ಪೆರಾಜೆ, ಜೂ. ೨: ಸಂಪಾಜೆ ಆರೋಗ್ಯ ಕೇಂದ್ರದ ಉಪ ಕೇಂದ್ರ ಪೆರಾಜೆಯ ನಿಡ್ಯಮಲೆ ಮತ್ತು ಪೆರಂಗಜೆಗಳಲ್ಲಿ ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಫಾಗಿಂಗ್ (ಕ್ರಿಮಿನಾಶಕ ಸಿಂಪಡಣೆ) ಮಾಡಲಾಯಿತು. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಮನೆಯ ಒಳಗಡೆಯೂ ಫಾಗಿಂಗ್ ನಡೆಸಲಾಯಿತು. ವಿಶೇಷವಾಗಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ರಬ್ಬರ್ ಗೆರಟೆ, ಅಡಿಕೆ ಸಿಪ್ಪೆ, ತೆಂಗಿನ ಗೆರಟೆಗಳಲ್ಲಿ ನೀರು ನಿಲ್ಲದಂತೆ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಯಿತು.