ಗ್ರಾ.ಪA. ಅಲ್ಪಸಂಖ್ಯಾತ ಸದಸ್ಯರ ಒಕ್ಕೂಟ ಆಗ್ರಹ
ಪೊನ್ನಂಪೇಟೆ, ಜೂ. ೩: ವಸತಿ ರಹಿತ ಫಲಾನುಭವಿಗಳಿಗೆ ಸರಕಾರದಿಂದ ದೊರೆಯುತ್ತಿದ್ದ ಯೋಜನೆಗಳು ಕಳೆದ ೩ ವರ್ಷಗಳಿಂದ ಅನುಷ್ಠಾನಗೊಳ್ಳುತ್ತಿಲ್ಲ. ಇದರಿಂದಾಗಿ ಅರ್ಹ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸ್ಥಗಿತಗೊಂಡಿರುವ ವಸತಿ ಯೋಜನೆ ಗಳನ್ನು ಸರಕಾರ ಕೂಡಲೇ ಪುನರಾರಂಭಿಸಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಗ್ರಾ.ಪಂ. ಅಲ್ಪಸಂಖ್ಯಾತ ಸದಸ್ಯರ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಬಿಳಗುಂದ ಗ್ರಾ.ಪಂ. ಸದಸ್ಯ ಪಿ.ಎ. ಹನೀಫ್ ಮತ್ತು ಕಾರ್ಯದರ್ಶಿ, ಕೆದಮುಳ್ಳೂರು ಗ್ರಾ.ಪಂ. ಸದಸ್ಯರಾದ ಎಂ.ಎA. ಇಸ್ಮಾಯಿಲ್ ಅವರು, ವಸತಿ ರಹಿತ ಬಡವರಿಗೆ ಹೆಚ್ಚು ಉಪಯೋಗವಾಗುತ್ತಿದ್ದ ಡಾ. ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆ, ಬಸವ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳನ್ನು ರಾಜ್ಯ ಸರಕಾರ ೨೦೧೭ರಲ್ಲಿ ದಿಢೀರ್ ಆಗಿ ಸ್ಥಗಿತಗೊಳಿಸಿರುವುದು ಸರಿಯಲ್ಲ. ಇದರಿಂದ ಸಾಕಷ್ಟು ವಸತಿ ರಹಿತರಿಗೆ ಅನ್ಯಾಯವಾಗಿದ್ದು, ಇಂದಿಗೂ ಸೂರಿಲ್ಲದೆ ಪರದಾಡುವಂತಾಗಿದೆ ಎಂದು ತಿಳಿಸಿದ್ದಾರೆ.
ವಸತಿ ಯೋಜನೆಗಳ ಸೌಲಭ್ಯವನ್ನು ನಂಬಿಕೊAಡಿದ್ದ ತಾಲೂಕಿನ ವಿವಿಧೆಡೆಯ ಕೆಲವು ಫಲಾನುಭವಿಗಳು ಮನೆ ನಿರ್ಮಾಣಕ್ಕಾಗಿ ಅಡಿಪಾಯ ಸಿದ್ಧಪಡಿಸಿದ್ದರು. ಆದರೆ ಇದಕ್ಕೆಲ್ಲಾ ಸಂಬAಧಿಸಿದ ಇಲಾಖೆ ತಾಂತ್ರಿಕ ಕಾರಣದ ನೆಪವೊಡ್ಡಿ ಹಣ ಬಿಡುಗಡೆಗೊಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಇದು ಸರಕಾರ ಬಡವರಿಗೆ ಮಾಡುವ ದ್ರೋಹ ಎಂದು ಅಭಿಪ್ರಾಯಪಟ್ಟಿರುವ ಇವರು, ಸರಕಾರ ಕೂಡಲೇ ಯೋಜನೆಗಳನ್ನು ಪುನರಾರಂಭಿಸಬೇಕು. ಅಲ್ಲದೆ ಯೋಜನೆಯ ಗುರಿ ನಿಗದಿಪಡಿಸಿ ಅನುದಾನ ಬಿಡುಗಡೆಗೊಳಿಸಬೇಕು. ರಾಜ್ಯ ವಸತಿ ಸಚಿವರೂ ಆಗಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ವಿಶೇಷ ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿರುವ ೩೮ ಗ್ರಾ.ಪಂ.ಗಳಲ್ಲಿ ಒಟ್ಟು ೨೨೨೨ ವಸತಿ ರಹಿತ ಫಲಾನುಭವಿಗಳಿದ್ದಾರೆ. ಇವರೆಲ್ಲರೂ ಸರಕಾರದ ಸೂರಿಗಾಗಿ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಕಾಯುತ್ತಿದ್ದಾರೆ ಎಂದು ಅಂಕಿ ಅಂಶ ನೀಡಿರುವ ಹನೀಫ್ ಅವರು, ಮಳೆ ಹಾನಿ ಪರಿಹಾರದಲ್ಲಿ ಪುನರ್ವಸತಿ ಯೋಜನೆಯನ್ನು ಹೊರತುಪಡಿಸಿದರೆ, ವಸತಿ ರಹಿತರಿಗೆ ಕಳೆದ ೩ ವರ್ಷಗಳಿಂದ ಯಾವುದೇ ಸೌಲಭ್ಯ ದೊರೆಯದಿರುವುದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರಕಾರ ವಸತಿ ಯೋಜನೆಗಳನ್ನು ಆರಂಭಿಸುವುದರೊAದಿಗೆ ಗುರಿ ಹಂಚಿಕೆಯ ನಿಯಮಾವಳಿಯನ್ನು ಪರಿಷ್ಕರಿಸಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಒಂದೇ ರೀತಿಯ ಗುರಿ ನಿಗದಿಪಡಿಸಿದರೆ ವಸತಿ ರಹಿತ ಅಲ್ಪಸಂಖ್ಯಾತರಿಗೆ ಸೂಕ್ತ ನ್ಯಾಯ ದೊರೆಯುವುದಿಲ್ಲ. ಆದ್ದರಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ವಸತಿ ರಹಿತ ಅಲ್ಪಸಂಖ್ಯಾತರ ಜನಸಂಖ್ಯೆಗೆ ಅನುಗುಣವಾಗಿ ಯೋಜನೆಯ ಗುರಿ ನಿಗದಿಪಡಿಸಿ ಗ್ರಾ.ಪಂ.ಗೆ ಹಂಚಿಕೆ ಮಾಡಬೇಕು ಎಂದು ಒಕ್ಕೂಟದ ವತಿಯಿಂದ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಇದೀಗ ಕೋವಿಡ್ ಪ್ರತಿರೋಧದಲ್ಲಿ ನಿಸ್ವಾರ್ಥವಾಗಿ ಮಂಚೂಣಿ ಮಾರ್ಗದಲ್ಲಿ ಕೆಲಸ ಮಾಡುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ಕೆಲ ತಿಂಗಳುಗಳಿAದ ಸರಕಾರ ವೇತನ ಬಿಡುಗಡೆಗೊಳಿಸಿಲ್ಲ. ಇವರಿಗೆ ನೀಡಬೇಕಾದ ವೇತನಕ್ಕೆ ಕೂಡಲೇ ಅನುದಾನ ಬಿಡುಗಡೆಗೊಳಿಸಬೇಕು ಎಂದು ಕೂಡ ಹನೀಫ್ ಮತ್ತು ಇಸ್ಮಾಯಿಲ್ ಅವರು ಗ್ರಾ.ಪಂ. ಅಲ್ಪಸಂಖ್ಯಾತ ಸದಸ್ಯರ ಒಕ್ಕೂಟದ ಪರವಾಗಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.