* ವೀರಾಜಪೇಟೆ, ಜೂ. ೧: ಕೊರೊನಾ ಮಹಾಮಾರಿಯ ಎರಡನೇ ಅಲೆಯಲ್ಲಿ, ದೇಶದಾದ್ಯಂತ ವಕೀಲರು, ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ತಮ್ಮ ಉಸಿರು ಚೆಲ್ಲಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಕೋರಿ, ರಾಜ್ಯ ಉಚ್ಚನ್ಯಾಯಾಲಯದ ಸುತ್ತೋಲೆಯ ಮೇರೆಗೆ ಇಂದು ವೀರಾಜಪೇಟೆಯ ನ್ಯಾಯಾಲಯ ಸಮುಚ್ಚಯದಲ್ಲಿ ನ್ಯಾಯಾಧೀಶರು, ನ್ಯಾಯಾಲಯ ಸಿಬ್ಬಂದಿ ಹಾಗೂ ವಕೀಲರು ಮೌನಾಚರಣೆ ಮಾಡಿ ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಎರಡನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶಿವಪುತ್ರ ದಿಂಡಲ್ ಕೊಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂಜಿ ಲೋಕೇಶ್, ಸಿವಿಲ್ ನ್ಯಾಯಾಧೀಶರು ಗಳಾದ ಕೊಣಪ್ಪ ಹಾಗೂ ಮಹಾಲಕ್ಷಿö್ಮಯವರು ಹಾಜರಿದ್ದರು. ನ್ಯಾಯಾಲಯದ ಸಿಬ್ಬಂದಿಗಳು, ವಕೀಲರ ಸಂಘದ ಅಧ್ಯಕ್ಷ ಐ.ಆರ್ ಪ್ರಮೋದ್, ಕಾರ್ಯದರ್ಶಿ ದಿನೇಶ್ ಎಂ.ಕೆ., ಜಂಟಿಕಾರ್ಯದರ್ಶಿ ವಿ.ಎಸ್. ಪ್ರೀತಮ್ ಹಾಜರಿದ್ದರು.