ವೀರಾಜಪೇಟೆ, ಮೇ ೩೧: ವೀರಾಜಪೇಟೆಯ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಯನ್ನು ಅಗಲೀಕರಣ ಗೊಳಿಸಲು ಸಿದ್ದಾಪುರ ರಸ್ತೆಯಲ್ಲಿರುವ ಮಲೆತಿರಿಕೆಬೆಟ್ಟ ಅಡಚಣೆಯಾಗಿರು ವುದರಿಂದ, ಲೋಕೋಪಯೋಗಿ ಹಾಗೂ ಭೂ ಗಣಿ ಇಲಾಖೆಯ ತಜ್ಞರ ವರದಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಬೇಕು. ರಸ್ತೆ ನಿರ್ಮಾಣದಿಂದ ಮಲೆತಿರಿಕೆಬೆಟ್ಟಕ್ಕೆ ಯಾವ ರೀತಿಯ ಹಾನಿಯಾಗಲಿದೆ ಎಂದು ವರದಿಯಲ್ಲಿ ನಮೂದಿಸು ವಂತೆ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ಶ್ರೀನಿವಾಸ್ ಓಕ ಆದೇಶಿಸಿದ್ದು ಈಗಿನ ತಡೆಯಾಜ್ಞೆ ಯನ್ನು ಇನ್ನೂ ಮೂರು ತಿಂಗಳ ಕಾಲ ಮುಂದುವರೆಸಿ ಆದೇಶಿಸಿದ್ದಾರೆ.
ಈ ಹಿಂದೆ ವೀರಾಜಪೇಟೆಯ ಲೋಕೋಪಯೋಗಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ರಸ್ತೆ ಅಗಲೀಕರಣಕ್ಕೆ ಸಂಬAಧಿಸಿದAತೆ ಮಲೆತಿರಿಕೆಬೆಟ್ಟಕ್ಕೆ ಹಾನಿಯಾಗದ ರೀತಿಯಲ್ಲಿ ತಡೆಗೋಡೆ ನಿರ್ಮಿಸಿ ರಸ್ತೆ ಅಗಲೀಕರಣ ಮುಂದುವರೆಸುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ ನಂತರ ಇನ್ನೂ ತಡೆಗೋಡೆ ಕಾಮಗಾರಿ ಪ್ರಾರಂಭಿಸದಿರುವುದಕ್ಕೆ ವಿಭಾಗೀಯ ಪೀಠ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು. ಮಲೆತಿರಿಕೆಬೆಟ್ಟದ ರಕ್ಷಣೆ ಹಾಗೂ ಭದ್ರತೆಯನ್ನು ನೋಡಿ ಕೊಂಡು ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣವಾಗಬೇಕು, ಮಲೆತಿರಿಕೆ ಬೆಟ್ಟದ ಭದ್ರತೆ ಮುಖ್ಯ ಎಂದು ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿತು.
ಸರಕಾರದ ಪರ ವಕೀಲ ವಿಜಯ್ಕುಮಾರ್ ಪಾಟೀಲ್ ಅವರು ಕೊಡಗಿನಲ್ಲಿ ಮುಂಗಾರು ಮಳೆ ಆರಂಭಗೊAಡಿರುವುದರಿAದ ತಡೆಗೋಡೆ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಮುಂದಿನ ಮೂರು ತಿಂಗಳ ಅವಧಿಯ ನಂತರ ಮಳೆಗಾಲ ಮುಕ್ತಾಯಗೊಂಡ ತಕ್ಷಣ ತಡೆಗೋಡೆ ಕಾಮಗಾರಿ ಆರಂಭಿಸಲಾಗುವುದು. ಇದಕ್ಕೂ ಮುನ್ನ ಮಲೆತಿರಿಕೆ ಬೆಟ್ಟದ ರಕ್ಷಣೆಗಾಗಿ ತಜ್ಞರ ವರದಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ವಿಭಾಗೀಯ ಪೀಠದ ಮುಂದೆ ವಾದಿಸಿದರು.
ಕೊಡಗಿನ ಕಾವೇರಿ ಸೇನೆಯ ಪರವಾಗಿ ವಾದಿಸಿದ ವಕೀಲ ಎನ್.ರವೀಂದ್ರನಾಥ್ ಕಾಮತ್ ಅವರು ಮಲೆತಿರಿಕೆಬೆಟ್ಟದ ಹಾನಿಯ ಕುರಿತು ವಿಧಾನ ಪರಿಷತ್ನ ನಡಾ ವಳಿಕೆಯನ್ನು
(ಮೊದಲ ಪುಟದಿಂದ) ಜೊತೆಗೆ ಮಲೆತಿರಿಕೆಬೆಟ್ಟದಲ್ಲಿ ವಾಸಿಸುತ್ತಿರುವ ೬೬ ಕುಟುಂಬಗಳನ್ನು ರಕ್ಷಣೆಯ ದೃಷ್ಟಿಯಿಂದ ಸ್ಥಳಾಂತರಗೊಳ್ಳುವ ಪ್ರಕ್ರಿಯೆಯ ಚಿತ್ರಣವನ್ನು ವಿಭಾಗೀಯ ಪೀಠದ ಮುಂದೆ ಮಂಡಿಸಿದರು. ಈಗ ಅಪಾಯದ ಅಂಚಿನಲ್ಲಿರುವ ಮಲೆತಿರಿಕೆಬೆಟ್ಟದ ಭದ್ರತೆ, ರಕ್ಷಣೆಯಾಗಬೇಕು. ಈ ಹಿಂದೆ ದೆಹಲಿಯಿಂದ ಬಂದ ಭೂ ಗಣಿ ತಜ್ಞರು ಮಲೆತಿರಿಕೆಬೆಟ್ಟದ ಹಾನಿ ಭಾಗವನ್ನು ಗುರುತಿಸಿದ್ದಾರೆ. ಈ ಬೆಟ್ಟದಲ್ಲಿ ಕುಟುಂಬಗಳು ವಾಸಿಸದಂತೆಯೂ ಜಿಲ್ಲಾಧಿಕಾರಿಗೆ ಸಲಹೆ ನೀಡಿದ್ದಾರೆ. ಅದರಂತೆ ಸರಕಾರ ಈ ಬೆಟ್ಟದಲ್ಲಿ ವಾಸಿಸುತ್ತಿರುವ ಎಲ್ಲ ಕುಟುಂಬಗಳನ್ನು ಸ್ಥಳಾಂತರಿಸುವ ಕ್ರಮಕ್ಕೆ ಚಾಲನೆ ನೀಡಿದೆ. ಮಲೆತಿರಿಕೆಬೆಟ್ಟದಲ್ಲಿ ರಕ್ಷಣೆ ಇಲ್ಲದ ಕಾರಣ ಸರಕಾರ ಇದನ್ನು ಮನಗಂಡು ಕುಟುಂಬಗಳ ಸ್ಥಳಾಂತರಕ್ಕೆ ಮುಂದಾಗಿದೆ ಎಂದು ವಾದಿಸಿದರು. ಇಂದು ವೀಡಿಯೋ ಕಾನ್ಪರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ಶ್ರೀನಿವಾಸ್ ಓಕ ಅವರೊಂದಿಗೆ ನ್ಯಾಯಾಧೀಶ ಸೂರಜ್ ಗೋವಿಂದರಾಜ್ ಇದ್ದು ವಿಭಾಗೀಯ ಪೀಠ ವಿಚಾರಣೆಯನ್ನು ೧೪-೯-೨೦೨೧ಕ್ಕೆ ಮುಂದೂಡಿದರು. ವಕೀಲರಾದ ಟಿ.ಎನ್.ರಘುಪತಿ ಅವರು ತಡೆಯಾಜ್ಞೆ ಮುಂದುವರೆಸಲು ರವೀಂದ್ರನಾಥ್ ಕಾಮತ್ ಅವರೊಂದಿಗೆ ವಾದ ಮಂಡಿಸಿದರು.