ಮಡಿಕೇರಿ, ಜೂ. ೪: ಹುಬ್ಬಳ್ಳಿಯ ಡಿಆರ್‌ಎನ್ ಸಂಸ್ಥೆ ವತಿಯಿಂದ ವೆಂಟಿಲೇಟರ್, ಆಕ್ಸಿಜನ್ ಕಿಟ್. ಎಸಿ ಸೇರಿದಂತೆ ಸುಸಜ್ಜಿತ ವ್ಯವಸ್ಥೆಯುಳ್ಳ ಆ್ಯಂಬ್ಯುಲೆನ್ಸ್ನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ದಿನೇಶ್ ಆರ್ ನಾಯಕ್ ಮತ್ತು ದೀಪಾ ನಾಯಕ್ ಅವರು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಆ್ಯಂಬ್ಯುಲೆನ್ಸ್ ದಾಖಲೆ ಪತ್ರ ನೀಡುವ ಮೂಲಕ ಹಸ್ತಾಂತರಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಅವರ ಕೋರಿಕೆ ಮೇರಿಗೆ ಹುಬ್ಬಳ್ಳಿಯ ಡಿಆರ್‌ಎನ್ ಸಂಸ್ಥೆಯ ವ್ಯವಸ್ಥಾಪಕರು ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ೩೦ ಲಕ್ಷ ರೂ ಮೌಲ್ಯದ ಸುಸಜ್ಜಿತ ಆ್ಯಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದರು. ಬಳಿಕ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಹುಬ್ಬಳ್ಳಿಯ ಡಿಆರ್‌ಎನ್ ಸಂಸ್ಥೆಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ನಿರ್ದೇಶಕರಾದ ದೀಪಾ ನಾಯಕ್ ಮಾತನಾಡಿ ಇಡೀ ಪ್ರಪಂಚ ಕೋವಿಡ್‌ನಿಂದಾಗಿ ಸಂಕಷ್ಟ ಎದುರಿಸುತ್ತಿದೆ. ಆ ನಿಟ್ಟಿನಲ್ಲಿ ಕೈಲಾದ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಸುಸಜ್ಜಿತ ಆಂಬ್ಯುಲೆನ್ಸ್ನ್ನು ಜಿಲ್ಲಾ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಆಡಳಿತಾಧಿಕಾರಿ ಡಾ.ನಂಜುAಡೇಗೌಡ, ಅಧೀಕ್ಷಕರಾದ ಡಾ.ಮಂಜುನಾಥ, ಡಾ.ವಿಶಾಲ ಕುಮಾರ್, ಡಾ.ರೂಪೇಶ್ ಗೋಪಾಲ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಎಂ.ಎ.ನಿರAಜನ, ಡಾ.ಜಯಲಕ್ಷಿö್ಮ ಪಾಟ್ಕರ್ ಇತರರು ಇದ್ದರು.