ಕಳೆದ ಮೂರು ತಿಂಗಳಿನಿAದ ಈರ್ವರು ಕಾರ್ಮಿಕರನ್ನು ಬಲಿ ತೆಗೆದುಕೊಂಡಿದ್ದಲ್ಲದೇ ಹಲವರನ್ನು ಬೆನ್ನಟ್ಟಿದೆ. ಇದಲ್ಲದೇ ಕಳೆದ ಮೂರು ದಿನಗಳ ಹಿಂದೆ ಕರಡಿಗೋಡುವಿನಲ್ಲಿ ಕಾವಲುಗಾರನೊಬ್ಬನ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿರುವ ಘಟನೆಯೂ ಕೂಡ ನಡೆದಿತ್ತು. ಈ ಹಿನ್ನೆಲೆಯಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗದ ಚಲನ-ವಲನ ಕಂಡು ಹಿಡಿಯುವ ಮೂಲಕ ಅರಣ್ಯ ಇಲಾಖೆಯು ಸರ್ಕಾರದಿಂದ ಅನುಮತಿ ದೊರೆತ ಕೂಡಲೆ ಅದನ್ನು ಸೆರೆಹಿಡಿದು ಬಂಡಿಪುರ ಸಾಕಾನೆ ಶಿಬಿರಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿದ್ದಾಪುರ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಆಹಾರವನ್ನು ಅರಿಸಿ ಕೊಂಡು ಹಲಸಿನಕಾಯಿ ತಿನ್ನಲು ಕಾಡಾನೆಗಳು ಬರುತ್ತಿದೆ. ಕಾಡಾನೆಗಳ ಹಿಂಡಿನಲ್ಲಿ ಮರಿಯಾನೆ ಗಳು ಕೂಡ ಇದ್ದು ಕೆಲವು ಕಾಡಾನೆಗಳು ಕಾಫಿ ತೋಟಗಳಲ್ಲಿ ಮರಿ ಹಾಕಿದ್ದು, ಇದರಿಂದಾಗಿ ಕಾಫಿ ತೋಟ ಬಿಟ್ಟು
ಕದಲುತ್ತಿಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರ ಬೀಟಿಕಾಡು ಭಾಗಗಳಲ್ಲಿ ಕೂಡ ಕಾಡಾನೆಗಳಿದ್ದು, ಕಾಡಾನೆಗಳ ಹಾವಳಿಯಿಂದಾಗಿ ಕಾರ್ಮಿಕರಿಗೆ ಹಾಗೂ ಬೆಳೆಗಾರರಿಗೆ ಭಯದ ವಾತಾವರಣ ಮೂಡಿದೆ. ಕಾಡಾನೆ ಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದ್ದರೂ ಕೂಡ ಮರಳಿ ರಾತ್ರಿ ಸಮಯದಲ್ಲಿ ಹಿಂತಿರುಗಿ ಲಗ್ಗೆ ಹಿಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.ವೀರಾಜಪೇಟೆ ವಲಯ ಅರಣ್ಯಾಧಿಕಾರಿರವರ ನೇತೃತ್ವದಲ್ಲಿ ಸಾಕಷ್ಟು ಬಾರಿ ಕಾಡಾನೆಗಳನ್ನು ಕಾಡಿಗೆ ಅಟ್ಟಿದ್ದರು ಕೂಡ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಆನೆಗಳು ಕಾಫಿ ತೋಟದಲ್ಲೇ ಕಾಲ ಕಳೆಯುತ್ತಿದೆ. ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಿದ್ದಲ್ಲಿ ಕೊಂಚ ಸಮಸ್ಯೆ ಕಡಿಮೆಯಾಗುತ್ತದೆ.
- ವಾಸು