ಗೋಣಿಕೊಪ್ಪ ವರದಿ, ಜೂ. ೧: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಏಳು ವರ್ಷದ ಅವಧಿ ಪೂರೈಸಿರುವ ಹಿನ್ನೆಲೆ ವೀರಾಜಪೇಟೆ ತಾಲೂಕು ರೈತ ಮೋರ್ಚಾದ ವತಿಯಿಂದ ಭಾನುವಾರ ಗಿಡ ನೆಟ್ಟು ಆಚರಿಸಿದರು.
ವೀರಾಜಪೇಟೆ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ಅವರು ತಮ್ಮ ತೋಟದಲ್ಲಿ ಬಿದಿರು ಗಿಡ ನೆಟ್ಟರು. ಕಾರ್ಯಕರ್ತರಾದ ಕಟ್ಟೇರ ಚೋಟು ಬೋಪಣ್ಣ, ಸಂತೋಷ್ ಕಾರ್ಮಿಕರಿಗೆ ಮಾಸ್ಕ್ ವಿತರಣೆ ಮಾಡಿದರು.