ಮಡಿಕೇರಿ, ಮೇ ೩೧: ಆನ್‌ಲೈನ್ ಚಿತ್ರ ಹಾಗೂ ಧಾರಾವಾಹಿ ಸ್ಟಿçÃಮಿಂಗ್‌ನ ದಿಗ್ಗಜ ಎನಿಸಿಕೊಂಡಿರುವ ಅಮೇರಿಕಾದ ನೆಟ್‌ಫ್ಲಿಕ್ಸ್ ಸಂಸ್ಥೆಯ ‘ಟ್ಯಾಲೆಂಟ್ ಎಕ್ಸ್ಪೀರಿಯನ್ಸ್ ಹಾಗೂ ಆಪರೇಷನ್ಸ್’ ವಿಭಾಗದ ಉಪಾಧ್ಯಕ್ಷರಾಗಿ ಜಿಲ್ಲೆಯ ಪಾಲೇಕಂಡ ನಂಜಪ್ಪ ಅವರು ಇತ್ತೀಚೆಗೆ ನೇಮಕಗೊಂಡಿದ್ದಾರೆ. ೨೦೦೩ ರಲ್ಲಿ ಇನ್‌ಫೋಸಿಸ್ ಸಾಫ್ಟ್ವೇರ್ ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಇವರು ೨೦೦೭ ರಲ್ಲಿ ಖ್ಯಾತ ಸಂಸ್ಥೆ ಗೂಗಲ್ ಸೇರಿದರು.

ನೆಟ್‌ಫ್ಲಿಕ್ಸ್ ಉಪಾಧ್ಯಕ್ಷರಾಗಿ ಪಾಲೇಕಂಡ ನಂಜಪ್ಪ

(ಮೊದಲ ಪುಟದಿಂದ) ಸುಮಾರು ೧೦ ವರ್ಷಗಳ ಕಾಲ ಇಲ್ಲಿ ಕಾರ್ಯನಿರ್ವಹಿಸಿದ ಇವರು ಗೂಗಲ್‌ನ ಹ್ಯೂಮನ್ ರಿಸೋರ್ಸ್ ವಿಭಾಗದ ಮುಖ್ಯ ಬ್ಯುಸಿನೆಸ್ ಪಾಲುದಾರರಾಗಿ ಕೂಡ ಕಾರ್ಯನಿರ್ವಹಿಸಿದ್ದರು. ೨೦೧೭ ರಿಂದ ೨೦೨೧ ಮೇ ವರೆಗೆ ಊಬರ್ ಸಂಸ್ಥೆಯಲ್ಲಿಯೂ ಕಾರ್ಯನಿರ್ವಹಿಸಿದರು. ಇದೀಗ ನೆಟ್‌ಫ್ಲಿಕ್ಸ್ ಸಂಸ್ಥೆಯ ‘ಟ್ಯಾಲೆಂಟ್ ಎಕ್ಸ್ಪೀರಿಯನ್ಸ್ ಹಾಗೂ ಆಪರೇಷನ್ಸ್’ ವಿಭಾಗದ ಉಪಾಧ್ಯಕ್ಷರಾಗಿ ತಮ್ಮ ವೃತ್ತಿ ಜೀವನ ಮುಂದುವರಿಸಲಿದ್ದಾರೆ.

ಮೂಲತಃ ವೀರಾಜಪೇಟೆಯ ಕದನೂರಿನವರಾದ ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಪಾಲೇಕಂಡ ಮುತ್ತು, ಶಾಂತಿ ದಂಪತಿಯ ಪುತ್ರ ನಂಜಪ್ಪ ಅವರು ಅಮೇರಿಕಾದ ಕ್ಯಾಲಿಫೋರ್ನಿಯಾದಲಿ ನೆಲೆಸಿದ್ದಾರೆ.