ಮಡಿಕೇರಿ, ಜೂ. ೧: ಮನೆಯ ತ್ಯಾಜ್ಯನೀರು ಹೊರಹೋಗಲು ಇಂಗುಗುAಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿ, ಫಲಾನುಭವಿಗಳ ಖಾತೆಗೆ ಜಮೆ ಆಗಿದ್ದರು ಕೆಲಸ ಪೂರ್ಣಗೊಳ್ಳದ ಬಗ್ಗೆ ‘ಶಕ್ತಿ’ ತಾ. ೨೮ ರಂದು ವರದಿ ಮೂಲಕ ಗಮನಸೆಳೆದಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.
ಕೆ. ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಗುಗುAಡಿ ನಿರ್ಮಾಣಕ್ಕೆ ಹಣ ಬಿಡುಗಡೆಗೊಂಡು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಂದಾಯಗೊAಡಿತ್ತು. ಆದರೆ, ಇಂಗುಗುAಡಿ ಕಾಮಗಾರಿ ಮಾತ್ರ ಆಗಿರಲಿಲ್ಲ. ಕಾಮಗಾರಿಯಲ್ಲಿ ಹಣ ದುರ್ಬಳಕೆಯಾಗಿದೆ. ಅಂದಿನ ಗ್ರಾ.ಪಂ. ಆಡಳಿತಾಧಿಕಾರಿ ಸೇರಿದಂತೆ ಕೆಲವರು ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿ ಹಾಲಿ ಅಧ್ಯಕ್ಷ ಕೊಕ್ಕಲೇರ ಅಯ್ಯಪ್ಪ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ದೂರು ಸಲ್ಲಿಸಿದ್ದರು. ಇದೀಗ ಅಧಿಕಾರಿಗಳು ಫಲಾನುಭವಿಗಳನ್ನು ಸಂಪರ್ಕಿಸಿ ಒತ್ತಡ ಹೇರಿ ಕೆಲಸ ಮಾಡಿಸಿದ್ದಾರೆ. ತನಿಖೆಗೆ ಹೆದರಿ ಕಾಮಗಾರಿ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.