*ಮಡಿಕೇರಿ, ಮೇ ೩೧: ಪ್ರಸ್ತುತ ಕೊರೊನಾ ಸಂಕಷ್ಟದಿAದ ನಲುಗುತ್ತಿರುವವರಿಗೆ ಅಗತ್ಯ ಸಹಕಾರ ಒದಗಿಸುವ ನಿಟ್ಟಿನಲ್ಲಿ ಮಕ್ಕಂದೂರು ಕೊಡವ ಸಮಾಜ ಮುಂದಾಗಿದೆ. ಈ ವ್ಯಾಪ್ತಿಯಲ್ಲಿ ಸಂಕಷ್ಟಕ್ಕೆ ತುತ್ತಾಗಿರುವ ಎಲ್ಲಾ ಜನತೆಗೂ ಅಗತ್ಯ ಸೌಲಭ್ಯ ನೀಡಲು ಸಮಾಜದ ನಿರ್ದೇಶಕರು, ಮಹಿಳಾ ವಿಭಾಗ, ಯುವ ಘಟಕ ತೀರ್ಮಾನಿ ಸಿದ್ದು, ಈಗಾಗಲೇ ಈ ಸೇವೆ ಆರಂಭಿಸಲಾಗಿದೆ.

ಶ್ರೀ ಭದ್ರಕಾಳೇಶ್ವರಿ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಲಾಗಿದೆ. ಪ್ರಸ್ತುತ ಪಾಸಿಟಿವ್ ಬಂದ ಮನೆಯಲ್ಲಿ ಇರುವವರಿಗೆ ದಿನಬಳಕೆಯ ೮೦ ಕಿಟ್‌ಗಳನ್ನು ವಿತರಿಸಲಾಗಿದೆ. ಎಲ್ಲಾ ಜಾತಿ, ಜನಾಂಗದವರಿಗೂ ಈ ಸೇವೆ ನೀಡಲು ಸಮಾಜ ತೀರ್ಮಾನಿಸಿದ್ದು, ಇದನ್ನು ಮುಂದುವರಿಸಲಾಗುವುದು. ಇದಕ್ಕೆ ಸಹಕರಿಸುವ ದಾನಿಗಳ ನೆರವನ್ನು ಪಡೆದುಕೊಳ್ಳಲಾಗುವುದು. ಇದರ ವಿವರ ಹಾಗೂ ಖರ್ಚು ವೆಚ್ಚದ ವಿವರಗಳನ್ನು ಪಾರದರ್ಶಕ ವಾಗಿ ಬಹಿರಂಗಪಡಿಸಲಾಗುವುದು.

ಸಹಾಯ ಮಾಡುವವರು ಬ್ಯಾಂಕ್ ಖಾತೆ ಸಂಖ್ಯೆ (೧೫೫೫೧೦೧೦೦೪೯೯೭ ಏoಜಚಿvಚಿ Sಚಿmಚಿರಿಚಿ ಓಚಿಣuಡಿಚಿಟ ಆisಚಿsಣeಡಿ ಈuಟಿಜ IಈSಅ ಅoಜe: ಅಓಖಃ ೦೦೦೧೫೫೫)ಗೆ ಹಣ ಸಂದಾಯ ಮಾಡಬಹುದೆಂದು ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ ಕೋರಿದ್ದಾರೆ.