ಗೋಣಿಕೊಪ್ಪ ವರದಿ, ಜೂ. ೨: ಕಿರುಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ಲಲಿತಾ ಅವರಿಗೆ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್, ಮುಖ್ಯ ಶಿಕ್ಷಕಿ ರಾಚಮ್ಮ, ಶಿಕ್ಷಕರಾದ ವೀಣಾ, ಶ್ರೀಜಾ, ಶಾಲಾಭಿವೃದ್ಧಿ ಸಮಿತಿ ಸದಸ್ಯ ರಮೇಶ್, ಶಿಕ್ಷಕಿ ಲಲಿತಾ ಅವರ ಪತಿ ರಮೇಶ್ ಇದ್ದರು.