ಗೋಣಿಕೊಪ್ಪಲು, ಜೂ. ೩: ಗೋಣಿಕೊಪ್ಪಲುವಿನ ಕೊಡುಗೈ ದಾನಿ ಉಂಬಾಯಿರವರು ನೂರಾರು ಜನರಿಗೆ ಹಸಿ ಮೀನು ವಿತರಣೆ ಮಾಡಿದ್ದಾರೆ.
ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆರು, ಹಮಾಲಿಗಳು ಸೇರಿದಂತೆ ನೂರಾರು ಆಟೋ ಚಾಲಕರಿಗೆ ಹಸಿ ಮೀನು ವಿತರಣೆ ಮಾಡಿದರು.
ಕೋವಿಡ್ ಸಂದರ್ಭ ಸಹಾಯ ಮಾಡಬೇಕು ಎಂಬ ಮನಸ್ಸಿನಿಂದ ಈ ರೀತಿಯಲ್ಲಿ ಸಹಾಯ ಮಾಡಲು ಮುಂದೆ ಬಂದಿರುವುದಾಗಿ ದಾನಿಗಳು, ಮೀನು ವ್ಯಾಪಾರಿಗಳಾದ ಉಂಬಾಯಿ ಈ ಸಂದರ್ಭ ತಿಳಿಸಿದರು.