ಮಡಿಕೇರಿ, ಜೂ. ೬: ವಿಶ್ವ ಪರಿಸರ ದಿನಾಚರಣೆಯನ್ನು ತಾ. ೫ರಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಕೊರೊನಾ ಸಂಕಷ್ಟದ ನಡುವೆಯೂ ಹಲವು ಸಾಂಕೇತಿಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ದಿನದ ಅಂಗವಾಗಿ ಗಿಡ ನೆಡುವುದು, ಗ್ರಾ.ಪಂ. ಮೂಲಕ ಕಸ ವಿಲೇವಾರಿ ವಾಹನ ಹಾಗೂ ಘಟಕದ ಉದ್ಘಾಟನೆಯಂತಹ ಕಾರ್ಯಕ್ರಮವನ್ನು ಆಚರಿಸಲಾಗಿದೆ. ಪ್ರಸ್ತುತ ಲಾಕ್ಡೌನ್ ಕಾರಣದಿಂದಾಗಿ ಈ ಹಿಂದಿನ ವರ್ಷಗಳಂತೆ ಸಂಭ್ರಮದ ಪರಿಸರ ದಿನ ಕಾರ್ಯಕ್ರಮ ನಡೆಯದಿದ್ದರೂ, ಹಲವೆಡೆ ಸಾಂಕೇತಿಕ ಆಚರಣೆ ನಡೆದಿರುವ ಕುರಿತು ವರದಿಯಾಗಿದೆ.
ಮಡಿಕೇರಿ : ಕೊಡಗು ಲೇಖಕ ಮತ್ತು ಕಲಾವಿದರ ಬಳಗ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲ್ಲಿ ನಗರ ದಲ್ಲಿ ಪರಿಸರ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಸಂತ ಜೋಸೆಫರ ಶಾಲಾ ಮೈದಾನದ ಆವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ಕಾಳಜಿ ತೋರಲಾಯಿತು. ಬಳಿಕ ಕುವೆಂಪು ಪ್ರತಿಮೆ ಬಳಿ ಗಿಡಗಳನ್ನು ನೆಡಲಾಯಿತು.
ನಗರಸಭಾ ಸದಸ್ಯರುಗಳಾದ ಮಹೇಶ್ ಜೈನಿ, ಅರುಣ್ ಶೆಟ್ಟಿ, ಕವಿತಾ ಲೋಕೇಶ್, ಅನಿತಾಪೂವಯ್ಯ, ಡಿ.ಆರ್.ಎಫ್.ಒ. ಮಲ್ಲಿಕಾರ್ಜುನ, ಲೇಖಕ ಮತ್ತು ಕಲಾವಿದರ ಬಳಗದ ಪ್ರಮುಖರಾದ ಟಿ.ಪಿ.ರಮೇಶ್, ಮುನೀರ್ ಅಹಮ್ಮದ್, ಕೆ.ಟಿ.ಬೇಬಿ ಮ್ಯಾಥ್ಯು, ಸಾಬು ಉತ್ತಯ್ಯ, ಮುಂಡAಡ ಸುಬ್ಬಪ್ಪ, ವಿಲ್ ಫ್ರೆಡ್ ಕ್ರಾಸ್ತ, ಜೋಬಿ ಮ್ಯಾಥ್ಯು, ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ಕೆ.ಟಿ.ಬೇಬಿಮ್ಯಾಥ್ಯು ಅವÀರು ಪರಿಸರ ಕಾಳಜಿಯ ಪ್ರಮಾಣ ವಚನ ಬೋಧಿಸಿದರು.
ಎನ್ಸಿಸಿ ಕೆಡೆಟ್ಗಳಿಂದ
ಗೋಣಿಕೊಪ್ಪಲು: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕಾವೇರಿ ಕಾಲೇಜಿನ ಒಟ್ಟು ೧೬೦ ಎನ್.ಸಿ.ಸಿ ಕೆಡೆಟ್ ಗಳು ತಮ್ಮ ತಮ್ಮ ಮನೆಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರೆAದು ಏನ್.ಸಿ.ಸಿ.ಘಟಕದ ಅಧಿಕಾರಿ ಲೆಫ್ಟಿನೆಂಟ್ ಅಕ್ರಂ ತಿಳಿಸಿದರುಗೋಣಿಕೊಪ್ಪಲು : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೊನ್ನಂಪೇಟೆ ತಾಲೂಕು ಆಡಳಿತ ವತಿಯಿಂದ ಪೊನ್ನಂಪೇಟೆ ತಾಲೂಕು ಕಚೇರಿಯ ಆವರಣದಲ್ಲಿ ವಿವಿಧ ಜಾತಿಯ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ರೋಟರಿ ಸಂಸ್ಥೆಯ ಪದಾಧಿಕಾರಿಗಳು ವಿವಿಧ ರೀತಿಯ ಸಸಿಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಾವ್ಯರಾಣಿ, ಅರಣ್ಯ ಕಾಲೇಜಿನ ಡೀನ್ ಕುಶಾಲಪ್ಪ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯ ನಿರ್ದೇಶಕರಾದ ದೀನಾ, ತಾಲೂಕು ಕಚೇರಿಯ ಶಿರಸ್ತೇದಾರ್ ರಾಧಾಕೃಷ್ಣ, ತಾಲೂಕು ಕಚೇರಿಯ ಸಿಬ್ಬಂದಿಗಳು, ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.