ಕೊಡಗು ಜಿಲ್ಲೆಯಲ್ಲಿ ಮೂರು ತಾಲೂಕಿನಲ್ಲಿ ಸೇರಿ ಒಟ್ಟು ೧೫೭ ಪ್ರೌಢಶಾಲೆಗಳಿವೆ. ಈ ಶಾಲೆಗಳ ಒಟ್ಟು ೬೪೮೪ ವಿದ್ಯಾರ್ಥಿಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸಬೇಕಾಗಿದೆ ಎಂದು ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ತಿಳಿಸಿದ್ದಾರೆ. ಈಗಾಗಲೇ ಶಾಲೆಗಳಲ್ಲಿ ಪಾಠ ಪ್ರವಚನ, ಪಠ್ಯಚಟುವಟಿಕೆಗಳು ಪೂರ್ಣಗೊಂಡಿವೆ.
ಪ್ರಸ್ತುತ ವಿದ್ಯಾರ್ಥಿಗಳಿಗೆ, ಆನ್ಲೈನ್ ಮೂಲಕ, ವಾಟ್ಸಾö್ಯಪ್, ಕಾನ್ಫರೆನ್ಸ್ ಕಾಲ್ಗಳ ಮೂಲಕ ಶಿಕ್ಷಕರು ಅಗತ್ಯ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಪಾಠಪ್ರವಚನಗಳ ಬಗ್ಗೆ ಪುನರಾವರ್ತನೆ (ರಿವಿಜನ್) ಮಾಡಿಸುವದು, ಕ್ವಿಜ್ ನಡೆಸುವದು, ಹಳೆಯ ಪ್ರಶ್ನೆ ಪತ್ರಿಕೆಗಳ ಆಧಾರದಲ್ಲಿ ಮಾಹಿತಿ ಒದಗಿಸುವದು. ಇಂತಹ ಕೆಲಸ - ಕಾರ್ಯಗಳನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳೂ ತಮ್ಮ ಸಂಶಯಗಳ ಬಗ್ಗೆ
(ಮೊದಲ ಪುಟದಿಂದ) ಶಿಕ್ಷಕರಿಂದ ವಿವರ ಪಡೆದುಕೊಳ್ಳುತ್ತಿದ್ದಾರೆ ಎಂದು ಮಚ್ಚಾಡೋ ವಿವರವಿತ್ತರು. ಕೆಲವೆಡೆ ನೆಟ್ವರ್ಕ್ ಸಮಸ್ಯೆಗಳಿರುವದು ಒಂದಷ್ಟು ತೊಡಕಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸಾವಿರಕ್ಕೂ ಅಧಿಕ ಶಿಕ್ಷಕರು ಕೋವಿಡ್ ಕರ್ತವ್ಯದಲ್ಲಿ
ಪ್ರಸಕ್ತ ಲಾಕ್ಡೌನ್ ಸೇರಿದಂತೆ ಕೋವಿಡ್ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಹಲವು ನಿರ್ಬಂಧಗಳಿದ್ದು, ಈ ಕರ್ತವ್ಯಕ್ಕೆ ಶಿಕ್ಷಕರನ್ನೂ ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಸುಮಾರು ಸಾವಿರಕ್ಕೂ ಅಧಿಕ ಶಿಕ್ಷಕರು ಈ ಕರ್ತವ್ಯಕ್ಕೆ ನಿಯೋಜಿತರಾಗಿದ್ದಾರೆ. ಹೋಂ ಕ್ವಾರಂಟೈನ್, ಐಸೋಲೇಷನ್ನಲ್ಲಿರುವವರ ಬಗ್ಗೆ ನಿಗಾ ವಹಿಸುವದು, ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಗುರುತಿಸುವದು, ವಿವಿಧ ಚೆಕ್ಪೋಸ್ಟ್ಗಳಲ್ಲಿ ಕರ್ತವ್ಯ ನಿರ್ವಹಣೆ, ಕೋವಿಡ್ಕೇರ್ ಸೆಂಟರ್ ಹಾಗೂ ಸಂಬAಧಿತ ಕಚೇರಿಗಳಲ್ಲೂ ಕಾರ್ಯನಿರ್ವಹಣೆಗೆ ಶಿಕ್ಷಕರಿಗೂ ಜವಾಬ್ದಾರಿ ನೀಡಲಾಗಿದ್ದು, ನಿಯೋಜಿತರು ಈ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಮಚ್ಚಾಡೋ ಅವರು ಮಾಹಿತಿ ನೀಡಿದ್ದಾರೆ.