ಮಡಿಕೇರಿ ಮೇ ೩೧: ಆಯುಷ್ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವೇತನ - ಭತ್ಯೆ ತಾರತಮ್ಯ ಮಾಡಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಜೂ.೧ ರಿಂದ ರಾಜ್ಯವ್ಯಾಪಿ ಆಯುಷ್ ವೈದ್ಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸುವಂತೆ ಕೋರಿ ಕೊಡಗು ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಎಂ.ಬಿ. ಶ್ರೀನಿವಾಸ್ ಮತ್ತು ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಕೊಡಗು ಘಟಕದ ಅಧ್ಯಕ್ಷೆ ಡಾ. ಶೈಲಜಾ ಜಿ, ಡಾ. ಶುಭಾ ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಬೇಡಿಕೆಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆಯನ್ನು ಹೆಚ್ಚಿಸಿ ಆದೇಶಿಸಲಾಗಿದೆ. ಕಾಲಕಾಲಕ್ಕೆ ನೀಡಲಾಗುವ ವೇತನ-ಭತ್ಯೆ-ಸ್ಥಾನಮಾನಗಳನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ವಿಸ್ತರಿಸಬೇಕೆಂದು ಸಚಿವ ಸಂಪುಟದಲ್ಲಿ ನಿರ್ಣಯಿಸ ಲಾಗಿದೆ. ಹೀಗಿದ್ದೂ ಆಯುಷ್ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ವಿಶೇಷ ಭತ್ಯೆಯನ್ನು ನೀಡಿರುವುದು ಸರಿಯಿಲ್ಲ.

ಕೊರೊನಾ ವೈರಾಣುವಿನ ಹಾವಳಿಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪ್ರತಿಯೊಬ್ಬ ಅಲೋಪಥಿ-ಆಯುಷ್ ವೈದ್ಯಾಧಿಕಾರಿಗಳನ್ನು ವಿವಿಧ ಜವಾಬ್ದಾರಿಗಳ ನಿರ್ವಹಣೆಗೆ ನಿಯೋಜಿಸಿದೆ. ಸರ್ಕಾರವು ಹೊರಿಸಿದ ಹೊಣೆಗಾರಿಕೆಯಿಂದ ಯಾವೊಬ್ಬ ಆಯುಷ್ ವೈದ್ಯಾಧಿಕಾರಿಯೂ ಹಿಂಜರಿಯದೆ ತಮ್ಮ ಕರ್ತವ್ಯಗಳನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸು ತ್ತಿದ್ದಾರೆ. ಕೋವಿಡ್ ಆರೈಕೆ ಕೇಂದ್ರ, ತಪಾಸಣಾ ಕೇಂದ್ರ, ಚಿಕಿತ್ಸಾ ಕೇಂದ್ರ ಹೀಗೆ ಯಾವುದಲ್ಲಿಯೂ ಕರ್ತವ್ಯಕ್ಕೆ ಹಿಂದೆ ಸರಿಯದೇ. ಅತ್ಯಂತ ದಕ್ಷತೆ ಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅಲೋಪಥಿ-ಆಯುಷ್ ವೈದ್ಯಾಧಿಕಾರಿಗಳನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲ ರೀತಿಯ ಸೇವೆಗಳಿಗೂ ನಿಯೋಜಿಸಿ ಸರ್ಕಾರವು ಸರಿಸಮನಾಗಿ ಸೇವೆಯನ್ನು ಪಡೆಯುತ್ತಿದೆ. ಕೋವಿಡ್-೧೯ ಹಾವಳಿಯ ನಿಯಂತ್ರಣದಲ್ಲಿ ಆಯುಷ್ ವೈದ್ಯಾಧಿಕಾರಿಗಳು ನಿರಂತರ ಕರ್ತವ್ಯ ನಿರ್ವಹಿಸಿರುವುದಕ್ಕೆ ದಾಖಲಾತಿಗಳು ಇವೆ. ಹೀಗಿದ್ದರೂ ಪ್ರತಿ ಹಂತದಲ್ಲಿಯೂ ಕೋವಿಡ್ -೧೯ ಕೆಲಸ ಕಾರ್ಯಗಳಲ್ಲಿ ಆಯಷ್ ವೈದ್ಯರನ್ನು ಬಳಸಿಕೊಂಡು ವಿಶೇಷ ಭತ್ಯೆಯ ಪರಿಷ್ಕರಣೆಯಲ್ಲಿ ಮಾತ್ರ ಕೈಬಿಟ್ಟು ಆದೇಶ ಹೊರಡಿಸಿರುವುದು ತಾರತಮ್ಯ ನೀತಿಯಾಗಿದೆ.

ಸರ್ಕಾರಿ ವೇತನ ಮತ್ತು ಭತ್ಯೆ ತಾರತಮ್ಯವನ್ನು ನಿವಾರಿಸಬೇಕು ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸದಿದ್ದ ಪಕ್ಷದಲ್ಲಿ ಆಯುಷ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ವೈದ್ಯಾಧಿಕಾರಿಗಳು ಜೂನ್ ೧ ರಿಂದ ಕಪ್ಪು ಪಟ್ಟಿಯನ್ನು ಧರಿಸಿ, ಕರ್ತವ್ಯ ನಿರ್ವಹಿಸುತ್ತಲೇ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ.

ನಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಆದೇಶವನ್ನು ಹೊರಡಿಸದಿದ್ದಲ್ಲಿ ಜೂನ್ ೭ ರಿಂದ ಕೋವಿಡ್ ಸಂಬAಧಿತ ಎಲ್ಲ ರೀತಿಯ ಕೆಲಸ ಕಾರ್ಯಗಳನ್ನು ಬಹಿಷ್ಕರಿಸಿ, ಕೇವಲ ನಮ್ಮ ಮಾತೃ ಇಲಾಖೆಯ ಆಯುಷ್ ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳಿಗೆ ಸೀಮಿತವಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಡಾ. ಎಂ.ಬಿ. ಶ್ರೀನಿವಾಸ್ ಮತ್ತು ಡಾ. ಶೈಲಜಾ ತಿಳಿಸಿದ್ದಾರೆ.