ಮಡಿಕೇರಿ, ಜೂ. ೩: ಕೋವಿಡ್ ೧೯ ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿರುವ ಕಲಾವಿದರಿಗೆ ಸರಕಾರ ಆರ್ಥಿಕ ನೆರವು ಘೋಷಣೆ ಮಾಡಿದ್ದು, ಕಲಾವಿದರು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಸಂಬAಧ ಸರಕಾರ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಿದೆ. ಸಮಿತಿಯಲ್ಲಿ ಐವರು ಸದಸ್ಯರುಗಳು ಹಾಗೂ ಓರ್ವ ಅಧಿಕಾರಿ ಇರುತ್ತಾರೆ. ಕೊಡಗು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಸದಸ್ಯರಾದ ಪಡಿಙÁರಂಡ ಪಭುಕುಮಾರ್, ನಾಪಂಡ ರವಿಕಾಳಪ್ಪ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಅಗೋಳಿಕಜೆ ಧನಂಜಯ, ಡಾ.ಕೂಡಕಂಡಿ ದಯಾನಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ ಅವರುಗಳನ್ನು ನೇಮಕ ಮಾಡಲಾಗಿದೆ.
ಕಲಾವಿದರು ಸಲ್ಲಿಸುವ ಅರ್ಜಿಗಳು ಈ ಸಮಿತಿಯ ಮುಂದೆ ಬರಲಿದ್ದು, ಸಮಿತಿ ಸದಸ್ಯರು ಅರ್ಜಿಗಳನ್ನು ಪರಿಶೀಲಿಸಿ, ನೆರವು ಪಡೆಯಲು ಅರ್ಹರಾದವರನ್ನು ಪರಿಗಣಿಸಿ ಸರಕಾರಕ್ಕೆ ಸಲ್ಲಿಸುವ ಜವಾಬ್ದಾರಿ ಹೊಂದಿರುತ್ತಾರೆ.