ಮಡಿಕೇರಿ, ಜೂ. ೪: ಮಡಿಕೇರಿ ನಗರದ ಕಸ ವಿಲೇವಾರಿ ಸಮಸ್ಯೆಗೆ ಸಂಬAಧಿಸಿದAತೆ ಸ್ಟೋನ್ ಹಿಲ್ನಲ್ಲಿನ ಪ್ರಸ್ತುತದ ಚಿತ್ರಣವನ್ನು ಸರಕಾರಿ ಅಧಿಕಾರಿಗಳ ಮೂಲಕ ಪರಿಶೀಲನೆ ಮಾಡುವ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ತೀರ್ಮಾನಿಸಿದೆ.
ಮಡಿಕೇರಿ ನಗರದಲ್ಲಿ ಕಸ ವಿಲೇವಾರಿಗೆ ಶಾಶ್ವತ ಪರಿಹಾರಕ್ಕೆ ಸಂಬAಧಿಸಿದAತೆ ನಗರದ ಎಸ್ಆರ್ವಿಕೆ ಸಂಘದ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬAಧಿಸಿದAತೆ ನ್ಯಾಯಾಲಯವು ಪ್ರಸ್ತುತ ಸ್ಟೋನ್ ಹಿಲ್ನಲ್ಲಿ ಹಲವಾರು ವರ್ಷಗಳಿಂದ ಸಂಗ್ರಹವಾಗಿರುವ ಕಸ ತ್ಯಾಜ್ಯಗಳ ವಿಲೇವಾರಿ ಹಾಗೂ ಜಾಗದ ರಕ್ಷಣೆಗೆ ಸಂಬAಧಿಸಿದAತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತಾಗಿ ಅಫಿಡಾವಿಟ್ ಸಲ್ಲಿಸುವಂತೆ ನಗರಸಭೆಗೆ ಸೂಚನೆ ನೀಡಿತ್ತು. ಅದರಂತೆ ನಗರಸಭೆ ವತಿಯಿಂದ ಸ್ಟೋನ್
ಹಿಲ್ನಲ್ಲಿ ಕಸಗಳನ್ನು ಸುರಿಯುತ್ತಿಲ್ಲ, ಒಣ ಹಾಗೂ ಹಸಿ ಕಸಗಳನ್ನು ಬೇರ್ಪಡಿಸಲಾಗುತ್ತಿದೆ. ವಾರ್ಡ್ಗಳಲ್ಲಿಯೇ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಕೋವಿಡ್ ಇರುವದರಿಂದ ಕಾರ್ಮಿಕರ ಅಲಭ್ಯತೆಯಿಂದಾಗಿ ಕೆಲಸ ನಿರ್ವಹಿಸಲಾಗುತ್ತಿಲ್ಲ ಎಂದು ಅಫಿಡಾವಿಟ್ ಸಲ್ಲಿಸಿದ್ದರು.
ಈ ಕುರಿತಾಗಿ ಇಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದು, ಈ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರಾದ ಅನುಚಂಗಪ್ಪ ಅವರು, ಅಫಿಡಾವಿಟ್ನಲ್ಲಿ ಸಲ್ಲಿಸಲಾಗಿರುವ ಮಾಹಿತಿಗಳು ಸುಳ್ಳಾಗಿದ್ದು, ಸ್ಟೋನ್ಹಿಲ್ನಲ್ಲಿಯ ಪ್ರಸ್ತುತದ ಚಿತ್ರಣ ಬೇರೆಯೇ ಆಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದರಿಂದ ಅಸಮಾಧಾನಿತರಾದ ಹಿರಿಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕ ಅವರು, ಈ ಸಂಬAಧ ಸರಕಾರಿ ಅಧಿಕಾರಿಗಳನ್ನು ನೇಮಕ ಮಾಡಿ ಪರಿಶೀಲನೆ ಮಾಡಿ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಪ್ರಕಟಿಸಿದರು. ಅಲ್ಲದೆ, ಪ್ರಸ್ತುತ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಸಲ್ಲಿಸುವಂತೆ ಅರ್ಜಿದಾರ ಪರ ವಕೀಲರಿಗೆ ತಿಳಿಸಿದರು. ಪ್ರಕರಣದ ಕುರಿತ ಮುಂದಿನ ವಿಚಾರಣೆಯನ್ನು ತಾ.೧೦ಕ್ಕೆ ಕಾಯ್ದಿರಿಸಿದ್ದಾರೆ.
-ಸಂತೋಷ್