ಶನಿವಾರಸAತೆ, ಜೂ. ೪: ಸೋಂಕು ಹರಡುವದನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಕೈಗೊಂಡು ಕೊರೊನಾ ಮುಕ್ತ ಗ್ರಾಮವಾಗಿಸಲು ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರ ಸೇವೆ ಅಗತ್ಯ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗಳಲೆ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೊರೊನಾದಿಂದ ಪಂಚಾಯಿತಿಯಲ್ಲಿ ೪ ಸಾವು ಆಗಿದೆ. ಅಂಗನವಾಡಿ, ಆಶಾಕಾರ್ಯಕರ್ತೆಯರ ಸೇವೆ ಮುಖ್ಯ. ಇಂದಿನ ಸಭೆಗೆ ಅಂಗನವಾಡಿಯ ಕಾರ್ಯಕರ್ತೆಯೊಬ್ಬರು ಗೈರು ಹಾಜರಾದ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿ, ಅವರು ಸಹಕಾರ ನೀಡದಿದ್ದರೆ, ಸೇವೆಯಿಂದ ವಜಾ ಮಾಡುವಂತೆ ಸೂಚಿಸಿದರು. ಶನಿವಾರಸಂತೆ ಹೋಬಳಿ ವಿಭಾಗದಲ್ಲಿ ಮಾಸ್ಕ್ ಹಾಕಿಕೊಳ್ಳದೆ ದ್ವಿಚಕ್ರ ವಾಹನದಲ್ಲಿ ವಿನಾಕಾರಣ ಓಡಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣಾಧಿಕಾರಿ ದೇವರಾಜ್ ಅವರಿಗೆ ಸೂಚಿಸಿದರು.
ತಹಶೀಲ್ದಾರ್ ಗೋವಿಂದ್ ರಾಜ್, ನೋಡಲ್ ಅಧಿಕಾರಿ ಬಾಲಕೃಷ್ಣ ಮಾತನಾಡಿದರು. ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮ ಕಿರಣ್, ಉಪಾಧ್ಯಕ್ಷ ನಿತಿನ್, ಡಾ. ರಾಜೇಶ್ವರಿ ಪಂಚಾಯಿತಿ ಸದಸ್ಯರುಗಳಾದ ಡಿ.ಪಿ. ಬೋಜಪ್ಪ, ಸಿ.ಜೆ, ಗಿರೀಶ್, ಎಸ್.ಸಿ. ಕಾಂತರಾಜ್, ಮಹಂತೇಶ್, ಜಾನಕಿ, ನಂದಿನಿ, ಎಸ್.ಪಿ. ಭಾಗ್ಯ, ಗೋಪಿಕಾ, ಸತ್ಯವತಿ, ಭವಾನಿ, ಕಂದಾಯ ಇಲಾಖೆ ಅಧಿಕಾರಿಗಳು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು, ಪಿಡಿಓ ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.