ಮಡಿಕೇರಿ, ಜೂ. ೪: ಕೋವಿಡ್ ಲಸಿಕೆ ಅಭಿಯಾನದ ಆದ್ಯತಾ ಗುಂಪಿಗೆ ವರ್ತಕರನ್ನು ಸೇರಿಸಬೇಕೆಂದು ಜಿಲ್ಲಾಧಿಕಾರಿಗೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿçÃಸ್ ಮನವಿ ಮಾಡಿದೆ.
ಆದ್ಯತಾ ಗುಂಪು ಮಾಡಿ ಲಸಿಕೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಅದೇ ರೀತಿ ಅಗತ್ಯ ವಸ್ತುಗಳನ್ನು ಜನರಿಗೆ ಒದಗಿಸುತ್ತಿರುವ ವರ್ತಕರನ್ನು ಪರಿಗಣಿಸಿ ಆದ್ಯತಾ ಗುಂಪಿಗೆ ಸೇರಿಸಬೇಕೆಂದು ಕಾರ್ಯದರ್ಶಿ ಅಂಬೆಕಲ್ ನವೀನ್ಕುಶಾಲಪ್ಪ ಕೋರಿದ್ದಾರೆ.
ಜೊತೆಗೆ ಅಗತ್ಯ ವಸ್ತು ಖರೀದಿಗೆ ನಿಗದಿಪಡಿಸಿರುವ ಸಮಯವನ್ನು ಬೆಳಿಗ್ಗೆ ೬ ರಿಂದ ೧೨ ಗಂಟೆಗೆ ವಿಸ್ತರಿಸಬೇಕು. ಮಳೆಗಾಲ ಆರಂಭಗೊAಡ ಹಿನ್ನೆಲೆ ಎಲ್ಲಾ ರೀತಿಯ ಅಂಗಡಿ ತೆರೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.