂದ ೨೩ ವ್ಯಕ್ತಿಗಳು ಗುಣಮುಖರಾಗಿ ಹೋಂಕ್ವಾರAಟೈನ್ ಅವಧಿ ಮುಗಿದಿರುತ್ತದೆ. ಒಂದು ವಾರದಿಂದ ಯಾವುದೇ ಕೋವಿಡ್ ಪ್ರಕರಣ ದಾಖಲಾಗಿರುವುದಿಲ್ಲ. ಆದ್ದರಿಂದ ನಿಡ್ತ ಮತ್ತು ಜಾಗೇನಳ್ಳಿ ಗ್ರಾಮಗಳು ಕೊರೊನಾ ಮುಕ್ತ ಗ್ರಾಮವಾಗಿರುತ್ತದೆ.

ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಡಿಗಳಲೆ ಗ್ರಾಮದಲ್ಲಿ ಈ ಹಿಂದೆ ಒಟ್ಟು ೫೨ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಅತಿ ಹೆಚ್ಚು ಪ್ರಕರಣ ದಾಖಲಾದ ಗ್ರಾಮವಾಗಿದ್ದು, ಕೋವಿಡ್‌ನಿಂದ ಬಂದ ೫೨ ಪ್ರಕರಣಗಳ ಪೈಕಿ ೧ ಪ್ರಕರಣ ಮರಣ ಹೊಂದಿದ್ದು, ೫೧ ಕೊರೊನಾ ಬಂದ ವ್ಯಕ್ತಿಗಳು ಗುಣಮುಖರಾಗಿದ್ದಾರೆ. ಇತ್ತೀಚಿನ ಒಂದು ವಾರದಿಂದ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ ಎಂದು ಸರಕಾರದ ಮಾರ್ಗಸೂಚಿ ಪಾಲಿಸುತ್ತಿರುವುದರಿಂದ ೩ ಗ್ರಾಮಗಳು ಕೋವಿಡ್ ಮುಕ್ತವಾಗಿರುವುದು ಹೆಮ್ಮೆಪಡುವ ವಿಷಯ ಎನ್ನುತ್ತಾರೆ ನಿಡ್ತ ವೃತ್ತ ಗ್ರಾಮ ಲೆಕ್ಕಾಧಿಕಾರಿ ಕೆ.ಎಸ್. ಸಂತೋಷ್.