ವೀರಾಜಪೇಟೆ, ಮೇ ೩೧: ಇಲ್ಲಿನ ಅಪ್ಪಯ್ಯಸ್ವಾಮಿ ರಸ್ತೆಯ ಹೊಸ ಬಡಾವಣೆಗೆ ರೂ. ೫ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿ ಸಾರ್ವಜನಿಕರ ಉಪಯೋಗಕ್ಕೆ ಅರ್ಪಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರ ಅನುದಾನದಿಂದ ನಿರ್ಮಾಣ ಗೊಂಡಿರುವ ರಸ್ತೆಯನ್ನು ಹೊಸ ಬಡಾವಣೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ರಾಜ ತಿಮ್ಮಯ್ಯ, ಹಿರಿಯರಾದ ಐ. ವಾಸು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯೆ ಯಶೋಧ ಅವರು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಹೊಸ ಬಡಾವಣೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ತಿಮ್ಮಯ್ಯ ಅವರು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಯವರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಬಡಾವಣೆಯ ನಿವಾಸಿ ಗಳು ಈ ಸಂದರ್ಭದಲ್ಲಿ ಸ್ಮರಿಸಿದರು.

ಹಿರಿಯರಾದ ಐ. ವಾಸು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯೆ ಯಶೋಧ ಈ ಸಂದರ್ಭ ಮಾತನಾಡಿದರು.

ಕೊರೊನಾ ಹಿನ್ನೆಲೆ ದೈಹಿಕ ಅಂತರ ಕಾಯ್ದುಕೊಂಡು ಸರಳವಾಗಿ ರಸ್ತೆ ಉದ್ಘಾಟನೆಯ ಕಾರ್ಯಕ್ರಮ ನಡೆಯಿತು. ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪಿ. ಡಾಲು ನಾಣಯ್ಯ, ಕಾರ್ಯದರ್ಶಿ ಸುಕಿನ್ ಚೀಯಣ್ಣ, ನಿರ್ದೇಶಕರುಗಳಾದ ರಮೇಶ್ ರೈ, ರಾಣಿ ಬೆಳ್ಯಪ್ಪ, ಪ್ರಸಿಲ್ಲಾ ವಿನ್ಸೆಂಟ್, ಶೃತಿಕ, ಮಾಜಿ ಅಧ್ಯಕ್ಷರಾದ ಶಿವರಾಂ ರೈ, ಬಡಾವಣೆಯ ಹಿರಿಯ ರಾದ ಗೋವಿಂದರಾಜು ನಾಯ್ಡು, ಎಂ.ಎಸ್. ರವಿ, ಸಾಲ್ಡಾನಾ, ಅಣ್ಣಯ್ಯ ಉಪಸ್ಥಿತರಿದ್ದರು.